Advertisement
ನವೋದ್ದಿಮೆಗಳ ಮುಖ್ಯಸ್ಥರ ಜತೆಗೆ ಶನಿವಾರ ನಡೆಸಿದ ವರ್ಚುವಲ್ ಸಂವಾದದಲ್ಲಿ ಮಾತನಾಡಿದ ಅವರು, ಉದ್ದಿಮೆ ಸ್ಥಾಪನೆ ಮಾಡುವವರಿಗೆ ಸರ್ಕಾರದ ಕೆಂಪು ಪಟ್ಟಿಯ ಸಮಸ್ಯೆಯಿಂದ ಮುಕ್ತಿಗೊಳಿಸುವುದಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸಿದ್ದಾರೆ. ಜತೆಗೆ, ಇನ್ನು ಮುಂದೆ ಪ್ರತಿ ವರ್ಷದ ಜ.16 ಅನ್ನು “ರಾಷ್ಟ್ರೀಯ ಸ್ಟಾರ್ಟಪ್ ದಿನ’ವನ್ನಾಗಿ ಆಚರಿಸುವ ಘೋಷಣೆಯನ್ನೂ ಮಾಡಿದ್ದಾರೆ.
Related Articles
Advertisement
ಮೂರು ಅಂಶಗಳು:ಉದ್ದಿಮೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂರು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಹಲವು ಕ್ರಮಗಳ ವ್ಯಾಪ್ತಿಯಿಂದ ಮತ್ತು ಅಧಿಕಾರಶಾಹಿಯಿಂದ ಉದ್ಯಮಶೀಲತೆಗೆ ವಿನಾಯಿತಿ, ಹೊಸ ರೀತಿಯ ಸಂಶೋಧನೆ ಮತ್ತು ನಾವಿನ್ಯತೆಯ ಪ್ರೋತ್ಸಾಹಕ್ಕಾಗಿ ಕ್ರಮಗಳು, ಯುವ ಸಂಶೋಧಕರಿಗೆ ಮತ್ತು ಉದ್ಯಮಿಗಳಿಗೆ ಬೆಂಬಲವನ್ನು ಯಾವತ್ತೂ ನೀಡಲು ಸಿದ್ಧವೆಂದು ಪ್ರಧಾನಿ ತಿಳಿಸಿದರು.