Advertisement

Techno ಲೋಜಿ

04:29 PM May 03, 2019 | pallavi |
ವಿವೋಸ್ಮಾರ್ಟ್‌4 ಫಿಟ್ನೆಸ್‌ ಬ್ಯಾಂಡ್‌
ವಿವೋಸ್ಮಾರ್ಟ್‌ನ ಹೊಸ ಮಾಡೆಲ್ ವಿವೋಸ್ಮಾರ್ಟ್‌ 4 ಫಿಟ್ನೆಸ್‌ ಬ್ಯಾಂಡ್‌ ಮಾರುಕಟ್ಟೆಗೆ ಬಂದಿದೆ. ಭಾರತದಲ್ಲಿ ಇದರ ಬೆಲೆ 12, 990 ರೂ.

ನಿದ್ದೆಯ ವೇಳೆಯಲ್ಲೂ ಧರಿಸಲು ಹಿತಕರವಾಗಿರುವ ಇದು ಆರೋಗ್ಯದ ಮಾಹಿತಿಯನ್ನು ನೀಡುತ್ತದೆ. ಈಜು, ಓಟ, ವಾಕಿಂಗ್‌ ಕುರಿತು ಎಚ್ಚರಿಕೆ ನೀಡುತ್ತದೆ. ಇದರ ಬ್ಯಾಟರಿ ಪವರ್‌ 7 ದಿನಗಳವರೆಗೆ ಬರುತ್ತದೆ. ವಿವೋಸ್ಮಾರ್ಟ್‌4 ಹೃದಯ ಬಡಿತವನ್ನು, ದಿನದ ಒತ್ತಡ, ಉಸಿರಾಟದ ಕುರಿತು ನೋಡಿಕೊಳ್ಳುತ್ತದೆ.

ಹುವಾಯಿ ಎಐ ಕ್ಯೂಬ್‌ ಸ್ಮಾರ್ಟ್‌ ಸ್ಪೀಕರ್‌
ಹುವಾೖ ಮೊಬೈಲ್ ತಯಾರಕರು ಹುವಾಯಿ ಎಐ ಕ್ಯೂಬ್‌ ಸ್ಮಾರ್ಟ್‌ ಸ್ಪೀಕರ್‌ ಅನ್ನು ಬರ್ಲಿನ್‌ನಲ್ಲಿ ಇತ್ತೀಚೆಗೆ ಪ್ರಸ್ತುತ ಪಡೆಸಿದ್ದಾರೆ. ಮೈಕ್ರೊ ಸಿಮ್, ಇಂಟರ್ನೆಟ್ ಕೇಬಲ್ ಅಳವಡಿಸಲು, ಚಾರ್ಜಿಂಗ್‌ಗಾಗಿ ಪೋರ್ಟ್‌ ನೀಡಲಾಗಿದೆ. ಮೇಲ್ಬಾಗದಲ್ಲಿ ಎಲ್ಇಡಿ ಲೈಟ್ ಮತ್ತು ಬಟನ್‌ಗಳನ್ನು ಹೊಂದಿದ್ದು ಇದರಿಂದ ವಾಲ್ಯೂಮ್‌ ಮತ್ತು ವಾಯಿಸ್‌ ಅಸಿಸ್ಟೆಂಟ್ ಅಲೆಕ್ಸ ಜತೆ ಮೈಕ್ರೋಫೋನ್‌ ಕಂಟ್ರೋಲ್ ಮಾಡಬಹುದಾಗಿದೆ.
Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next