Advertisement

ಉ.ಪ್ರ: ಹದಿಹರೆಯದ ಯುವ ಪ್ರಣಯಿಗಳಿಂದ ಆತ್ಮಹತ್ಯೆ

03:50 PM Feb 27, 2018 | Team Udayavani |

ಪ್ರತಾಪಗಢ, ಉತ್ತರ ಪ್ರದೇಶ : ಈ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಮವಾಯಿ ಎಂಬಲ್ಲಿನ ರೈಲು ಹಳಿಯ ಮೇಲೆ ಇಂದು ಮಂಳವಾರ ಬೆಳಗ್ಗೆ  16ರ ಹರೆಯದ ಹುಡುಗಿ ಮತ್ತು ಆಕೆಯ ಬಾಯ್‌ ಫ್ರೆಂಡ್‌ ಶವ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಕುಂದಾ ಪೊಲೀಸ್‌ ಸ್ಟೇಶನ್‌ ವ್ಯಾಪ್ತಿ ಪ್ರದೇಶದಲ್ಲಿನ ರೈಲು ಹಳಿಯ ಮೇಲೆ ಛಿದ್ರ ಛಿದ್ರವಾಗಿ ಬಿದ್ದಿದ್ದ ಆರತಿ (16) ಮತ್ತು ಮೋನು (17) ಶವಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. 

ಈ ಯುವ ಜೋಡಿಗೆ ಪರಸ್ಪರ ಪ್ರೇಮ ಸಂಬಂಧ ಇತ್ತೆಂದು ಅಡಿಶನಲ್‌ ಪೊಲೀಸ್‌ ಸುಪರಿಂಟೆಂಡೆಂಟ್‌ (ಪಶ್ಚಿಮ) ಬಸಂತ್‌ ಲಾಲ್‌ ತಿಳಿಸಿದ್ದಾರೆ.

ಈ ಯುವ ಜೋಡಿ ಮಾಣಿಕ್‌ಪುರ ನಿವಾಸಿಗಳು ಮತ್ತು ಅನುಕ್ರಮವಾಗಿ 9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವವರಾಗಿದ್ದಾರೆ. ತಮ್ಮ ಪ್ರೇಮ ಸಂಬಂಧ ಸಫ‌ಲವಾಗವಾಗದೆಂಬ ಹತಾಶೆಯಲ್ಲಿ ಇವರು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next