Advertisement

ತಂಡ ರಚಿಸಿಕೊಂಡು ಕೋವಿಡ್ ತಡೆಗೆ ಶ್ರಮ

06:18 PM Sep 13, 2020 | Suhan S |

ಹೂವಿನಹಡಗಲಿ: ತಾಲೂಕಿನಲ್ಲಿ ಕೋವಿಡ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದನ್ನು ಕಟ್ಟಿ ಹಾಕಲು ತಾಲೂಕು ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ತಂಡ ರಚಿಸಿಕೊಂಡು ಕಾರ್ಯ ಮಾಡುತ್ತಿದೆ.

Advertisement

ಸಹಜವಾಗಿ ಈಚೆಗೆ ಕೋವಿಡ್ ಪಾಸಿಟಿವ್‌ ಬಂದ ವ್ಯಕ್ತಿಯನ್ನು ಕೋವಿಡ್ ಯಾವುದೇ ಲಕ್ಷಣಗಳಿಲ್ಲದಿದ್ದಲ್ಲಿ ಅಥವಾ ಅವನು ಆರೋಗ್ಯವಾಗಿದ್ದಲ್ಲಿ ಅಂಥ ವ್ಯಕ್ತಿಯನ್ನು ಮನೆಯಲ್ಲಿಯೇ ಹೋಮ್‌ ಐಸೋಲೇಶನ್‌ ಮಾಡಲು ಆರೋಗ್ಯ ಇಲಾಖೆ ತನ್ನದೇ ಆದ ಒಂದು ತಂಡವನ್ನು ರಚನೆ ಮಾಡಿಕೊಂಡಿದೆ. ಈ ತಂಡದಲ್ಲಿಒಟ್ಟು 3-4 ಜನ ವೈದ್ಯರ ತಂಡವಿದ್ದು ಈ ತಂಡ ಯಾವ ವ್ಯಕ್ತಿ ಪಾಸಿಟಿವ್‌ ಬಂದಿರುತ್ತದೆಯೋ ಅಂತಹ ವ್ಯಕ್ತಿಯ ಆರೋಗ್ಯದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಗಮನಿಸುವುದು ಹಾಗೊಂದು ವೇಳೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಕಂಡು ಬಂದಲ್ಲಿ ಅಂತಹ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವುದು ಈ ತಂಡದ ಕಾರ್ಯವಾಗಿರುತ್ತದೆ.

ಇನ್ನೂ ತಾಲೂಕಿನ ಪ್ರತಿ ಗ್ರಾಮಗಳಲ್ಲಿಯೂ ಕೋವಿಡ್ ವಾರಿಯರ್ಸ್‌ ಕೆಲಸ ಮಾಡುತ್ತಿದ್ದು ಮನೆ ಮನೆಗೆ ಹೋಗಿ ವ್ಯಕ್ತಿಗಳ ಆರೋಗ್ಯವನ್ನು ವಿಚಾರಿಸಲಾಗುತ್ತಿದ್ದು ಯಾವ ವ್ಯಕ್ತಿಯಲ್ಲಿ ಜ್ವರ, ಕೆಮ್ಮ ನೆಗಡಿಯಂತಹ ಲಕ್ಷಣಗಳು ಕಂಡುಬಂದಲ್ಲಿ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ತಿಳಿ ಹೇಳಲಾಗುತ್ತಿದ್ದು ತಾಲೂಕಿನಲ್ಲಿ 4 ಜೋನ್‌ ಗಳನ್ನು ಮಾಡಲಾಗಿದ್ದು ಹೊಳಲು, ಕತ್ತೆ ಬೆನ್ನೂರು, ಮೈಲಾರ,ಮಾಗಳ, ಝೋನ್‌ಗಳನ್ನು ಮಾಡಲಾಗಿದ್ದುಗ್ರಾಮೀಣ ಭಾಗದಲ್ಲಿಯೂ ಸಹ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಒಟ್ಟು 16 ಜನ ಲ್ಯಾಬ್‌ ಟೆಕ್ನಿಶಿಯನ್‌ ತಾಲೂಕಿನ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ತಪಾಸಣೆ ಕೆಲಸ ಮಾಡುತ್ತಿದ್ದಾರೆ. 4 ಮೊಬೈಲ್‌ ತಪಾಸಣೆ ತಂಡಗಳು ಸಹ ತಾಲೂಕಿನಾದ್ಯಾಂತ ಸಂಚರಿಸಲಾಗುತ್ತಿದ್ದು ಆವಶ್ಯ ಬಿದ್ದಲ್ಲಿ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಇನ್ನೂ ಆಕಸ್ಮಾತ್‌ ಆಗಿ ಕೋವಿಡ್ ಪಾಸಿಟಿವ್‌ ಬಂದು ವ್ಯಕ್ತಿ ಮೃತಪಟ್ಟಲ್ಲಿ ಮೃತರ ಸಂಬಂಧಿಕರ ಒಪ್ಪಿಗೆ ಮೇರೆಗೆ ಮೃತ ದೇಹ ನೀಡುವುದಾದಲ್ಲಿ ಅಂಥ ಮೃತ ದೇಹವನ್ನು ಆವರ ಸಂಬಂಧಿಕರುಗಳ ಸಮ್ಮುಖದಲ್ಲಿ ಆಂತಿಮ ಸಂಸ್ಕಾರವನ್ನು ಮಾಡುವಜವಾಬ್ದಾರಿಯನ್ನು ಸಹ ತೆಗೆದುಕೊಳ್ಳಲಾಗಿದ್ದು ಅದಕ್ಕಾಗಿ ಒಬ್ಬ ನೋಡಲ್‌ ವೈದ್ಯ ಹಾಗೂ ಇತರೆ ತಂಡವು ಸಹ ಕೆಲಸ ಮಾಡುತ್ತಿದೆ. ಈ ಎಲ್ಲ ತಂಡಗಳನ್ನು ನೋಡಿಕೊಳ್ಳಲು ಸಮನ್ವಯ ಅಧಿಕಾರಿಯಾಗಿ ಡಾ| ಶಿವಕುಮಾರ್‌ ಮ್ಯಾಗಳಗೆರೆ ಕೆಲಸ ಮಾಡುತ್ತಿದ್ದು ಕೋವಿಡ್ ಕಟ್ಟಿ ಹಾಕಲು ಶ್ರಮಿಸುತ್ತಿದ್ದಾರೆ.

ತಾಲೂಕಿನಲ್ಲಿ ವೈದ್ಯರುಗಳು ತಂಡವನ್ನು ಮಾಡಿಕೊಂಡು ಕೋವಿಡ್ ತಡೆಗಟ್ಟಲು ಶ್ರಮಪಡುತ್ತಿದ್ದೇವೆ. ಸಾರ್ವಜನಿಕರು ಸಹ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಜನರು ವಿನಾಃಕಾರಣ ಹೊರಗಡೆ ಓಡಾಡದಂತೆ ಅವಶ್ಯಕತೆ ಬಿದ್ದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಬಳಕೆ ಮಾಡಿಕೊಳ್ಳುವ ಮೂಲಕವಾಗಿ

Advertisement

ಸಾಮಾಜಿಕ ಆಂತರವನ್ನು ಕಾಪಾಡಿಕೊಂಡು ಹೋಗಬೇಕಾಗಿದೆ. ಆ ಹಿನ್ನೆಲೆಯಲ್ಲಿ ಮಾತ್ರ ಕೊರೋನಾವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎನ್ನುತ್ತಾರೆ. ಇನ್ನೂ ಹೋಮ್‌ ಕ್ವಾರಂಟೈನ್‌ ಆಗಿರುವವರು ಸಮರ್ಪಕವಾಗಿ 17 ದಿನಗಳ ಕಾಲ ಮನೆಯಲ್ಲಿಯೇ ಇರಬೇಕಾಗುತ್ತದೆ. ಇದನ್ನು ಪಾಸಿಟಿವ್‌ ಬಂದಿರುವ ವ್ಯಕ್ತಿ ಚಾಚು ತಪ್ಪದಂತೆ ಮಾಡಬೇಕು ಎನ್ನುತ್ತಾರೆ. -ಡಾ| ಶಿವಕುಮಾರ ಸಾಲಿಗೇರಿ, ತಾಲೂಕಾ ಅರೋಗ್ಯ ಅಧಿಕಾರಿ

 

-ವಿಶ್ವನಾಥ ಹಳ್ಳಿಗುಡಿ

Advertisement

Udayavani is now on Telegram. Click here to join our channel and stay updated with the latest news.

Next