Advertisement

PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ

01:38 AM Dec 27, 2024 | Team Udayavani |

ಹೊಸದಿಲ್ಲಿ: ದೇಶದ ಪ್ರಗತಿಯಲ್ಲಿ ಯುವಜನಾಂಗದ ಪಾತ್ರವು ಮಹತ್ವದ್ದಾಗಿದ್ದು, ಕೃತಕ ಬುದ್ಧಿಮತ್ತೆ, ಮಷೀನ್‌ ಲರ್ನಿಂಗ್‌ ಇತ್ಯಾದಿ ಮುಂಚೂಣಿ ತಂತ್ರಜ್ಞಾನಗಳ ಕೌಶಲಗಳನ್ನು ಅವರು ಮೈಗೂಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಗುರುವಾರ ನಡೆದ ವೀರ ಬಾಲ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರದ ಯುವ ಕೇಂದ್ರಿತ ನೀತಿಗಳನ್ನು ಪ್ರಸ್ತಾವಿಸುತ್ತಾ, ವಿವಿಧ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಸ್ವೀಕರಿಸಬೇಕು ಹಾಗೂ ಕ್ಷಿಪ್ರ ಬದಲಾವಣೆಗಳಿಗೆ ಯುವಜನತೆ ಒಗ್ಗಿಕೊಳ್ಳಬೇಕು.

ನಮ್ಮ ಯುವಕರನ್ನು ಭವಿಷ್ಯದ ಸವಾಲುಗಳಿಗೆ ನಾವು ಸಿದ್ಧಪಡಿಸಬೇಕು ಎಂದು ಹೇಳಿದರು. ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ, ದೇಶಕ್ಕಿಂತ ಮಿಗಿಲಾದದ್ದು ಏನೂ ಇಲ್ಲ  ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next