Advertisement

ಲವ್‌ ರಿಜೆಕ್ಟ್;ಯುವತಿ ಎದುರೇ 5ನೇ ಮಹಡಿಯಿಂದ ಹಾರಿ ಟೆಕ್ಕಿ ಆತ್ಮಹತ್ಯೆ

11:51 AM Dec 01, 2018 | |

ಬೆಂಗಳೂರು: ಸಹುದ್ಯೋಗಿ ಯುವತಿಯೊಬ್ಬರು ಪ್ರೀತಿ ಸಲು ಒಪ್ಪದ್ದಕ್ಕೆ ಮನನೊಂದ ಟೆಕ್ಕಿಯೊಬ್ಬ 5 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಚ್‌ಎಸ್‌ಆರ್‌ ಲೇಔಟ್‌ನ ಐಟಿ ಕಂಪೆನಿಯೊಂದರಲ್ಲಿ ನಡೆದಿದೆ. 

Advertisement

ಹೈದರಾಬಾದ್‌ ಮೂಲದ ರೋಷನ್‌(23)ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು,  ಸಹುದ್ಯೋಗಿಯ ಬೆನ್ನು ಬಿದ್ದು ಪ್ರೀತಿಸುವಂತೆ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಪ್ರೀತಿ ಒಪ್ಪದೇ ಇದ್ದ ಕಾರಣಕ್ಕೆ ಆಕೆಯ ಎದುರೇ 5 ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾನೆ. 

ರೋಷನ್‌ನ ಕಾಟ ತಾಳಲಾರದೆ ಯುವತಿ ಕೆಲಸವನ್ನೂ ಬಿಟ್ಟು ಬೇರೆ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದಳು ಎಂದು ತಿಳಿದು ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು , ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next