Advertisement

5 ತಿಂಗಳ ಶಿಶುವಿನ ಔಷಧ ಮೇಲಿನ 6 ಕೋಟಿ ತೆರಿಗೆ ಮನ್ನಾ ಮಾಡಿದ ಕೇಂದ್ರ ಸರಕಾರ

03:07 AM Feb 11, 2021 | Team Udayavani |

ಮುಂಬಯಿ: ನರಕೋಶಗಳಿಗೆ ಸಂಬಂಧಿಸಿದ ಸ್ಪೈನಲ್‌ ಮಸ್ಕಾಲರ್‌ ಅಟ್ರೋಫಿ (ಎಸ್‌ಎಂಎ) ಕಾಯಿಲೆಯಿಂದ ಬಳಲುತ್ತಿರುವ 5 ತಿಂಗಳ ಬಾಲೆಯ ಹೆತ್ತವರ ಮನವಿಯಂತೆ ಎಸ್ಎಂಎ ಔಷಧದ ಮೇಲಿದ್ದ 6 ಕೋಟಿ ರೂ. ಆಮದು ಸುಂಕ ಮತ್ತು ಜಿಎಸ್‌ಟಿಯನ್ನು ಕೇಂದ್ರ ಸರಕಾರ ಮನ್ನಾ ಮಾಡಿದೆ.

Advertisement

5 ತಿಂಗಳ ಬಾಲೆ ತೀರಾ ಕಾಮತ್‌ ಎಸ್‌ಎಂಎ- ಟೈಪ್‌ 1 ಕಾಯಿಲೆಯಿಂದ ಬಳಲುತ್ತಿದ್ದಾಳೆ. ಅಮೆರಿಕದಿಂದ ಆಮದು ಮಾಡಿಕೊಳ್ಳುವ “ಝೋಲ್ಗೆನ ಸ್ಮಾ’ ಔಷಧ ಬಹಳ ದುಬಾರಿಯಾಗಿದ್ದು, ಇದರ ವೆಚ್ಚ 16 ಕೋಟಿ ರೂ.! ಆಮದು ಸುಂಕ, ಜಿಎಸ್‌ಟಿ ಕಾರಣದಿಂದ 6 ಕೋಟಿ ರೂ. ಇದರಲ್ಲಿ ಸೇರ್ಪಡೆಯಾಗಿದ್ದ ಕಾರಣ, ನೊಂದ ಪೋಷಕರು ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. “ಜೀವನಪರ್ಯಂತ ದುಡಿದರೂ ಈ ತೆರಿಗೆಯಷ್ಟು ದುಡಿಮೆ ಕಾಣುವುದು ನಮ್ಮಿಂದ ಅಸಾಧ್ಯ’ ಎಂದಿದ್ದರು.

ಪತ್ರ ವೈರಲ್‌ ಆಗಿದ್ದಲ್ಲದೆ, ಕಂದನ ಪೋಷಕರ ಮನವಿಗೆ ಮಾಜಿ ಸಿಎಂ ದೇವೇಂದ್ರ ಫ‌ಡ್ನವೀಸ್‌ ಕೂಡ ಧ್ವನಿಗೂಡಿಸಿದ್ದರು. ಇದೀಗ ಈ ಮನವಿಗೆ ಕೇಂದ್ರ ಸರಕಾರ ಸ್ಪಂದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next