Advertisement

ಇತಿಹಾಸ ಮೇಲೆ ಬೆಳಕು ಚೆಲ್ಲಿದ “ತೀನ್‌ ಕಂದಿಲ್‌’ನಾಟಕ

02:17 PM Oct 15, 2018 | |

ರಾಯಚೂರು: ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಸಂಜೆ ರಂಗತೇರು-2018ರ ನಿಮಿತ್ತ ಪ್ರದರ್ಶನಗೊಂಡ ತೀನ್‌ ಕಂದಿಲ್‌ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು.

Advertisement

ಸಮುದಾಯ ರಾಯಚೂರು ಸಂಘಟನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತೀನ್‌ ಕಂದಿಲ್‌ ಇತಿಹಾಸ, ಸುತ್ತಲಿನ ಪ್ರದೇಶದಲ್ಲಿನ ಅಂದಿನ -ಇಂದಿನ ಜನಜೀವನ, ಕೋಟೆ ನಿರ್ಮಾಣದಲ್ಲಿ ರುದ್ರಮ್ಮದೇವಿ ಪಾತ್ರ, ಮಾವಿನಕೆರೆ, ಅಂದಿನ ಕಾಲದಲ್ಲೂ ತಾಂಡವವಾಡುತ್ತಿದ್ದ ಜಾತಿ ಪಿಡುಗು ಸೇರಿ ಹತ್ತು ಹಲವು ಆಯಾಮಗಳನ್ನು ಒಳಗೊಂಡ ನಾಟಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು. ಜಾತಿ ವಿಷಬೀಜಕ್ಕೆ ಪ್ರೇಮಿಗಳು ಮರ್ಯಾದೆ ಹತ್ಯೆಗೀಡಾಗುವ ಕಥಾ ಹಂದರ ನಾಟಕದ ತಿರುಳಾಗಿತ್ತು.

ರಮೇಶ ಆರೋಲಿ ನಾಟಕ ರಚಿಸಿದ್ದು, ಸಮುದಾಯದ ಅಧ್ಯಕ್ಷ ವಿ.ಎನ್‌.ಅಕ್ಕಿ, ಲಕ್ಷ್ಮಣ ಮಂಡಲಗೇರಾ, ಯಲ್ಲಯ್ಯ, ನರಸಿಂಹಲು, ಹನುಮಂತ, ಶರಣು ಸಿಂಧನೂರು, ಹುಸೇನಿ, ಶಿವರಾಜ, ಸಂತೋಷ, ಸಾಗರ, ರೇಣುಕಾ, ರಾದಿಕಾ ಪಾಟೀಲ, ಶ್ರೀದೇವಿ, ರಂಗಸ್ವಾಮಿ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.

ಪ್ರವೀಣರೆಡ್ಡಿ ಗುಂಜಹಳ್ಳಿ ನಾಟಕ ನಿರ್ದೇಶಿಸಿದ್ದಾರೆ. ಎಸ್‌.ಪಿ. ಮಂಜುನಾಥ ಚಳ್ಳಿಕೆರೆ ಸಂಗೀತ ನೀಡಿದರು. ರಂಗವಿನ್ಯಾಸ ಕುಮಾರ ಪಿ.ಎಸ್‌., ಸುರೇಶ ಚಿಕ್ಕಸುಗೂರು, ಉಮೇಶ ಬಡಿಗೇರ ಜೇಗರಕಲ್‌ ರಂಗ ಸಜ್ಜಿಕೆ ಸೇವೆ ನೀಡಿದರು. ನಿರ್ಮಲಾ ವೇಣುಗೋಪಾಲ ಹಿನ್ನೆಲೆ ಗಾಯನ ಒದಗಿಸಿದರು. ಕಲಬುರಗಿಯ ಸಾಜೀದ್‌ ಶೇಖ್‌, ವೆಂಕಟನರಸಿಂಹಲು ಬೆಳಕು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next