Advertisement

ಯುವ ಪೈಲಟ್‌ ಒಬ್ಬಳು 19ನೇ ವಯಸ್ಸಿಗೇ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾಳೆ!

12:35 AM Dec 12, 2021 | Team Udayavani |

ಸಿಯೋಲ್‌: ಸೋಲೋ ಟ್ರಿಪ್‌ ಕನಸನ್ನು ಹೊತ್ತಿದ್ದ ಯುವ ಪೈಲಟ್‌ ಒಬ್ಬಳು ವಿಶ್ವ ದಾಖಲೆಯನ್ನೇ ಬರೆಯಲು ಮುಂದಾಗಿದ್ದಾಳೆ.

Advertisement

ಬೆಲ್ಜಿಯಂನ ಪೈಲಟ್‌ ದಂಪತಿಯ ಮಗಳಾಗಿರುವ ಝರಾ ರುಥರ್‌ಫೋರ್ಡ್‌ (19) ಆಗಸ್ಟ್‌ ನಲ್ಲಿ ಬೆಲ್ಜಿಯಂನ ವಿಮಾನ ನಿಲ್ದಾಣದಿಂದ ಬೆನ್ಪೋಕ್‌ ಶಾರ್ಕ್‌ ಅಲ್ಟ್ರಾಲೈಟ್‌ ವಿಮಾನದಲ್ಲಿ ಒಂಟಿಯಾಗಿ ಪ್ರಯಾಣ ಆರಂಭಿಸಿದ್ದಾಳೆ.

ಈವರೆಗೆ 5 ಖಂಡಗಳ 52 ದೇಶ ತಿರುಗಿ, ಸುಮಾರು 51,000 ಕಿ.ಮೀ. ಪ್ರಯಾಣ ಪೂರ್ಣಗೊಳಿಸಿರುವ ಆಕೆ ಶನಿವಾರ ದಂದು ಸಿಯೋಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾಳೆ.

ಇದನ್ನೂ ಓದಿ:ಪಂಚ ನದಿ ಯೋಜನೆಗೆ ಮೋದಿ ಚಾಲನೆ; 45 ವರ್ಷಗಳ ಬಳಿಕ ಪಶ್ಚಿಮ ಉ.ಪ್ರ.ದ ಪ್ರಮುಖ ಯೋಜನೆಗೆ ಚಾಲನೆ

ಪ್ರಯಾಣ ಪೂರ್ಣಗೊಂಡಾಗ ಒಂಟಿಯಾಗಿ ವಿಶ್ವ ಸುತ್ತಿದ ಅತೀ ಚಿಕ್ಕ ವಯಸ್ಸಿನ ಮಹಿಳೆ ಎಂಬ ದಾಖಲೆ ಬರೆಯಲಿದ್ದಾಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next