Advertisement

ತಾಂತ್ರಿಕ ಸಮಸ್ಯೆ: ಒಂದು ವಿಮಾನ  ರದ್ದು, ಇನ್ನೊಂದು ವಿಳಂಬ

11:38 PM Nov 10, 2022 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬಯಿ, ಬೆಂಗಳೂರಿಗೆ ಬುಧವಾರ ತೆರಳಲಿದ್ದ ವಿಮಾನಗಳು ಹಲವು ತಾಸು ಕಾಲ ತಡವಾದದ್ದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.

Advertisement

ಮುಂಬಯಿಗೆ ತೆರಳಬೇಕಿದ್ದ ವಿಮಾನ ಸುಮಾರು 6 ತಾಸು ತಡವಾಗಿದೆ. ಎರಡೂ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿತ್ತು. ಬೆಂಗಳೂರಿಗೆ ಮಧ್ಯಾಹ್ನ 1.50ಕ್ಕೆ ಹೊರಡಬೇಕಿದ್ದ ವಿಮಾನದಲ್ಲಿ ಪ್ರಯಾಣಿಕರು ಸಿದ್ಧರಾಗಿ ಕುಳಿತಿದ್ದರು, ಕೊನೇ ನಿಮಿಷದಲ್ಲಿ ಇಳಿಯುವಂತೆ ಸೂಚಿಸಲಾಯಿತು. 2 ತಾಸುಗಳ ಬಳಿಕ ಮತ್ತೆ ವಿಮಾನ ವೇರುವಂತೆ ತಿಳಿಸಲಾಯಿತು. ಆದರೆ ಮತ್ತೆ ಇಳಿಯಲು ಹೇಳಲಾಯಿತು. ಕೊನೆಗೆ ಸಮಸ್ಯೆ ಬಗೆಹರಿಯದೆ ಹಾರಾಟ ರದ್ದಾಗಿರುವುದಾಗಿ ತಿಳಿದುಬಂದಿದೆ.  ಈ ವಿಮಾನದಲ್ಲಿ  ಸಚಿವ ಸುನಿಲ್‌ಕುಮಾರ್‌ ಬೆಂಗಳೂರಿಗೆ ತೆರಳಲಿದ್ದರು. ವಿಮಾನ ರದ್ದಾದ ಹಿನ್ನೆಲೆಯಲ್ಲಿ  ಅವರು ರಾತ್ರಿ 10ರ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಿದರು.

ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ವಿಳಂಬವಾಗಿರು ವುದು ನಿಜ. ಅನಿವಾರ್ಯ ಕಾರಣಗಳಿಂದ ಇಂತಹ ಸನ್ನಿವೇಶ ಉಂಟಾಗುತ್ತದೆ ಎಂದು ಈ ಕುರಿತು ಇಂಡಿಗೊ ವಿಮಾನ ಸಂಸ್ಥೆಯ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next