Advertisement

ಕರ್ನಾಟಕಕ್ಕೆ ಜಯ ತರುವರೇ ದೇವದತ್ತ, ಮನೀಶ್: 7 ವಿಕೆಟ್‌ ನಿಂದ 254 ರನ್‌ ಗಳಿಸುವ ಒತ್ತಡ

12:10 PM Mar 03, 2020 | Team Udayavani |

ಕೋಲ್ಕತಾ: ರಣಜಿ ಸೆಮಿಫೈನಲ್‌ ಮುಖಾಮುಖೀಯಲ್ಲಿ ಆತಿಥೇಯ ಬಂಗಾಲ ವಿರುದ್ಧ ಕರ್ನಾಟಕ ಬ್ಯಾಟಿಂಗ್‌ ಪವಾಡದ ನಿರೀಕ್ಷೆಯಲ್ಲಿದೆ. ಕರುಣ್‌ ನಾಯರ್‌ ಪಡೆ ಸೋಲಿನತ್ತ ಮುಖ ಮಾಡಿದರೂ ಗೆದ್ದು ಫೈನಲ್‌ ಪ್ರವೇಶಿಸೀತೇ ಎಂಬ ದೂರದ ನಿರೀಕ್ಷೆಯೊಂದು ಅಭಿಮಾನಿಗಳಲ್ಲಿ ಗರಿಗೆದರಿದೆ.

Advertisement

ಗೆಲುವಿಗೆ 352 ರನ್ನುಗಳ ಬೃಹತ್‌ ಗುರಿ ಬೆನ್ನಟ್ಟುತ್ತಿರುವ ರಾಜ್ಯ ತಂಡ, 3ನೇ ದಿನದಾಟದ ಕೊನೆಯಲ್ಲಿ 98 ರನ್ನಿಗೆ 3 ವಿಕೆಟ್‌ ಕಳೆದುಕೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಹಿನ್ನಡೆಗೆ ಸಿಲುಕಿದ ಕರ್ನಾಟಕಕ್ಕೆ ಫೈನಲ್‌ ಪ್ರವೇಶಿಸಲು ಸ್ಪಷ್ಟ ಗೆಲುವು ಅಗತ್ಯವಾಗಿದೆ. ಉಳಿದೆರಡು ದಿನಗಳ ಆಟದಲ್ಲಿ ಇನ್ನೂ 254 ರನ್‌ ಪೇರಿಸಬೇಕಾದ ಒತ್ತಡ ನಾಯರ್‌ ಬಳಗದ ಮೇಲಿದೆ. ಕ್ರೀಸ್‌ ಆಕ್ರಮಿಸಿಕೊಂಡು ಆಡಿದರೆ ಇದು ಅಸಾಧ್ಯವೇನೂ ಅಲ್ಲ. 9ನೇ ವಿಕೆಟ್‌ ತನಕ ಕರ್ನಾಟಕ ಬ್ಯಾಟಿಂಗ್‌ ಬಲಿಷ್ಠವಾಗಿಯೇ ಇದೆ. ಕೆ.ವಿ. ಸಿದ್ಧಾರ್ಥ್, ಎಸ್‌. ಶರತ್‌, ಕೆ. ಗೌತಮ್‌, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ ಅವರೆಲ್ಲ ಎಚ್ಚರಿಕೆಯಿಂದ ನಿಂತು ಆಡಿದರೆ ಗೆಲುವು ಅಸಾಧ್ಯವೇನಲ್ಲ. ಒಂದೆರಡು ಉತ್ತಮ ಜತೆಯಾಟ ದಾಖಲಾದರೆ ಬಂಗಾಲ ಒತ್ತಡಕ್ಕೆ ಸಿಲುಕುವುದು ಖಂಡಿತ. ಆದರೆ ಈಗಿನ ಸ್ಥಿತಿಯಲ್ಲಿ ಆತಿಥೇಯ ಬೌಲರ್‌ಗಳ ಮೇಲಾಗಿರುವುದು ಸುಳ್ಳಲ್ಲ.

ಭರ್ತಿ 50 ರನ್‌ ಮಾಡಿರುವ ದೇವದತ್ತ ಪಡಿಕ್ಕಲ್‌ ಹೋರಾಟವೊಂದನ್ನು ಜಾರಿಯಲ್ಲಿರಿದ್ದಾರೆ. ಇವರೊಂದಿಗೆ 11 ರನ್‌ ಗಳಿಸಿರುವ ಮನೀಷ್‌ ಪಾಂಡೆ ಕ್ರೀಸ್‌ನಲ್ಲಿದ್ದಾರೆ.

ಸೊನ್ನೆ ಸುತ್ತಿದ ರಾಹುಲ್‌
ಕರ್ನಾಟಕಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟ್ಸ್‌ ಮನ್‌ ಕೆ.ಎಲ್‌. ರಾಹುಲ್‌ ಅವರ ಮತ್ತೂಂದು ವೈಫ‌ಲ್ಯ ಗಂಡಾಂತರವಾಗಿ ಪರಿಣಮಿಸಿತು. ದ್ವಿತೀಯ ಎಸೆತದಲ್ಲಿ, ಖಾತೆ ತೆರೆಯುವ
ಮೊದಲೇ ರಾಹುಲ್‌ ಪೆವಿಲಿಯನ್‌ ಕಡೆಗೆ ನಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಕಿತ್ತು ನಡುಗಿಸಿದ್ದ ಇಶಾನ್‌ ಪೊರೆಲ್‌ ಅಪಾಯಕಾರಿ ಬ್ಯಾಟ್ಸ್‌ಮನ್‌ ರಾಹುಲ್‌ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದರು.

Advertisement

ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ಆರ್‌. ಸಮರ್ಥ್ (27) ತಂಡದ ಮೊತ್ತ 57 ರನ್‌ ಆಗಿದ್ದಾಗ ಆಕಾಶ್‌ ದೀಪ್‌ ಎಸೆತದಲ್ಲಿ ಎಲ್‌ಬಿ ಆಗಿ ಹೊರನಡೆದರು. ತಂಡದ ಸ್ಕೋರ್‌ 76ಕ್ಕೆ ಏರಿದಾಗ ಕೇವಲ 6 ರನ್‌ ಗಳಿಸಿದ್ದ ಕರುಣ್‌ ನಾಯರ್‌ ಕೂಡ ಔಟಾದರು. ಮುಕೇಶ್‌ ಎಸೆತದಲ್ಲಿ ಎಲ್‌ಬಿ ಬಲೆಗೆ ಬೀಳುವುದರೊಂದಿಗೆ
ನಾಯಕನ ಬ್ಯಾಟಿಂಗಿಗೆ ತೆರೆಬಿತ್ತು. ಹೀಗೆ ಕರ್ನಾಟಕದ ಮೂವರೂ ಲೆಗ್‌ ಬಿಫೋರ್‌ ಮೂಲಕವೇ ವಿಕೆಟ್‌ ಕಳೆದುಕೊಂಡದ್ದು ವಿಪರ್ಯಾಸ.

ಬಂಗಾಲ 161ಕ್ಕೆ ಆಲೌಟ್‌
ಇದಕ್ಕೂ ಮೊದಲು 4ಕ್ಕೆ 72 ರನ್‌ ಗಳಿಸಿದಲ್ಲಿಂದ ದ್ವಿತೀಯ ಇನ್ನಿಂಗ್ಸ್‌ ಬ್ಯಾಟಿಂಗ್ ಮುಂದುವರಿಸಿದ ಬಂಗಾಲ 161ಕ್ಕೆ ಆಲೌಟ್‌ ಆಯಿತು. ಒಟ್ಟು ಮುನ್ನಡೆ 350ರ ಗಡಿ ದಾಟಿತು. ಸುದೀಪ್‌ ಚಟರ್ಜಿ (45), ಅನುಸ್ತೂಪ್‌ ಮಜುಮಾರ್‌ (41) ಹಾಗೂ ಶಾಬಾಜ್‌ ಅಹ್ಮದ್‌ (31) ಉತ್ತಮ ಆಟ ಪ್ರದರ್ಶಿಸಿದರು. ರಾಜ್ಯದ ಪರ ಅಭಿಮನ್ಯು ಮಿಥುನ್‌ 4, ಕೆ. ಗೌತಮ್‌ 3, ರೋನಿತ್‌ ಮೋರೆ 2 ಹಾಗೂ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್‌ ಉರುಳಿಸಿದರು

ಸಂಕ್ಷಿಪ್ತ ಸ್ಕೋರ್‌
ಬಂಗಾಲ-312 ಮತ್ತು 161 (ಸುದೀಪ್‌ 45, ಮಜುಮಾªರ್‌ 41, ಶಾಬಾಜ್‌ 31, ಮಿಥುನ್‌ 23ಕ್ಕೆ 4, ಕೆ. ಗೌತಮ್‌ 15ಕ್ಕೆ 3, ಮೋರೆ 56ಕ್ಕೆ 2, ಪ್ರಸಿದ್ಧ್ ಕೃಷ್ಣ 45ಕ್ಕೆ 1).
ಕರ್ನಾಟಕ-122 ಮತ್ತು 3 ವಿಕೆಟಿಗೆ 98 (ಪಡಿಕ್ಕಲ್‌ ಬ್ಯಾಟಿಂಗ್‌ 50, ಸಮರ್ಥ್ 27, ಪಾಂಡೆ ಬ್ಯಾಟಿಂಗ್‌ 11).

Advertisement

Udayavani is now on Telegram. Click here to join our channel and stay updated with the latest news.

Next