ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್‌ಗ್ಳನ್ನು ಕಳವು ಮಾಡುತ್ತಿದ್ದ ಸಿಬ್ಬಂದಿಯನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಹೊಸೂರು ತಾಲೂಕಿನ ತೋರಪಲ್ಲಿ ನಿವಾಸಿ ಮುರುಗೇಶ್ (29) ಬಂಧಿತ. ಆರೋ ಪಿಯಿಂದ 22 ಲಕ್ಷ ರೂ. ಮೌಲ್ಯದ 55 ಲ್ಯಾಪ್‌ಟಾಪ್ ಗಳನ್ನು ಜಪ್ತಿ ಮಾಡಲಾಗಿದೆ.
ವೈಟ್ ಫೀಲ್ಡ್‌ನ ಐಟಿಪಿಎಲ್ ಟೆಲಿಕಾಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಆಗಾಗ್ಗೆ ಒಂದೊಂದು ಲ್ಯಾಪ್ ಟಾಪ್‌ಗಳು ಕಳುವಾಗುತ್ತಿದ್ದವು. ಈ ಸಂಬಂಧ ಕಂಪನಿ ಮಾಲಿಕ ದೂರು ನೀಡಿದ್ದರು. ಈ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕಮಿಷನರ್ ದಯಾನಂದ ತಿಳಿಸಿದ್ದಾರೆ.
ಆರೋಪಿಯು ಕದ್ದ ಲ್ಯಾಪ್‌ಟಾಪ್ ಗಳನ್ನು ಹೊಸೂರಿನ ಹಳೆಯ ಲ್ಯಾಪ್ ಟಾಪ್ ರಿಪೇರಿ ಮತ್ತು ಮಾರಾಟ ಮಳಿಗೆಗೆ ಮಾರಾಟ ಮಾಡುತ್ತಿದ್ದ ಎಂದರು.
ಟೊಮ್ಯಾಟೋ ಬೆಳೆದು 25 ಲಕ್ಷ ರೂ. ನಷ್ಟ : ಆರೋಪಿ ಮುರುಗೇಶ್ ಬಿಸಿಎ ಪದವೀಧರನಾಗಿದ್ದು, ಸ್ವಂತ ಊರಿನಲ್ಲಿ ಟೊಮ್ಯಾಟೋ ಬೆಳೆದು 25 ಲಕ್ಷ ರೂ. ನಷ್ಟ ಅನುಭವಿಸಿದ್ದ. ಇದಕ್ಕಾಗಿಕೈಸಾಲ ಮಾಡಿಕೊಂಡು ಬಡ್ಡಿ ಪಾವತಿಸಲಾಗದೆ ಕಷ್ಟಪಡುತ್ತಿದ್ದ. ಹೀಗಾಗಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ದಿನಕ್ಕೊಂದು ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ. ಈ ಬಗ್ಗೆ ದೂರು ದಾಖ ಲಾದ ಮೇಲೆ ಕಂಪನಿಯ ಕ್ಯಾಮೆರಾಪರಿಶೀಲಿಸಲಾಯಿತು. ಸಿಸ್ಟಂ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಲ್ಯಾಪ್ ಟಾಪ್ ಕಳವು ಮಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.