Advertisement
ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಗೌರಿ ಲಂಕೇಶ್ ಮೃತದೇಹ ಮರಣೋತ್ತರ ಪರೀಕ್ಷೆ ಮುಗಿಸಿ ಸಾರ್ವಜನಿಕ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರ ಆವರಣ ಪ್ರವೇಶಿಸಿದಾಗ ಒಡನಾಡಿಗಳ ಆಕ್ರಂದನ ಮುಗಿಲು ಮುಟ್ಟಿತು. ಆಸ್ಪತ್ರೆಯಿಂದ ಪಾರ್ಥಿವ ಶರೀರದ ಜತೆ ಯಲ್ಲೇ ಬಂದ ನಟ ಪ್ರಕಾಶ್ ರೈ, ತಾಯಿ ಇಂದಿರಾ, ಸಹೋದರ ಇಂದ್ರಜಿತ್ ಲಂಕೇಶ್, ಸಹೋ ದರಿ ಕವಿತಾ ಅವರು ಆವರಣದಲ್ಲಿ ಗೌರಿ ಆತ್ಮೀಯ ಬಳಗ ಕಂಡು ದು:ಖತಪ್ತರಾದರು.
ಎಐ ಸಿಸಿ ಉಸ್ತುವಾರಿ ವೇಣು ಗೋ ಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ತೆರಳಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ದುಃಖತಪ್ತ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಮಾಜಿ ಸಿಎಂ ಎಂ.ವೀರಪ್ಪ ಮೊಯಿಲಿ, ಸಚಿವರಾದ ಡಿ.ಕೆ.ಶಿವಕುಮಾರ್, ಉಮಾ ಶ್ರೀ, ರಾಮಲಿಂಗಾರೆಡ್ಡಿ, ಸಾಹಿತಿ ದೇವನೂರು ಮಹದೇವ, ಸಚಿವರಾದ ರಾಮಲಿಂಗಾರೆಡ್ಡಿ, ರಮೇಶಕುಮಾರ್, ಶಾಸಕ ಜಮೀರ್ ಅಹಮದ್ ಸೇರಿದಂತೆ ಹಲವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಮಳೆಯ ನಡುವೆಯೂ ಸಾವಿರಾರು ಮಂದಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆದರು. “ಗೌರಿ ನಿನ್ನ ಬಲಿದಾನ ವ್ಯರ್ಥವಾಗಲು ಬಿಡೆವು…’ ಎಂದು ಘೋಷಣೆ ಕೂಗುತ್ತಲೇ ಒಡನಾಡಿಗಳು ವಿದಾಯ ಹೇಳಿದರು. ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಸಚಿವೆ ಉಮಾಶ್ರೀ ಅವರು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲೇ ಇದ್ದು, ಸಾರ್ವಜನಿಕ ದರ್ಶನದ ಉಸ್ತುವಾರಿ ನೋಡಿಕೊಂಡರು.
Related Articles
Advertisement
ಗೌರಿ ಲಂಕೇಶ್ ಇಚ್ಛೆಯಂತೆ ಹಾಗೂ ಅವರ ಕುಟುಂಬದ ಸದಸ್ಯರ ಆಶಯದಂತೆ ಯಾವುದೇ ವಿಧಿ-ವಿಧಾನಗಳನ್ನು ಪೂರೈಸಲಿಲ್ಲ. ಪಾರ್ಥಿವ ಶರೀರದ ಮೇಲೆ ಹೂವಿಟ್ಟು ಅಂತಿಮ ನಮನ ಸಲ್ಲಿಸಲಾಯಿತು. ನಂತರ ಗೌರಿ ಲಂಕೇಶ್ ಮಣ್ಣಲ್ಲಿ ಮಣ್ಣಾದರು. ಈ ವೇಳೆ ಪ್ರಗತಿಪರರು ಹಾಗೂ ಅಭಿಮಾನಿಗಳಿಂದ “ನಮಗಾಗಿ ಮತ್ತೆ ಹುಟ್ಟಿ ಬಾ ಗೌರಿ ಅಕ್ಕ…’, “ಗೌರಿ ಲಂಕೇಶ್ ಅಮರ್ ರಹೇ ಅಮರ್ ರಹೇ…’ ಘೋಷಣೆಗಳು ಮೊಳಗಿದವು. ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.
ಉಮಾಶ್ರೀ, ಜಮೀರ್ ಮೇಲ್ವಿಚಾರಣೆಮುಖ್ಯಮಂತ್ರಿ ಸಿದ್ದರಾಮಯ್ಯ ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ನಂತರ ರುದ್ರಭೂಮಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡರು. ಈ ಎಲ್ಲ ಕಾರ್ಯಗಳ ಉಸ್ತುವಾರಿಯನ್ನು ಸಚಿವೆ ಉಮಾಶ್ರೀ, ಸ್ಥಳೀಯ ಶಾಸಕ ಜಮೀರ್ ಅಹ ಮದ್ ಅವರಿಗೆ ವಹಿಸಿದ್ದರು. ಕಲಾಕ್ಷೇತ್ರದಿಂದ ರುದ್ರಭೂಮಿಗೆ ಆಂಬ್ಯುಲೆನ್ಸ್‌ನಲ್ಲೇ ಬಂದಿದ್ದರು.