Advertisement
ಕೃತಕ ಬುದ್ಧಿಮತ್ತೆ (ಎ.ಐ) ಹಾಗೂ ಇನ್ನಿತರ ತಂತ್ರಜ್ಞಾನಗಳ ಮೂಲಕ ಈ ವ್ಯವಸ್ಥೆ ಸಿದ್ಧಪಡಿಸಲಾಗಿದ್ದು, ಇದನ್ನೀಗಾಗಲೇ ಭಾರತ- ಚೀನಾ ನಡುವಿನ ನೈಜ ಗಡಿ ರೇಖೆಯಲ್ಲಿ (ಎಲ್‌ಎಸಿ) ಅಳವಡಿಸಲಾಗಿದೆ.
ಇಷ್ಟು ದಿನಗಳ ಕಾಲ ಭಾರತದ ಗಡಿ ರೇಖೆಯ ಬಳಿಗೆ ಬಂದು ಹೋಗಿರುವಂಥ ಎಲ್ಲಾ ಸೈನಿಕರ ಮುಖ ಹಾಗೂ ದೇಹಾಕೃತಿಯ ಮಾಹಿತಿಯ ದತ್ತಾಂಶವನ್ನು ಈ ವ್ಯವಸ್ಥೆಯಡಿ ಸಂಗ್ರಹಿಸಲಾಗಿದೆ. ಗಡಿ ರೇಖೆಯ ಬಳಿ ಯಾವುದೇ ಚೀನಾ ಸೈನಿಕ ಬಂದರೆ, ಅದರ ಮಾಹಿತಿಯನ್ನು ಕಲೆಹಾಕುವ ಈ ವ್ಯವಸ್ಥೆ, ಅದನ್ನು ತನ್ನಲ್ಲಿ ಈಗಾಗಲೇ ಅಡಕವಾಗಿರುವ ಚೀನಾದ ಸೈನಿಕರ ದತ್ತಾಂಶದೊಂದಿಗೆ ತಾಳೆ ಹಾಕಿ, ಸೈನಿಕರ ಆಗಮನದ ಬಗ್ಗೆ ಸೇನೆಗೆ ಸಂದೇಶ ರವಾನಿಸುತ್ತದೆ. ಇದಕ್ಕೆ ತಕ್ಕಂಥ ಸಾಫ್ಟ್ವೇರ್ ಅನ್ನು ಸಿದ್ಧಪಡಿಸಿ ಇದರಲ್ಲಿ ಅಳವಡಿಸಲಾಗಿದೆ ಎಂದು ಸೇನಾ ಕಮಾಂಡರ್ ಲೆ.ಜ. ಮನೋಜ್ ಪಾಂಡೆ ತಿಳಿಸಿದ್ದಾರೆ. ಇದನ್ನೂ ಓದಿ : 10 ಲಕ್ಷ ರೂ.ಮೌಲ್ಯದ ಅಕ್ರಮ ಮದ್ಯ-ವಾಹನ ವಶ, ನಾಲ್ವರ ಬಂಧನ
Related Articles
ಎರಡೂ ದೇಶಗಳ ನಡುವೆ ನೈಜ ಗಡಿ ರೇಖೆ (ಎಲ್‌ಎಸಿ) ಹಾದುಹೋಗಿರುವ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ಬಳಿ ಇದನ್ನು ಅಳವಡಿಸಲಾಗಿದೆ. ಇದಲ್ಲದೆ, ತವಾಂಗ್ ಜಿಲ್ಲೆಯ ನಮಕಾ ಚು ಕಣಿವೆ, ಸಮೊರಂಗ್ ಚು ಹಾಗೂ ಯಾಂಗ್ಸೆ ಎಂಬ ಮೂರು ಕಡೆಗಳಲ್ಲಿ ಈ ಹಿಂದೆ ಚೀನಾ ಸೈನಿಕರು ವಿನಾಕಾರಣ ಗಡಿ ಉಲ್ಲಂ ಸಿದ್ದಾರೆ. ಹಾಗಾಗಿ, ಆ ಪ್ರಾಂತ್ಯಗಳಲ್ಲೂ ಈ ವ್ಯವಸ್ಥೆ ಅಳವಡಿಸಲಾಗುತ್ತದೆ ಎಂದು ತವಾಂಗ್ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸೇನೆಯ ಮೇಜರ್ ಭವ್ಯಾ ಶರ್ಮಾ ತಿಳಿಸಿದ್ದಾರೆ.
Advertisement