Advertisement

ಆಟೋಮೊಬೈಲ್‌ ಸುರಕ್ಷತೆಗೆ ಟೆಕ್ನಾಲಜಿ

11:42 AM Nov 13, 2017 | |

ಇಸ್ರೇಲಿನಲ್ಲಿ ಹೂಡಿಕೆ: ರೊಬೋಟ್‌ ಹಾಗೂ ಆಟೋಮೊಬೈಲ್‌ ತಂತ್ರಜ್ಞಾನ ಅಭಿವೃದ್ಧಿಗಾಗಿ ಜಪಾನ್‌ನ ಕಂಪನಿ ಟೊಯೋಟಾ ಕಾರ್ಪೊರೇಷನ್‌ ಇಸ್ರೇಲಿನಲ್ಲಿ ಹೆಚ್ಚಿಸಿಕೊಳ್ಳುವ ಹೂಡಿಕೆ ಮಾಡಿದೆ. ಭವಿಷ್ಯದ ಕಾರುಗಳ ತಂತ್ರಜ್ಞಾನ ಉದ್ದೇಶವಾಗಿರಿಸಿಕೊಂಡು ಹೆಚ್ಚಾಕಡಿಮೆ 14ದಶಲಕ್ಷ ಡಾಲರ್‌ ಹಣ ಹೂಡಿಕೆ ಮಾಡಿದೆ.

Advertisement

ಪ್ರಮುಖ 10 ತಂತ್ರಜ್ಞಾನಗಳು: ಕಾರು ಮಾರುಕಟ್ಟೆಯಲ್ಲಿ ವಿಶೇಷವಾಗಿ ಕೇಳಬಹುದಾದ ಹತ್ತು ಬದಲಾವಣೆಗಳನ್ನು ಪಟ್ಟಿ ಮಾಡುವುದಾದರೆ ಇವು ಪ್ರಮುಖ ಎನಿಸಿಕೊಳ್ಳಲಿವೆ. ಮಾರುಕಟ್ಟೆ ವೇಳೆ ತಂತ್ರಜ್ಞಾನವೇ ಆಕರ್ಷಣೆಯ ಅಂಶವಾಗಲಿವೆ.

1. ಅಟೋನಮಸ್‌ ವೆಹಿಕಲ್‌
2. ಡ್ರೈವರ್‌ ಓವರ್‌ರೈಡ್‌ ಸಿಸ್ಟಮ್‌
3. ಬಯೋಮೆಟ್ರಿಕ್‌ ವೆಹಿಕಲ್‌ ಎಕ್ಸಸ್‌
4. ಕಾಂಪ್ರನ್ಸಿàವ್‌ ವೆಹಿಕಲ್‌ ಟ್ರ್ಯಾಕಿಂಗ್‌
5. ಆ್ಯಕ್ಟಿವ್‌ ವಿಂಡೋ ಡಿಸ್ಪೆಪ್ಲೇ
6. ರಿಮೋಟ್‌ ವೆಹಿಕಲ್‌ ಶಡೌನ್‌
7. ಯಾಕ್ಟಿವ್‌ ಹೆಲ್ತ್‌ ಮಾನಿಟರಿಂಗ್‌
8. 4 ಸಿಲಿಂಡರ್‌ ಸೂಪರ್‌ ಕಾರ್‌
9. ಸ್ಮಾರ್ಟ್‌/ಪರ್ಸನಲಾಯ್ಸ ಕಾರ್‌ ಮಾರ್ಕೆಟಿಂಗ್‌
10. ರೀ ಕಾನ್ಫಿಗರೇಬಲ್‌ ಬಾಡಿ ಪ್ಯಾನಲ್‌

ವಿ2ವಿ ಕಮ್ಯುನಿಕೇಷನ್‌: ಬರುವ ದಿನಗಳಲ್ಲಿ ಕ್ರಾಂತಿ ನಡೆಸಬಹುದಾದ ತಂತ್ರಜ್ಞಾನ ಇದು. ಈಗಾಗಲೇ ಅಮೆರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ಹೆಚ್ಚು ಉಪಯೋಗಕ್ಕೆ ಬರುವ ವೆಹಿಕಲ್‌ ಟು ವೆಹಿಕಲ್‌ ಕಮ್ಯುನಿಕೇಷನ್‌ ತಂತ್ರಜ್ಞಾನದಿಂದ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಅಪಘಘಾತ ಸಾಧ್ಯತೆಯನ್ನು ತುಸು ಮೊದಲೇ ಚಾಲಕನಿಗೆ ಸಂದೇಶದ ಮೂಲಕ ತಿಳಿಸುವ ತಂತ್ರಜ್ಞಾನ ಇದಾಗಿದೆ. ಚಾಲಕ ಅಲರ್ಟ್‌ ಆಗಿದ್ದರೆ ಅಪಘಾತ ತಪ್ಪಿಸಬಹುದು. 

ಕಾರು ನಿಲುಗಡೆಗೆ ಏರ್‌ಬ್ಯಾಗ್ಸ್‌: ಈಗಾಗಲೇ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಏರ್‌ಬ್ಯಾಗ್‌ ಕಡ್ಡಾಯಕ್ಕೆ ಸಂದೇಶ ರವಾನಿಸಿದೆ. ಕಾರು ತಯಾರಿಕಾ ಕಂಪನಿಗಳು ಈಗ ಕಾರಿನೊಳಗಿನ ವಿನ್ಯಾಸದಲ್ಲಿ ಏರ್‌ ಬ್ಯಾಗ್‌ಗಳ ಬಳಕೆಗೆ ಒತ್ತುಕೊಡುತ್ತಿವೆ. ಅಂದರೆ ಕರ್ಟನ್‌ ಏರ್‌ಬ್ಯಾಗ್ಸ್‌, ಮೊಣಕಾಲಿನ (ನೀ) ಏರ್‌ಬ್ಯಾಗ್ಸ್‌, ಸೀಟ್‌ ಏರ್‌ಬ್ಯಾಗ್ಸ್‌ಗಳ ಅಳವಡಿಕೆ ಸಾಮಾನ್ಯ ಎನ್ನುವ ರೀತಿಯಲ್ಲೇ ಕಾರು ಕಂಪನಿಗಳು ಯೋಚಿಸುತ್ತಿವೆ. ಮರ್ಸಿಡಿಸ್‌ ಬೆಂಜ್‌ ಈಗಾಗಲೇ ಈ ದಾರಿಯಲ್ಲಿ ಯಶಸ್ವಿಯಾಗಿದೆ. ಜೊತೆಗೆ ಯಾವುದೇ ಅಪಘಾತಕ್ಕೂ ಮೊದಲೇ ಸ್ಪೀಡ್‌ ಕಂಟ್ರೋಲ್‌ಗ‌ೂ ಏರ್‌ಬ್ಯಾಗ್‌ಗಳ ಬಳಕೆಯನ್ನೂ ಆರಂಭಿಸಿದೆ.

Advertisement

ಅಗ್ಮೆಂಟೆಡ್‌ ರಿಯಾಲಿಟಿ ಡ್ಯಾಷ್‌ಬೋರ್ಡ್ಸ್‌: ಚಾಲಕ ಮತ್ತು ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಿ ವಿನ್ಯಾಸಗೊಳಿಸುವುದೂ ಈಗಿನ ಮಾರ್ಕೆಟಿಂಗ್‌ ತಂತ್ರಗಾರಿಕೆಯಲ್ಲಿ ಒಂದು. ಹೀಗಾಗಿ ಈಗಿನ ಬಹುತೇಕ ಹೈಎಂಡ್‌ ವಾಹನಗಳಲ್ಲಿ ಗ್ಲೋಬಲ್‌ ಪೊಜಿಷನಿಂಗ್‌ ಸಿಸ್ಟಮ್‌ (ಜಿಪಿಎಸ್‌) ಮತ್ತು ಇತರೆ ಕಾರ್‌ ಡಿಸ್‌ಪ್ಲೇ ಸಾಕಷ್ಟು ಪರಿಣಾಮಕಾರಿಯಾಗಿರುತ್ತದೆ.

ಅಷ್ಟೇ ಅಲ್ಲ, ಚಾಲಕನ ಮುಂದೆ ಇರುವ ಎಕ್ಸ್‌ಟರ್ನಲ್‌ ಆಬ್‌ಜಕ್ಟ್ ಅರ್ಥಾತ್‌ ಅನಾಮಧೇಯ ವಸ್ತುಗಳು ಕಂಡಾಗ ಅದನ್ನು ಚಿತ್ರಸಹಿತ ನಿಮ್ಮ ಕಾರಿನಲ್ಲಿ ಅಳವಡಿಸಲಾದ ಟಚ್‌ಸ್ಕಿನ್‌ ಅಥವಾ ಡಿಸ್ಲೆಪ್ಲೇ ಬೋರ್ಡ್‌ ಮೇಲೆ ಕಾಣಿಸಿ ನಿಮ್ಮನ್ನು ಎಚ್ಚರಿಸುವಂಥ ತಂತ್ರಜ್ಞಾನವನ್ನು ಲಕ್ಸುರಿ ಕಾರುಗಳಲ್ಲಿ ಅಳಡಿಸಲು ಕಂಪನಿಗಳು ಮುಂದಾಗಿವೆ.

ಈ ತಂತ್ರಜ್ಞಾನ ಅಳವಡಿಕೆಗೆ ಪ್ರಯೋಗಗಳು ನಡೆದಿದ್ದು, ಅಂದುಕೊಂಡಂತೆ ಆದರೆ ಒಂದೆರಡು ವರ್ಷಗಳಲ್ಲಿ ಕಾರುಗಳ ವಿನ್ಯಾಸದ ಮಾದರಿಯೇ ಹೈಟೆಕ್‌ ಆಗಿರಲಿದೆ. ಈ ತಂತ್ರಜ್ಞಾನವೇ ಅಗ್ಮೆಂಟೆಡ್‌ ರಿಯಾಲಿಟಿ ಡ್ಯಾಷ್‌ (ಎಆರ್‌). ಇದರಿಂದ ನಿಗದಿತ ದೂರದಲ್ಲಿ ನಿಮ್ಮ ಮುಂದಿರುವ ವಸ್ತುವಿನ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

* ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next