ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಕತ್ಲೆಕಾಡು’ ಚಿತ್ರದ ಹಾಡುಗಳು ಮತ್ತು ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಹೊರಬಂದಿವೆ. “ಕತ್ಲೆ ಕಾಡು’ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದ್ದು, ಹಿಂದಿಯಲ್ಲಿ “ಕಾಲ ಜಂಗಲ್ ಎಂಬ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ನಿಯಜುದ್ದೀನ್ ನಿರ್ಮಾಣದ “ಕತ್ಲೆಕಾಡು’ಕನ್ನಡ ಚಿತ್ರಕ್ಕೆ ರಾಜು ದೇವಸಂದ್ರಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಶಿವಾಜಿನಗರ ಲಾಲ್ ಪ್ರಮುಖ ಪಾತ್ರ ನಿರ್ವಹಿಸಿರುವ ಈ ಚಿತ್ರದಲ್ಲಿ ಸಿಂಧು ರಾವ್, ಸಿಂಚನಾ, ಸಂಜನಾ ನಾಯ್ಡು, ಸಂಜೀವ್‌ಕುಮಾರ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆರಾವ್ ರಿಶಿಕ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜ್ ಭಾಸ್ಕರ್ ಹಿನ್ನಲೆ ಸಂಗೀತ ಮತ್ತು ರಮೇಶ್‌ಕೋಯಿರ ಛಾಯಾಗ್ರಹಣವಿದೆ. “ಕತ್ಲೆಕಾಡು’ ಚಿತ್ರದ ಶೀರ್ಷಿಕೆಗೆ “ನೋ ಒನ್‌ಕ್ಯಾನ್ ಎಸ್ಕೆಪ್’ ಅಡಿ ಬರಹವಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಕಾಡಿನಲ್ಲಿ ಮಾಡಲಾಗಿದೆ. “ಕತ್ಲೆಕಾಡಿ’ಗೆ ಹೋದವರು ಯಾಕೆ ಹೊರ ಬರಲಾರರು ಎಂಬ ಕುತೂ ಹಲದ ಸಂಗತಿಗಳ ಸುತ್ತ ಚಿತ್ರ ನಡೆಯಲಿದೆಯಂತೆ.
ಕ್ಷಿಪ್ರವಾಗಿ ಮುಗಿದ ಚಿತ್ರೀಕರಣ :
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಕ್ಷಿಪ್ರ’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಂಡಿದೆ. ನವ ಪ್ರತಿಭೆ ದಕ್ಷ ನಾಯಕನಾಗಿ, ರಮ್ಯಾ ಪ್ರಿಯಾ ಮತ್ತು ಪ್ರೀತಿ ಮೀರಜ್‌ಕರ್ ನಾಯಕಿಯರಾಗಿ ಈ ಚಿತ್ರದಲ್ಲಿಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ಮೋಹನ್ ಜುನೇಜಾ, ನಾಗೇಂದ್ರ ಅರಸ್, ಕಾರ್ತಿಕ್ ವೈಭವ್, ಅರಸು, ಚೇತನ್‌ಕೃಷ್ಣನ್, ಪ್ರಸನ್ನ ಮಾದವ್, ನಂದಗೋಪಾಲ್, ಯಶೋದ, ಲಕ್ಷ್ಮೀ, ಪಾವನಿ, ಪ್ರಿಯಾಂಕಾ ದಿನೇಶ್, ಹರ್ಷಾ, ನಂದನ್, ಮಂಜು, ಸುನಿಲ್. ಜೆ, ಚೇತನ್ ದುರ್ಗಾ, ಧನ್ ಲಾಲ್, ರವಿಲೀ, ವಿಕ್ರಾಂತ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಚಿತ್ರದ ಹಾಡುಗಳಿಗೆ ವಿಕ್ಟರ್ ಲೋಗಿ ಸಂಗೀತವಿದ್ದು, ಅನನ್ಯಾ ಭಟ್, ರ್ಯಾಪಿಡ್ ರಶ್ಮಿ, ಚೇತನ್ ನಾಯಕ್, ಅಭಿಷೇಕ್‌ಕೋಡ್ಯಾಲ್, ಅರವಿಂದ್ ಮುಕುಂದನ್ ಮೊದಲಾದ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಚಿತ್ರಕ್ಕೆ ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ಮಣಿಯನ್ ಸಂಕಲನವಿದೆ. ಸೆಸ್ಪನ್ಸ್ – ಥ್ರಿಲ್ಲರ್ ಜೊತೆಗೆ ಮಹಿಳಾ ಪ್ರಧಾನಕಥಾಹಂದರ ಹೊಂದಿರುವ “ಕ್ಷಿಪ್ರ’ ಚಿತ್ರಕ್ಕೆ ಸತೀಶ್‌ಕೃಷ್ಣ ನಿರ್ದೇಶನವಿದೆ. “ಪ್ಯೂರ್‌ವಿಷನ್ ಎಂಟರ್‌ಟೈನ್ಮೆಂಟ್ಸ್’ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಬೆಂಗಳೂರು, ಕೋಲಾರ,ಕೆಜಿಎಫ್, ಬ್ಯಾಲಕೆರೆ ಮೊದಲಾದಕಡೆಗಳಲ್ಲಿ “ಕ್ಷಿಪ್ರ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಇತ್ತೀಚೆಗೆ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್‌ಕೆಲಸಗಳಲ್ಲಿ ನಿರತವಾಗಿದೆ. ಶೀಘ್ರದಲ್ಲಿಯೇ ಚಿತ್ರದ ಫಸ್ಟ್‌ಲುಕ್ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.