Advertisement
ಕೈಗಾರಿಕಾ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಪದವಿಯೊಂದಷ್ಟೇ ಸಾಕಾಗುವುದಿಲ್ಲ. ಕೌಶಲಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇಂತಹ ಕೌಶಲಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಅಂದರೆ ಪದವಿ ಅಧ್ಯಯನ ಸಮಯದಲ್ಲೇ ಪಡೆದುಕೊಂಡರೆ ಅಂತಹವರಿಗೆ ಜೌದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತದೆ. ಪುಸ್ತಕದ ಮಾಹಿತಿಯಷ್ಟೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾಗುತ್ತದೆ ಎಂಬ ಕಾಲ ಬದಲಾಗಿದೆ. ಪುಸ್ತಕ ಹೊರತುಪಡಿಸಿ ಗಳಿಸಿದ ಜ್ಞಾನ ಮಾತ್ರವೇ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವಾಗುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಹೊರತುಪಡಿಸಿದ ಜ್ಞಾನದ ಆವಶ್ಯಕತೆ ಇದೆ. ಅದರಲ್ಲೂ ತಾಂತ್ರಿಕ ಕೌಶಲ ಬಹುಮುಖ್ಯ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರಮುಖವಾಗಿ ಇರಬೇಕಾದ ತಾಂತ್ರಿಕ ಕೌಶಲಗಳನ್ನು ನೋಡೋಣ ಸಾಮಾಜಿಕ ಜಾಲತಾಣಗಳ ಬಳಕೆ ಸಾಫ್ಟ್ವೇರ್ ಸ್ಕಿಲ್‌ಗಳಂತೆಯೇ ಸಾಮಾಜಿಕ ಜಾಲತಾಣಗಳ ಜ್ಞಾನವೂ ಅಗತ್ಯ. ಕೇವಲ ಭಾವಚಿತ್ರಗಳನ್ನು ಅಪ್‌ಲೋಡ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳುವುದು ಮಾತ್ರವಲ್ಲದೆ ಜಗತ್ತಿನ ವಿವಿಧ ಭಾಗಗಳ ಜನರ ಬಗ್ಗೆ ಮಾಹಿತಿ ಲಭಿಸುತ್ತದೆ. ಸಾಮಾನ್ಯ ಯುವಕ ತನ್ನ ಪರಿಶ್ರಮದಿಂದ ಫೇಸ್‌ಬುಕ್ ಸ್ಥಾಪಿಸಿದ ಬಗೆ ಎಲ್ಲವೂ ವಿದ್ಯಾರ್ಥಿಗಳಿಗೆ ಸ್ಫೂ³ರ್ತಿದಾಯಕ. ಇದರೊಂದಿಗೆ ಸಾಮಾಜಿಕ ಜಾಲತಾಣಗಳ ಕೆಲಸದ ಶೈಲಿಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬಹುದಾಗಿದೆ.
Related Articles
ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ ಆದಷ್ಟು ತಾಂತ್ರಿಕ ಜ್ಞಾನವನ್ನು ಪಡೆದುಕೊಳ್ಳಬೇಕಾಗುತ್ತದೆ. ಬ್ಯಾಂಕ್‌ನ ಗೌಪ್ಯ ಮಾಹಿತಿ, ಸಾಮಾಜಿಕ ಜಾಲತಾಣಗಳ ಗೌಪ್ಯತೆ ಹೀಗೆ ಹಲವಾರು ವೈಯಕ್ತಿಕ ವಿಚಾರಗಳ ಭದ್ರತೆ ಕಾಪಾಡಿಕೊಳ್ಳುವುದೇ ಸಾಹಸ. ಎಷ್ಟೇ ಭದ್ರತೆ ನೀಡಿದರೂ ಹ್ಯಾಕರ್ ಗಳು ತಮ್ಮ ಕೈಚಳಕ ತೋರಿಸುತ್ತಾರೆ. ಅದಕ್ಕಾಗಿ ಅವರಿಂದ ವೈಯಕ್ತಿಕ ಮಾಹಿತಿಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನವನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದರೊಂದಿಗೆ ವೈರಸ್, ಆನ್‌ಲೈನ್ ಅಟ್ಯಾಕ್ಸ್ ಬಗ್ಗೆ ಜ್ಞಾನವಿರಬೇಕು.
Advertisement
ಹೊಸತನ್ನು ಕಲಿಯುವ ತವಕವಿರಲಿಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯ ಕಡೆಗೂ ವಿದ್ಯಾರ್ಥಿಗಳು ಗಮನಹರಿಸಬೇಕು. ನೂತನ ಪ್ರಯೋಗ, ಆವಿಷ್ಕಾರಗಳನ್ನು ಮಾಡುವ ಕಡೆಗೆ ವಿದ್ಯಾರ್ಥಿಗಳು ಉತ್ಸಾಹ ತೋರಬೇಕು. ಇದಕ್ಕಾಗಿ ಶಿಕ್ಷಕರ ಮಾರ್ಗದರ್ಶನ ಪಡೆದು ಅಂತರ್ಜಾಲವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರತಿ ಕ್ಷಣವೂ ಹೊಸತನ್ನು ಕಲಿಯುವ ತವಕ ಬಹಳ ಮುಖ್ಯ. ವೃತ್ತಿಪರ ಬರವಣಿಗೆ
ಬಹುತೇಕ ವಿದ್ಯಾರ್ಥಿಗಳು ವೃತ್ತಿಪರ ಬರವಣಿಗೆಯನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಇದು ಗಂಭೀರವಾದ ವಿಚಾರ. ಕಾರ್ಪೊರೇಟ್ ಉದ್ಯೋಗಿಗಳಿಗೆ ಉತ್ತಮ ಬರವಣಿಗೆ ಶೈಲಿ, ಉತ್ತಮ ಇ ಮೈಲ್ ಬರೆಯುವ ಕೌಶಲ ಮುಖ್ಯವಾಗಿರುತ್ತದೆ. ಇದರೊಂದಿಗೆ ಉತ್ತಮ ಸಂವಹನ ಪ್ರಕ್ರಿಯೆಯೂ ಮುಖ್ಯವಾಗಿರುತ್ತದೆ. ತಮ್ಮೊಳಗಿರುವ ಹೊಸ ಯೋಚನೆಗಳನ್ನು ಕಾರ್ಯಗತಗೊಳಿಸಲು ಸೂಕ್ತ ವೇದಿಕೆಯನ್ನು ಆರಿಸಿಕೊಂಡು ಪ್ರಸ್ತುತ ಪಡಿಸುವ ಕೌಶಲಗಳು ವಿದ್ಯಾರ್ಥಿಗಳಲ್ಲಿ ಅಗತ್ಯವಿದೆ. ಸಾಫ್ಟ್‌ವೇರ್ ಸ್ಕಿಲ್
ಎಂಜಿನಿಯರಿಂಗ್ ಅಥವಾ ಇತರ ತಾಂತ್ರಿಕ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸಾಫ್ಟ್‌ವೇರ್ ಕೌಶಲಗಳಲ್ಲಿ ಪರಿಣತಿ ಪಡೆಯಲೇ ಬೇಕಾದ ಆವಶ್ಯಕತೆ ಇರುತ್ತದೆ. ವರ್ಡ್, ಪ್ರೊಸೆಸರ್, ಸ್ಪೆಡ್‌ಶೀಟ್ , ಪ್ರಸೆಂಟೇಶನ್ ಪ್ರೋಗ್ರಾಂ ಹಾಗೂ ಕೆಲವು ಡಿಸೈನಿಂಗ್ ಸಾಫ್ಟ್‌ವೇರ್‌ಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಇವುಗಳು ತಾಂತ್ರಿಕ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇನ್ನಿತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೂ ಸಹಕಾರಿಯಾಗಲಿದೆ. ವರ್ಡ್ ಮೂಲಕ ಪತ್ರ ಬರೆಯುವುದು, ರಿಪೋರ್ಟ್ ಮಾಡುವುದು, ಪವರ್ ಪಾಯಿಂಟ್ ಪ್ರಸೆಂಟೇಶನ್‌ಗಳ ಮೂಲಕ ಪ್ರೊಜೆಕ್ಟ್ ನೀಡುವುದು, ಎಕ್ಸೆಲ್‌ಗಳ ಬಳಕೆ ಎಲ್ಲಾ ವಿಭಾಗದವರಿಗೂ ಸಹಕಾರಿಯಾಗುತ್ತದೆ. ಈ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕಾದುದು ಇಂದಿನ ವಿದ್ಯಾರ್ಥಿಗಳ ಜವಾಬ್ದಾರಿಯಾಗಿರುತ್ತದೆ. - ಪ್ರಜ್ಞಾ ಶೆಟ್ಟಿ