Advertisement

ಆನೆ ದಂತ ಮತ್ತು ಚಿರತೆ ಉಗುರುಗಳ ವಶ: ಆರು ಜನರ ಬಂಧನ

09:49 AM Jan 26, 2020 | keerthan |

ಶಿವಮೊಗ್ಗ: ತೀರ್ಥಹಳ್ಳಿ ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿಗಳು ಎರಡು ಕಡೆ ದಾಳಿ ನಡೆಸಿ ಒಂದು ಆನೆ ದಂತ ಹಾಗೂ ಚಿರತೆ ಉಗುರುಗಳನ್ನು ವಶಪಡಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಜನರನ್ನುಬಂಧಿಸಲಾಗಿದೆ.

Advertisement

ಚಿಕ್ಕಮಗಳೂರು ತಾಲೂಕು ನಾಲೂರು ಗ್ರಾಮದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಒಂದು ಆನೆ ದಂತವನ್ನು ವಶಪಡಿಸಿದ್ದಾರೆ. ಆನೆ ದಂತ ಇಟ್ಟುಕೊಂಡಿದ್ದ ನಾಲೂರು ಗ್ರಾಮದ ರಾಜಗೋಪಾಲ ಹಾಗೂ ನೆರಟೂರು ಗ್ರಾಮದ ಕೃಷ್ಣಮೂರ್ತಿ ಎಂಬವರನ್ನು ಬಂಧಿಸಲಾಗಿದೆ.

ಸಾಗರ ತಾಲೂಕಿನ ತುಮುರಿ ಗ್ರಾಮದಲ್ಲಿ ಹದಿಮೂರು ಚಿರತೆ ಉಗುರುಗಳನ್ನು ವಶಪಡಿಸಲಾಗಿದೆ. ಇವುಗಳನ್ನು ಇಟ್ಟುಕೊಂಡಿದ್ದ ದೇವರಾಜ, ಉದಯ ಕುಮಾರ್, ಸುಧಾಕರ ಮತ್ತು ನವೀನ ಎಂಬುವರ ಬಂಧಿಸಿಲಾಗಿದೆ. ಆರೋಪಿಗಳನ್ನು ತೀರ್ಥಹಳ್ಳಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಅರಣ್ಯ ಸಂಚಾರಿ ದಳದ ಡಿಎಫ್ ಒ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಎಸಿಎಫ್ ಬಾಲಚಂದ್ರ, ಅರಣ್ಯ ಅಧಿಕಾರಿಗಳಾದ ಸಂಜಯ, ರೇವಣ್ಣ ಸಿದ್ದಯ್ಯ, ಹಿರೇಮಠ, ಹನುಮಂತರಾಯ, ಮಹದೇವ, ಎಲ್ಲಪ್ಪ  ತಂಡದಿಂದ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.