Advertisement
ಮೊದಲ ಬಾರಿ ಮಾನವರನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ದಿದ್ದ ಬೋಯಿಂಗ್‌ನ ಸ್ಟಾರ್‌ಲೈನರ್ ಏರ್‌ಕ್ರಾಫ್ಟ್ನಲ್ಲಿ ತಾಂತ್ರಿಕ ದೋಷವಿರುವ ಕಾರಣ, ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಉಳಿಯಬೇಕಾದ ಸ್ಥಿತಿಯಿದೆ. ಸ್ಟಾರ್‌ಲೈನರ್‌ನಲ್ಲಿ ಹೀಲಿಯಂ ಸೋರಿಕೆ, ಥÅಸ್ಟ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಅಧಿಕಾರಿಗಳು ಹಲವು ಬಾರಿ ಹೇಳಿದ್ದರು. ಆದರೆ ಈ ನೌಕೆ ಸುನೀತಾ ಹಾಗೂ ಬುಚ್ ವಿಲ್‌ಮೋರ್‌ರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲಿದೆ ಎಂದೂ ಅವರು ಹೇಳಿದ್ದರು. ಶುಕ್ರವಾರ ಮಾತನಾಡಿದ ನಾಸಾದ ವಾಣಿಜ್ಯ ಕಾರ್ಯಕ್ರಗಳ ಮ್ಯಾನೇಜರ್ ಸ್ಟೀವ್ ಸ್ಟಿಚ್, ಸ್ಟಾರ್ ಲೈನರ್ ಮರಳುವ ದಿನಾಂಕವನ್ನು ಇನ್ನೂ ನಿಗದಿಪಡಿ ಸಲಾಗಿಲ್ಲ. ಅದರ ಕಾರ್ಯಾವಧಿ ಯನ್ನು 45ರಿಂದ 90 ದಿನಗಳ ಕಾಲ ವಿಸ್ತರಣೆ ಮಾಡಲು ಯೋಜಿಸಿದ್ದು, ಗಗನ ಯಾತ್ರಿಗಳ ವಾಸದ ಸಮಯವೂ ವಿಸ್ತರಣೆಯಾಗಲಿದೆ ಎಂದು ಹೇಳಿದ್ದಾರೆ. Advertisement
Technical Error; ಬಾಹ್ಯಾಕಾಶದಲ್ಲೇ ಬಾಕಿ ಆಗಲಿದ್ದಾರಾ ಸುನೀತಾ?
01:25 AM Jun 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.