Advertisement

Noida: 8ನೇ ಮಹಡಿಯಿಂದ ಕುಸಿದು ಬಿದ್ದ ಲಿಫ್ಟ್… 9 ಐಟಿ ಉದ್ಯೋಗಿಗಳಿಗೆ ಗಾಯ, ಐವರು ಗಂಭೀರ

03:23 PM Dec 23, 2023 | Team Udayavani |

ಉತ್ತರ ಪ್ರದೇಶ: ನೋಯ್ಡಾದ ಬಹುಮಹಡಿ ಕಟ್ಟಡದ ಲಿಫ್ಟ್ ಅನಿರೀಕ್ಷಿತವಾಗಿ ಬಿದ್ದ ಪರಿಣಾಮ ಒಂಬತ್ತು ಐಟಿ ಉದ್ಯೋಗಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗಾಯಗೊಂಡವರನ್ನು ಪಿಯೂಷ್ ಶರ್ಮಾ (22), ಅಭಿಷೇಕ್ ಪಂಡಿತ್ (23), ಅಭಿಷೇಕ್ ಗುಪ್ತಾ (24), ಸೌರಭ್ ಕಟಿಯಾ (28), ರಜತ್ ಶರ್ಮಾ (29), ಶುಭಂ ಭಾರದ್ವಾಜ್ (22), ಯಶು ಶರ್ಮಾ (23), ಸಾಗರ್ (23) ಎಂದು ಗುರುತಿಸಲಾಗಿದೆ. 25) ಮತ್ತು ಅಭಿಜೀತ್ ಸಿಂಗ್ (23). ಎನ್ನಲಾಗಿದೆ.

ನೋಯ್ಡಾ ಸೆಕ್ಟರ್ 125 ರ ರಿವರ್ ಸೈಡ್ ಟವರ್‌ನಲ್ಲಿರುವ 8ನೇ ಮಹಡಿಯಿಂದ ಲಿಫ್ಟ್ ಕುಸಿದು ಬಿದ್ದಿದೆ ಪರಿಣಾಮ ಲಿಫ್ಟ್ ನಲ್ಲಿ ಇದ್ದ ಎಲ್ಲಾ ಒಂಬತ್ತು ಉದ್ಯೋಗಿಗಳು ಗಾಯಗೊಂಡಿದ್ದು ಅದರಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.

ಎರಾಸ್ಮಿತ್ ಟೆಕ್ನಾಲಜೀಸ್ ನ ಉದ್ಯೋಗಿಗಳು 8ನೇ ಮಹಡಿಯಲ್ಲಿರುವ ತಮ್ಮ ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಶುಕ್ರವಾರ ಸಂಜೆ 5.45ಕ್ಕೆ ಈ ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಐದು ಮಂದಿಗೆ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರು ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Election: ಧೈರ್ಯವಿದ್ದರೆ ಪ್ರಧಾನಿ ವಿರುದ್ಧ ಸ್ಪರ್ಧಿಸಿ… ದೀದಿಗೆ ಬಿಜೆಪಿ ನಾಯಕಿಯ ಸವಾಲು

Advertisement

Udayavani is now on Telegram. Click here to join our channel and stay updated with the latest news.

Next