ಬೆಂಗಳೂರು: ಸ್ನೇಹಿತನ ಮನೆಯಲ್ಲಿ ಪಾರ್ಟಿ ಮಾಡಿ ಟೆಕ್ಕಿಯೋರ್ವ ಆತನ ಪತ್ನಿಯನ್ನೇ ಅತ್ಯಾಚಾರಕ್ಕೆತ್ನಿಸಿದ ಘಟನೆ ನಗರದ ಬೆಳ್ಳಂದೂರಿನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ನಗರದ ಎಚ್ ಎಸ್ ಲೇಔಟ್ ನಿವಾಸಿ ನೀಲಬ್ ನಯನ್ (26) ಬಂಧಿತ ಆರೋಪಿ.
ಕಳೆದ ಭಾನುವಾರ ನಯನ್ ನ ಸ್ನೇಹಿತ ಹುಟ್ಟುಹಬ್ಬವಿದ್ದು, ಆತನ ಪತ್ನಿ ಮತ್ತು ನಾಲ್ವರು ಸೇರಿ ಸಮೀಪದ ಕ್ರೀಡಾ ಕಾಂಪ್ಲೆಕ್ಸ್ ಒಂದರಲ್ಲಿ ಪಾರ್ಟಿ ಮಾಡಿ ಸಂಭ್ರಮಿಸಿದ್ದರು. ನಂತರ ಎಲ್ಲರೂ ಸ್ನೇಹಿತನ ಮನೆಗೆ ಹೋಗಿ ಅಲ್ಲಿ ಪಾರ್ಟಿ ಮುಂದುವರಿಸಿದ್ದರು.
ಮನೆಗೆ ಬಂದ ನಂತರ ಸ್ನೇಹಿತರಲ್ಲರೂ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದರು. ಆದರೆ ಮಹಿಳೆ ಮಾತ್ರ ಸುಸ್ತಾಗಿದೆಯೆಂದು ಮಲಗಿದ್ದರು. ಆ ಸಮಯದಲ್ಲಿ ಶೌಚಾಯಲಕ್ಕೆಂದು ಬಂದ ನಯನ್ ಕೋಣೆಯಲ್ಲಿ ಮಲಗಿದ್ದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಮಹಿಳೆ ಕಿರುಚಿಕೊಂಡಾಗ ಸ್ನೇಹಿತರು ಒಳಗೆ ಓಡಿಬಂದಿದ್ದನ್ನು ಅರಿತು ಶೌಚಾಲಯಕ್ಕೆ ಓಡಿ ನಯನ್, ಅಲ್ಲಿಂದ ತಪ್ಪಿಸಿಕೊಂಡಿದ್ದ.
ಮಹಿಳೆ ಮತ್ತುಆಕೆಯ ಪತಿ ನೀಡಿದ ದೂರಿನಂತೆ ಬೆಳ್ಳಂದೂರು ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.