Advertisement
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ 4 ವರ್ಷಗಳ ಹಿಂದೆ ಬೆಂಗಳೂರಿನಲ್ಲಿನ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗಿತ್ತು. ಆಗ ಬಿಬಿಎಂಪಿ ಅಧಿಕಾರಿ ಗಳೇ ನಗರದಲ್ಲಿನ ಬೀದಿಬದಿ ವ್ಯಾಪಾರಿಗಳನ್ನು ಲೆಕ್ಕ ಹಾಕಿದ್ದು, ಕೇವಲ 33 ಸಾವಿರ ಬೀದಿ ಬದಿ ವ್ಯಾಪಾರಿಗಳಿದ್ದಾರೆ ಎಂದಿದ್ದರು. ಅದರಲ್ಲಿ 26,500 ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನೂ ನೀಡಲಾಗಿತ್ತು. ಆದರೆ, ಅದಾದ ಬಳಿಕ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ 85 ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿ ದ್ದರು. ಇದರಿಂದಾಗಿ ಸಮೀಕ್ಷೆ ಸಮರ್ಪಕವಾಗಿಲ್ಲ ಎಂದು ಅರಿತ ಬಿಬಿಎಂಪಿ, ಇದೀಗ ಹೊಸದಾಗಿ ತಂತ್ರಜ್ಞಾನ ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಲು ಮುಂದಾಗಿದೆ.
Related Articles
Advertisement
ವಿಡಿಯೋ, ಛಾಯಾಚಿತ್ರ ಕಡ್ಡಾಯ: ಸಮೀಕ್ಷೆ ಮಾಡುವ ವೇಳೆ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ತೆಗೆಯುವುದು ಕಡ್ಡಾಯವಾಗಿದೆ. ಜತೆಗೆ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿ ಅಥವಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಜತೆಗಿರಬೇಕು. ಇದರ ಸಮೀಕ್ಷೆಯಲ್ಲಿ ಗೊಂದಲ ಉಂಟಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಸಮೀಕ್ಷೆ ಅಸಮರ್ಪಕವಾಗಿ ಎಂಬ ಆರೋಪ ಎದುರಿಸದಂತೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಸಮೀಕ್ಷೆಯನ್ನು 4 ವಾರ ಅಂದರೆ 1 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಖಾಸಗಿ ಸಂಸ್ಥೆಗೆ ಬಿಬಿಎಂಪಿ ನೀಡುತ್ತಿದೆ.
ವಿಶೇಷ ಗುರುತಿನ ಸಂಖ್ಯೆ : ಸಮೀಕ್ಷೆ ವೇಳೆ ಲೆಕ್ಕ ಹಾಕುವ ಪ್ರತಿ ಬೀದಿಬದಿ ವ್ಯಾಪಾರಿಗೂ ಪ್ರತ್ಯೇಕ ವಿಶೇಷ ಗುರುತಿನ ಸಂಖ್ಯೆ (ಯುನಿಕ್ ಐಡಿ) ನೀಡಲಾಗುತ್ತದೆ. ಜತೆಗೆ ಬಾರ್‌ಕೋಡ್ ಒಂದನ್ನು ಸೃಷ್ಟಿಸಲಾಗು ತ್ತದೆ. ಅದರಿಂದಾಗಿ ಮೊಬೈಲ್ ಆ್ಯಪ್‌ನಲ್ಲಿ ಆ ಯುನಿಕ್ ಐಡಿ ಅಥವಾ ಬಾರ್‌ಕೋಡ್ ಸ್ಕ್ಯಾನ್ ಮಾಡಿದರೆ ಬೀದಿಬದಿ ವ್ಯಾಪಾರಿಯ ಮಾಹಿತಿ ಪಡೆಯುವುದು ಸುಲಭವಾಗಲಿದೆ.
-ಗಿರೀಶ್ ಗರಗ