Advertisement

ತಂತ್ರಜ್ಞಾನ: ಧರ್ಮಸ್ಥಳ ಯೋಜನೆ ನಬಾರ್ಡ್‌ಗಿಂತ ಮುಂದು: ಡಾ|ಬನ್ವಾಲಾ

03:35 AM Feb 16, 2017 | Team Udayavani |

ಬೆಳ್ತಂಗಡಿ: ದೇಶದಲ್ಲಿ 80 ಲಕ್ಷ ಸ್ವಸಹಾಯ ಸಂಘಗಳಿದ್ದು, ನಬಾರ್ಡ್‌ ಅದರ ವ್ಯವಹಾರವನ್ನು ಡಿಜಿಟಲೈಸ್‌ ಮಾಡಲು ಕಾರ್ಯಪ್ರವೃತ್ತವಾಗಿದೆ. ರಾಷ್ಟ್ರ ಮಟ್ಟದಲ್ಲಿ ಸ್ವಸಹಾಯ ಸಂಘಗಳಿಗೆ ಇಂತಹ ತಾಂತ್ರಿಕ ಕಾರ್ಯಕ್ರಮಗಳನ್ನು ಅಳವಡಿಸಬೇಕು. ತಂತ್ರಜ್ಞಾನದ ವಿಚಾರದಲ್ಲಿ ಧರ್ಮಸ್ಥಳ ಯೋಜನೆ ನಬಾರ್ಡ್‌ಗಿಂತಲೂ ಮುಂದಿದೆ ಎಂದು ನಬಾರ್ಡ್‌ ಅಧ್ಯಕ್ಷ ಡಾ| ಹರ್ಷಕುಮಾರ್‌ ಬನ್ವಾಲಾ ಹೇಳಿದರು.

Advertisement

ಅವರು ಬುಧವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ವ್ಯವಹಾರ ನಿರ್ವಹಣೆಗೆ ರೂಪಿಸಿದ ಮೊಬೈಲ್‌ ಆ್ಯಪ್‌ ಬಿಡುಗಡೆಗೊಳಿಸಿ ಮಾತನಾಡಿದರು.
ಸಣ್ಣ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು. ಎಲ್ಲೆಲ್ಲೂ ನೀರಿನ ಅಭಾವ ತಾಂಡವವಾಡುತ್ತಿದ್ದು, ಎಲ್ಲರೂ ನೀರಿನ ಮಿತ ಬಳಕೆ ಮಾಡಬೇಕು. ಅಪವ್ಯಯ ಮಾಡಬಾರದು. ಕೃಷಿಗೆ ದೀರ್ಘಾವ ನೀರಿನ ಸೌಕರ್ಯಕ್ಕಾಗಿ ಹನಿ ನೀರಾವರಿ ಬಳಸಲು ಸರಕಾರ ಹಾಗೂ ನಬಾರ್ಡ್‌ ಪ್ರೋತ್ಸಾಹ ನೀಡುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ, ಧರ್ಮದ ತಳಹದಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಫಲಾನುಭವಿಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಧಿಗಾಗಿ ಮಾಡುತ್ತಿರುವ ಸೇವೆ-ಸಾಧನೆ ಶ್ಲಾಘನೀಯ. ಎಲ್ಲರೂ ಇದನ್ನು ಅನುಸರಿಸಲು ಮಾದರಿಯಾಗಿದೆ. ಇಂತಹ ಸಂಸ್ಥೆಗಳು ವಿರಳ ಎಂದರು.

ಪ್ರಗತಿ: ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ಎಂ.ಐ. ಗಣಗಿ, ನಮ್ಮ ಸುತ್ತ-ಮುತ್ತ ಇರುವ ನೆಲ, ಜಲ, ಅರಣ್ಯ ಮೊದಲಾದ ಪ್ರಾಕೃತಿಕ ಸಂಪನ್ಮೂಲಧಿಗಳ ಸದುಪಯೋಗ ಮಾಡಿದರೆ ಉತ್ತಮ ಪ್ರಗತಿ ಸಾಧಿಸಧಿಬಹುದು ಎಂದರು.
ಕಾರ್ಪೊರೇಶನ್‌ ಬ್ಯಾಂಕ್‌ನ ಆಡಳಿತ ನಿರ್ದೇಶಕ ಜಿ.ಎಂ. ಭಗತ್‌ ಟ್ಯಾಬ್ಲೆಟ್‌ ಫೋನ್‌ ವಿತರಿಸಿದರು.

ಬಡತನ ದೂರವಾಗಬೇಕು: ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ದೇಶದಲ್ಲಿ ಬಡತನ ದೂರಧಿವಾಗಬೇಕು ಎಂದು ಸರಕಾರಧಿಗಳು ಕಾರ್ಯಕ್ರಮ ಹಮ್ಮಿಧಿಕೊಳ್ಳುತ್ತಿವೆ. ಇದರ ಜತೆಗೆ ಧರ್ಮಸ್ಥಳದಿಂದ ಅಳಿಲ ಸೇವೆ. ನಾವು ಜನರಲ್ಲಿ ಆತ್ಮಧಿವಿಶ್ವಾಸ ತುಂಬಿ, ಧೈರ್ಯ ನೀಡಿ, ಸಾಧನೆಯ ದಾರಿ ತೋರಿಸಿ ಯಶ ಸಾಧಿಸಲು ಪ್ರೇರಣೆ ನೀಡುತ್ತೇವೆ ಎಂದರು. ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಹಾಗೂ ಮಾದರಿ ಬೆಳ್ತಂಗಡಿ ತಾಲೂಕು ಆಗಿದ್ದು ಇಂದು ಎಲ್ಲರೂ ಸ್ವಾವಲಂಬಿಗಳಾಗಿದ್ದಾರೆ. ಜೀವನ ಮಟ್ಟ ಸುಧಾರಣೆ ಆದಂತೆ ವೆಚ್ಚವೂ ಹೆಚ್ಚಾಗುತ್ತದೆ. ದುಂದುವೆಚ್ಚ ಮಾಡದೆ ಭವಿಷ್ಯದ ಬಗ್ಗೆ ಚಿಂತಿಸಿ ಸರಿಯಾಗಿ ವ್ಯವಹಾರದ ಲೆಕ್ಕಪತ್ರ ನಿರ್ವಹಣೆ ಮಾಡಬೇಕು. ದುಶ್ಚಟಕ್ಕೆ ಬಲಿಯಾಗಬಾರದು ಎಂದರು 
.
ಹೇಮಾವತಿ ವಿ. ಹೆಗ್ಗಡೆ, ರಾಜ್ಯ ಸಣ್ಣ ಕೈಗಾರಿಕಾ ನಿಗಮ ಅಧ್ಯಕ್ಷ ಕೆ. ವಸಂತ ಬಂಗೇರ, ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ ಡಿ. ಸಂಪತ್‌ ಸಾಮ್ರಾಜ್ಯ, ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌, ಆರ್ಥಿಕ ನಿರ್ದೇಶಕ ಶಾಂತಾರಾಮ ಪೈ ಉಪಸ್ಥಿತರಿದ್ದರು. ನಿರ್ದೇಶಕಿ ಮನೋಧಿರಮಾ ಭಟ್‌, ಕೃಷಿ ಮೇಲ್ವಿಚಾರಕ ರಾಮ್‌ ಕುಮಾರ್‌ ನಿರ್ವಹಿಸಿ, ಯೋಜನಾಧಿಕಾರಿ ರೂಪಾ ಜೈನ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next