Advertisement

ಡಬ್ಲ್ಯುಟಿಎ ಫೈನಲ್ಸ್‌ ಅರ್ಹತೆ ಪಡೆದ ಕೊಕೊ ಗಾಫ್

11:09 PM Oct 21, 2022 | Team Udayavani |

ನ್ಯೂಯಾರ್ಕ್: ಅಮೆರಿಕದ ಯುವ ಆಟಗಾರ್ತಿ ಕೊಕೊ ಗಾಫ್ ಮೊದಲ ಸಲ “ಡಬ್ಲ್ಯುಟಿಎ ಫೈನಲ್ಸ್‌’ನಲ್ಲಿ ಆಡುವ ಅರ್ಹತೆ ಸಂಪಾದಿಸಿದ್ದಾರೆ.

Advertisement

ಅವರೀಗ ಫ್ರಾನ್ಸ್‌ನ ಕ್ಯಾರೋಲಿನ್‌ ಗಾರ್ಸಿಯಾ, ನಂ.1 ಐಗಾ ಸ್ವಿಯಾಟೆಕ್‌, ಓನ್ಸ್‌ ಜೆಬ್ಯುರ್‌ ಮತ್ತು ಜೆಸ್ಸಿಕಾ ಪೆಗುಲಾ ಜತೆ ಫೈನಲ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

18 ವರ್ಷ, 239 ದಿನ ಪ್ರಾಯದ ಕೊಕೊ ಗಾಫ್ 2005ರ ಬಳಿಕ ಈ ಪ್ರತಿಷ್ಠಿತ ಕೂಟದಲ್ಲಿ ಭಾಗವಹಿಸುತ್ತಿರುವ ಅತೀ ಕಿರಿಯ ಆಟಗಾರ್ತಿ. ಅಂದು ಮರಿಯಾ ಶರಪೋವಾ 18 ವರ್ಷ, 208ನೇ ದಿನದಲ್ಲಿ ಫೈನಲ್ಸ್‌ ಆಡಿದ್ದರು.

ಕ್ಯಾರೋಲಿನ್‌ ಗಾರ್ಸಿಯಾ 2017ರ ಬಳಿಕ ಮೊದಲ ಸಲ ಡಬ್ಲ್ಯುಟಿಎ ಫೈನಲ್ಸ್‌ ಆಡಲಿದ್ದಾರೆ. ಅಂದು ಅವರು ಈ ಟೂರ್ನಿಯ ಸೆಮಿಫೈನಲ್‌ ತನಕ ಸಾಗಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next