Advertisement
ತೇಜ್‌ಪುರ ವಿಶ್ವವಿದ್ಯಾಲಯದ 18 ನೇ ಸಮ್ಮೇಳನದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಕ್ರಿಕೆಟ್, ಕ್ರೀಡೆಯ ದೃಷ್ಟಿಯಿಂದ ಮಾತ್ರವಲ್ಲದೆ ಒಂದು ದೊಡ್ಡ ಜೀವನ ಪಾಠವನ್ನೂ ಸಹ ಹೊಂದಿದೆ. ಮೊದಲ ಪಾಠವೆಂದರೆ ನಮ್ಮ ಸಾಮರ್ಥ್ಯವನ್ನು ನಂಬುವುದು, ಎರಡನೆಯ ಪಾಠವೆಂದರೆ ಸಕಾರಾತ್ಮಕ ಮನಸ್ಥಿತಿ ಮತ್ತು ನಾವು ಸಕಾರಾತ್ಮಕ ಮನಸ್ಥಿತಿಯೊಂದಿಗೆ ಮುನ್ನಡೆದರೆ ಫಲಿತಾಂಶ ಕೂಡ ಸಕಾರಾತ್ಮಕವಾಗಿರುತ್ತದೆ. “ಮೂರನೆಯ ಪ್ರಮುಖ ಪಾಠವೆಂದರೆ ಕಠಿಣ ಗೆಲುವು ಸಾಧಿಸುವ ಆಯ್ಕೆಯನ್ನು ಹೊಂದಿದ್ದರೆ, ನೀವು ಖಂಡಿತವಾಗಿಯೂ ಗೆಲ್ಲುವ ಅವಕಾಶವನ್ನು ಅನ್ವೇಷಿಸಬೇಕು. ವಿಜಯದ ಹಾದಿಯಲ್ಲಿ ನೀವು ಒಂದೆರಡು ಸೋಲುಗಳನ್ನು ಎದುರಿಸಿದ್ದರೂ ಸಹ, ಅದರಲ್ಲಿ ಯಾವುದೇ ಅಡ್ಡಿಯಿಲ್ಲ” ಎಂದು ಪ್ರಧಾನಿ ಹೇಳಿದರು.
Related Articles
Advertisement
ಎರಡನೇ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ಆಟಗಾರರಿಗೆ ಗಾಯಗಳನ್ನು ಎದುರಿಸಬೇಕಾಯಿತು. ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ನಂತರ ತಮ್ಮ ಮಗಳ ಸಲುವಾಗಿ ಮನೆಗೆ ಮರಳಿದರು. ಮೊಹಮ್ಮದ್ ಶಮಿ, ಉಮೇಶ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಹನುಮಾ ವಿಹಾರಿ ಮತ್ತು ಜಸ್ಪ್ರೀತ್ ಬುಮ್ರಾ ಮುಂತಾದವರು ಸರಣಿಯ ಅವಧಿಯಲ್ಲಿ ಗಾಯಗೊಂಡರು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ(ಎಸ್‌ಸಿಜಿ) ನಡೆದ ಮೂರನೇ ಟೆಸ್ಟ್‌ನಲ್ಲಿ ನಡೆದ ಪಂದ್ಯ ಡ್ರಾ ಕಂಡ ನಂತರ, ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್ ಮತ್ತು ಟಿ.ನಟರಾಜನ್ ಒಳಗೊಂಡ ಹೊಸಬರ ತಂಡ ಬೌಲಿಂಗ್ ದಾಳಿಯನ್ನು ನಡೆಸಬೇಕಾಯಿತು. ಈ ಎಲ್ಲ ವಿಲಕ್ಷಣಗಳನ್ನು ಎದುರಿಸಿ, ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಅಂತಿಮ ಇನ್ನಿಂಗ್ಸ್‌ನಲ್ಲಿ 328 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸರಣಿಯನ್ನು ಗೆಲ್ಲುವಲ್ಲಿ ಟೀಮ್ ಇಂಡಿಯಾ ಇನ್ನೂ ಮೂರು ವಿಕೆಟ್‌ಗಳು ಇರುವಾಗಲೇ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು.
ಕೆಲವು ಆಟಗಾರರು ಗಾಯಗೊಂಡಿದ್ದರೂ, ಪಂದ್ಯವನ್ನು ಉಳಿಸುವ ಪ್ರಯತ್ನದಲ್ಲಿದ್ದರು. ಸವಾಲಿನ ಪರಿಸ್ಥಿತಿಗಳು ಅವರನ್ನು ತಡೆಯಲಿಲ್ಲ. ಕೆಲವು ಆಟಗಾರರಿಗೆ ಅನುಭವದ ಕೊರತೆಯಿದ್ದರೂ ಅವರಲ್ಲಿ ಧೈರ್ಯದ ಕೊರತೆಯಿರಲಿಲ್ಲ. ಸಿಕ್ಕ ಅವಕಾಶದಲ್ಲಿ ಅವರು ಇತಿಹಾಸ ಸೃಷ್ಟಿಸಿದರು ಪ್ರಧಾನಿ ಮೋದಿ ಟೀಮ್ ಇಂಡಿಯಾ ಆಟಗಾರರನ್ನು ಶ್ಲಾಘಿಸಿದರು.
“ಅಪಾಯ ಅಥವಾ ಪ್ರಯೋಗವನ್ನು ತೆಗೆದುಕೊಳ್ಳಲು ಯಾರೂ ಭಯಪಡಬಾರದು, ನಾವು ಪೂರ್ವಭಾವಿಯಾಗಿ ಮತ್ತು ನಿರ್ಭಯರಾಗಿರಬೇಕು” ಎಂದು ಮೋದಿ ಅಭಿಪ್ರಾಯ ಪಟ್ಟರು.
ಇದನ್ನೂ ಓದಿ : ಅತ್ಯುತ್ತಮ ತಂತ್ರಜ್ಞಾನ ಕಂಡು ಹಿಡಿದ ಟ್ವಿಟ್ಟರ್ ಗೆ ಉದ್ಯಮಿ ಎಲೋನ್ ಮಸ್ಕ್ ಬಹುಮಾನ ಘೋಷಣೆ!