Advertisement
ಇದರಲ್ಲೇನು ವಿಶೇಷ? ಎರಡು ವರ್ಷಗಳ ಮುಂಚೆ, ಇದೇ ಕೆಲಸವೆಂದರೆ ರಾಜೇಂದ್ರಪ್ರಸಾದರಿಗೆ ದೊಡ್ಡ ತಲೆನೋವು. ಆಗಿನ ಪರಿಸ್ಥಿತಿಗೆ ಹೋಲಿಸಿದರೆ, ಈಗ ಹೊಲದ ಉಳುಮೆ ಸುಲಭವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಮುಗಿಯಿತು. ಯಾಕೆ ಎಂದು ಪ್ರಶ್ನಿಸಿದರೆ ಅವರ ಉತ್ತರ: ಆಗ ನಮ್ಮೂರಿನ ಒಬ್ಬರ ಟ್ರಾಕ್ಟರ್ ಬಾಡಿಗೆಗೆ ತರಿಸುತ್ತಿ¨ªೆ. ನನ್ನಹೊಲದ ಉಳುಮೆಗೆ ಆಗುತ್ತಿದ್ದ ಖರ್ಚು ಬರೋಬ್ಬರಿ 6,000ರೂಪಾಯಿ. ಈಗ ಗೋಲ್ಡಾಮಾóìಕ್ಟರನು °ಮೊಬೈಲ್‌ನಲ್ಲೇ ಬುಕ್ ಮಾಡಬಹುದು. ಬರೇ 2,000ರೂ. ಖರ್ಚಿನಲ್ಲಿ ನನ್ನಹೊಲದ ಉಳುಮೆ ಆಗಿಹೋಯ್ತು.
Related Articles
Advertisement
ಪೀಡೆಕೀಟಗಳ ಹಾವಳಿ ನಮ್ಮ ದೇಶದ ರೈತರು ಎದುರಿಸುವ ಇನ್ನೊಂದು ಗಂಭೀರ ಸಮಸ್ಯೆ. ಇದರ ಪರಿಹಾರಕ್ಕಾಗಿ 2011ರಿಂದ ಕಾರ್ಯಾಚರಿಸುತ್ತಿರುವ ಕಂಪೆನಿ ಬಾರಿಕ್ಸ್ ಅಗ್ರೋ ಸರ್ವಿಸಸ್. ಇದರ ಕಚೇರಿ ಇರುವುದು ಬೆಂಗಳೂರಿನ ಪೀಣ್ಯದಲ್ಲಿ. ಇದರ ಸ್ಥಾಪಕರು ಲೋಕೇಶ್ ಮಕಮ…. ಆಹಾರದ ಬೆಳೆಗಳ ಕೀಟನಾಶಕಗಳಿಗೆ ಬದಲಿವಸ್ತು ಸಂಶೋಧಿಸಿ ರೈತರಿಗೆ ಮಾರಾಟ ಮಾಡಬೇಕೆಂಬ ಉದ್ದೇಶದಿಂದ ಈ ಕಂಪೆನಿ ಸ್ಥಾಪಿಸಿದರು. ಜೂನ್ 2013ರಲ್ಲಿ ರೂ. 20 ಲಕ್ಷ$ ಮೂಲಧನದ ಮೂಲಕ ಇದಕ್ಕೆ ಬೆಂಬಲ ನೀಡಿದ್ದು ಸೆಂಟರ್ ಫಾರ್ ಇನ್ನೋವೇಷನ್ ಇನ್-ಕ್ಯುಬೇಷನ… ಆಂಡ್ ಎಂಟರ್-ಪ್ರೀನರ್-ಷಿಪ್ ಎಂಬ ಸಂಸ್ಥೆ.
ಆರಂಭದಲ್ಲಿ ಬಾರಿಕ್ಸ್ ಅಗ್ರೋ ಸರ್ವಿಸಸಿನ ವ್ಯವಹಾರ ಕುಂಟುತ್ತಾ ಸಾಗಿತ್ತು. ಯಾಕೆಂದರೆ, ಕೀಟ ಮತ್ತು ರೋಗಗಳಿಂದ ಬೆಳೆಗಳನ್ನು ರಕ್ಷಿಸಲಿಕ್ಕಾಗಿ ರೈತರು ರಾಸಾಯನಿಕ ಪೀಡೆನಾಶಕಗಳನ್ನೇ ಅವಲಂಬಿಸಿ¨ªಾರೆ. ನಮ್ಮ ರೈತರು ನಿರುಪಯೋಗಿ ರಾಸಾಯನಿಕಗಳನ್ನು ಖರೀದಿಸಿ ಹಣ ಹಾಳು ಮಾಡುತ್ತಿ¨ªಾರೆ. ಪೀಡೆ ಕೀಟಗಳು ಕೆಲವು ಕೀಟನಾಶಕಗಳಿಗೆ ಪ್ರತಿರೋಧ ಬೆಳೆಸಿಕೊಂಡಾಗ, ರೈತರು ಮತ್ತೆಮತ್ತೆ ವಿಷರಾಸಾಯನಿಕಗಳನ್ನು ಸಿಂಪಡಿಸುತ್ತಾರೆ; ಇದು ಬಹಳ ಅಪಾಯಕಾರಿ. ಈ ವಿಷರಾಸಾಯನಿಕಗಳಿಗೆ ಬದಲಿವಸ್ತುಗಳು ಇವೆ ಅನ್ನೋದೇ ರೈತರಿಗೆ ಗೊತ್ತಿಲ್ಲ; ಹಾಗಾಗಿ ಅವರು ವಿಷ ರಾಸಾಯನಿಕಗಳನ್ನೇ ಬೆಳೆಗಳಿಗೆ ಸಿಂಪಡಿಸುತ್ತಾರೆ ಎಂದು ವಿವರಿಸುತ್ತಾರೆ ಲೋಕೇಶ್ ಮಕಮ….
ಹಲವು ವರ್ಷ ಸಂಶೋಧನೆ ನಡೆಸಿ ಬಾರಿಕ್ಸ್ ಆಗ್ರೋ ಸರ್ವಿಸಸ್ ಪೀಡೆಕೀಟಗಳ ನಿಯಂತ್ರಣಕ್ಕಾಗಿ ಪರಿಸರ ಸ್ನೇಹಿ ಪೀಡೆ ನಾಶಕಗಳನ್ನು ಅಭಿವೃದ್ಧಿಪಡಿಸಿತು. ಇವುಗಳ ವೆಚ್ಚ ಕಡಿಮೆ ಮತ್ತು ಬಳಕೆ ಸುಲಭ. ಫೆರಮೋನ್ ಲೇಪಿತ ಕಾಗದದ ಹಾಳೆ ಅಥವಾ ಸಣ್ಣ ಕನ್-ಟೈನರನ್ನು ಗಿಡಗಳ ರೆಂಬೆಗಳಿಗೆ, ತರಕಾರಿಗಳ ಚಪ್ಪರಕ್ಕೆ ಅಥವಾ ನೆಲದಲ್ಲಿ ಊರಿದ ಕೋಲುಗಳಿಗೆ ನೇತಾಡಿಸಿದರಾಯಿತು. ಈ ಬಗ್ಗೆ ಲೋಕೇಶರ ವಿವರಣೆ ಹೀಗಿದೆ: ಉದಾಹರಣೆಗೆ ಹಣ್ಣಿನ ನೊಣಗಳು ಹಣ್ಣುಗಳಿಗೆ ಶೇ. 80ರಷ್ಟು ಹಾನಿ ಮಾಡುತ್ತವೆ. ಇವನ್ನು ನಿಯಂತ್ರಿಸಲು ಫೆರಮೋನ್ ಟ್ರಾಪ್ (ವಾಸನಾ ಬಲೆ) ತಯಾರಿಸಿದ್ದೇವೆ. ಇವು ಗಂಡು-ಹಣ್ಣಿನ ನೊಣಗಳನ್ನು ಮಾತ್ರ ಆಕರ್ಷಿಸುತ್ತವೆ; ಇತರ ರೈತಸ್ನೇಹಿ ಕೀಟಗಳಿಗೆ ಮತ್ತು ಗಾಳಿ, ನೀರು, ಮಣ್ಣಿಗೆ ಹಾನಿ ಮಾಡುವುದಿಲ್ಲ. ಇವುಗಳ ಬೆಲೆಯೂ ಕಡಿಮೆ. ಗಂಡು-ಹಣ್ಣಿನ ನೊಣಗಳು ವಾಸನಾ ಬಲೆಗೆ ಆಕರ್ಷಿತವಾಗಿ ಬಂದು ಬಲಿಯಾಗಿ ಸಾಯುವುದರಿಂದ ಸಂತಾನಾಭಿವೃದ್ಧಿ ಕುಂಠಿತವಾಗಿ, ಹಣ್ಣಿನ ನೊಣಗಳ ಸಂಖ್ಯೆ ಕಡಿಮೆಯಾಗುತ್ತದೆ.
ಈಗ 5,600 ಹಳ್ಳಿಗಳಲ್ಲಿ ಸುಮಾರು ಎರಡು ಲಕ್ಷ$ರೈತರು ಬಾರಿಕ್ಸ… ಆಗ್ರೊ ಸರ್ವೀಸಿನ ಉತ್ಪನ್ನಗಳನ್ನು ಉಪಯೋಗಿಸುತ್ತಿ¨ªಾರೆ. ಸಣ್ಣ ರೈತರಿಗೂ ಹತ್ತಾರು ಎಕರೆ ಜಮೀನಿನ ಮಾಲೀಕರಿಗೂ ನಮ್ಮ ಉತ್ಪನ್ನಗಳಿಂದ ಅನುಕೂಲ. ರಾಸಾಯನಿಕ ಪೀಡೆನಾಶಕಗಳ ಬೆಲೆಗೆ ಹೋಲಿಸಿದಾಗ, ಇವುಗಳ ಬೆಲೆ ಕಡಿಮೆ. ಈ ವಿಧಾನದಲ್ಲಿ ಕೆಲಸಗಾರರು ಯಾವುದೇ ಸಿಂಪಡಣೆ ಮಾಡಲಿಕ್ಕಿಲ್ಲ. ಆ ಖರ್ಚು ರೈತರಿಗೆ ಉಳಿತಾಯ ಇದು ಲೋಕೇಶ್ ಮಕಮ… ನೀಡುವ ಮಾಹಿತಿ.
ಭಾರತದ ಕೃಷಿರಂಗ ಮತ್ತು ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳು ಹತ್ತುಹಲವು. ಇವುಗಳಲ್ಲಿ ಕೆಲವನ್ನಾದರೂ ತಂತ್ರಜ್ಞಾನದ ಸಹಾಯದಿಂದ ಪರಿಹರಿಸಿ, ಕೃಷಿಯ ಉತ್ಪಾದಕತೆ ಹೆಚ್ಚಿಸಲು ಸಾಧ್ಯವೆಂದು ಈ ಎರಡು ಸ್ಟಾರ್ಟ್ ಅಪ್ ಕಂಪೆನಿಗಳು ತೋರಿಸಿಕೊಟ್ಟಿವೆ.
– ಅಡ್ಕೂರು ಕೃಷ್ಣರಾವ್