ತಿಪಟೂರು: ವಿದ್ಯಾರ್ಥಿಗಳ ತಾಂತ್ರಿಕ ಬೆಳವಣಿಗೆ ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ ಮೈಕ್ರೋಸಾಫ್ಟ್ ಪ್ಲಾಟಿಫೈ ಸೆಲ್ಯೂಷನ್ ಕಂಪನಿ ‘ಕ್ಲೌಡ್ ಹಬ್’ ಎಂಬ ಹೊಸ ಆ್ಯಪ್ ಹೊರತರಲಾಗಿದ್ದು ಇದರ ಪ್ರಯೋ ಜನ ಪಡೆದು ಹೊಸ ಹೊಸ ಸಂಶೋಧನೆಗಳತ್ತ ಚಿಂತನೆ ನಡೆಸಬೇಕೆಂದು ಪ್ಲಾಟಿಫೈ ಸೆಲ್ಯೂಷನ್ ಕಂಪನಿ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ತ್ರಿವಿಕ್ರಂ ರಾವ್ ತಿಳಿಸಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲ ಯದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅನುಕೂಲ:ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗುತ್ತಿರುವ ಇಂತಹ ಸಂದರ್ಭದಲ್ಲಿ ಹೊಸ ಹೊಸ ತಂತ್ರಜ್ಞಾನದ ಅವಶ್ಯಕತೆ ಬಹಳಷ್ಟಿದೆ. ನಮ್ಮ ಕ್ಲೌಡ್ ಹಬ್ ಆ್ಯಪ್‌ನಲ್ಲಿ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಬಿಎ, ಬಿಕಾಂ, ಡಿಪ್ಲೋಮಾ, ಬಿಬಿಎಂ, ಬಿಎಸ್ಸಿ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂ ಲವಾಗುವಂತೆ ಸಾಫ್ಟ್ವೇರ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಸೌಲಭ್ಯ ಪಡೆದುಕೊಳ್ಳಿ: ನಮ್ಮ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಲಾಗಿನ್ ಮಾಡಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಇಡೀ ಇಂಡಿಯಾದಲ್ಲಿಯೇ ನಮ್ಮ ಆ್ಯಪ್ ಕೆಲಸ ನಿರ್ವಹಿ ಸುತ್ತಿದ್ದು, ಕರ್ನಾಟಕದಲ್ಲಿ ಮೊದಲು ತಿಪಟೂರಿನ ಕೆಐಟಿ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮತ್ತು ಮೆಷಿನ್ ಲರ್ನಿಂಗ್ ಲ್ಯಾಬ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾಲೇಜಿನ ವಿದ್ಯಾರ್ಥಿ ಗಳಲ್ಲದೆ ಸುತ್ತಮುತ್ತಲ ಗ್ರಾಮೀಣ ಹಾಗೂ ಇತರ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಪಠ್ಯದ ಜೊತೆಗೆ ಹೊಸ ಹೊಸ ಸಂಶೋಧನೆಗಳಿಗೆ ನಮ್ಮ ಆ್ಯಪ್ ಉಪಯೋಗವಾಗಲಿದೆ. ಈಗಾಗಲೇ 1ಲಕ್ಷ ವಿದ್ಯಾರ್ಥಿಗಳು ಲಾಗಿನ್‌ಆಗಿದ್ದು, ಕಲ್ಕತ್ತಾ, ಮುಂಬೈ ಹೀಗೆ ವಿವಿಧ ಕಡೆ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಲಾಗಿನ್ ಮಾಡಿಕೊಂಡು ಎಲ್ಲಿ ಬೇಕಾದರೂ ಲ್ಯಾಬ್‌ಗಳ ಬಳಕೆ ಮಾಡಿಕೊಂಡು ಸಂಶೋಧನೆ ಮಾಡಬಹುದು. ಅಲ್ಲದೆ ಚಾಟ್ಬಾಟ್ ಎಂಬ ಹೊಸ ಆ್ಯಪ್ ತೆರೆದು ಅದಕ್ಕೆ ಗಾರ್ಗಿ ಎಂಬ ಹೆಸರಿಡಲಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾ ಸಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಲಿದೆ. 1ಲಕ್ಷ ವಿದ್ಯಾರ್ಥಿಗಳು ಇದರಲ್ಲಿ ಲಾಗಿನ್ ಮಾಡಿಕೊಂಡಿದ್ದಾರೆ. ಹೀಗಾಗಿ ನಮ್ಮ ಪ್ಲಾಟಿಫೈ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಆ್ಯಪ್ ತೆರೆದಿದ್ದು ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಎಲ್ಲಾ ಕ್ಷೇತ್ರಗಳ ಮಾಹಿತಿಯೂ ಲಭ್ಯ: ಕೆಐಟಿ ಪ್ರಾಂಶುಪಾಲ ಡಾ.ನಂದೀಶಯ್ಯ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ತಾಂತ್ರಿಕತೆ ಕೌಶಲ್ಯ ಮುಖ್ಯವಾಗಿ ದ್ದು ಉದ್ಯೋಗಾವಕಾಶಕ್ಕೆ ದಾರಿದೀಪವಾಗಲಿದೆ. ಅದಕ್ಕಾಗಿಯೇ ನಮ್ಮ ಸಂಸ್ಥೆ ಕೆಐಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರಿಗಾಗಿ ಟೆಕ್ನಿಕಲ್ ಲ್ಯಾಬ್‌ಗಳನ್ನು ನಿರ್ಮಿಸಲಾಗುತ್ತಿದೆ. ಎಂಜಿನಿಯ ರಿಂಗ್ ವಿದ್ಯಾರ್ಥಿಗಳಲ್ಲದೆ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೂ ಅತ್ಯವಶ್ಯಕ. ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಅಭಿರುಚಿಗೆ ತಕ್ಕಂತೆ ಸಂಶೋಧನೆ ಮಾಡಲು ಟಾಲ್ಗಳು ಸಿಗಲಿದೆ. ಅಲ್ಲದೆ ಇದು ಶಿಕ್ಷಣ ಕ್ಷೇತ್ರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳ ಮಾಹಿತಿ ಪಡೆದುಕೊಳ್ಳಬಹುದೆಂದರು.
ಡೆವಲಪ್‌ಮೆಂಟ್ ಮೈಕ್ರೋಸಾಫ್ಟ್ನ ನಿರ್ದೇ ಶಕ ಅಭಿಮ್ ಎ.ರಂಗನಾಥ್, ಕೆವಿಎಸ್ ಉಪಾಧ್ಯಕ್ಷ ಎಸ್.ಎಸ್.ನಟರಾಜು, ಖಜಾಂಚಿ ಟಿ.ಎಸ್.ಶಿವ ಪ್ರಸಾದ್, ಕಾರ್ಯದರ್ಶಿಗಳಾದ ಪ್ರೊ.ರಾಜಕು ಮಾರ್, ಕೆ.ಪಿ. ರುದ್ರಮುನಿಸ್ವಾಮಿ, ಟಿ.ಯು.ಜಗದೀಶಮೂರ್ತಿ, ಸದಸ್ಯರಾದ ಬಾಗೇಪಲ್ಲಿ ನಟರಾಜು, ಸುಮನ್, ಸ್ವರ್ಣಗೌರಿ ಇದ್ದರು.