Advertisement

Team India: ಕ್ರಿಕೆಟ್‌ ಆಯ್ಕೆ ಸಮಿತಿಯೊಂದಿಗೆ ಗಂಭೀರ್‌, ಜಯ್‌ ಶಾ ಚರ್ಚೆ

01:10 AM Jul 18, 2024 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾದ ನೂತನ ಕೋಚ್‌ ಗೌತಮ್‌ ಗಂಭೀರ್‌ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ರಾಷ್ಟ್ರೀಯ ಆಯ್ಕೆ ಸಮಿತಿ ಜತೆ ಚರ್ಚೆ ನಡೆಸಿದ್ದಾರೆ. ಆನ್‌ಲೈನ್‌ನಲ್ಲಿ ಸುಮಾರು ಒಂದು ಗಂಟೆ ಕಾಲ ಇವರ ನಡುವೆ ಮಾತುಕತೆ ನಡೆದಿತ್ತು ಎಂಬುದಾಗಿ ಕ್ರಿಕೆಟ್‌ ವೆಬ್‌ಸೈಟ್‌ ಒಂದು ವರದಿ ಮಾಡಿದೆ.

Advertisement

ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಸದಸ್ಯರೆಲ್ಲ ಇದರಲ್ಲಿ ಪಾಲ್ಗೊಂಡಿದ್ದರು. ಗಂಭೀರ್‌ ತಮ್ಮ ಹೊಸದಿಲ್ಲಿ ನಿವಾಸದಿಂದಲೇ ಈ ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಿದರು. ಭವಿಷ್ಯದ ಟೀಮ್‌ ಇಂಡಿಯಾ, ತನ್ನ ಅಪೇಕ್ಷೆಯ ತಂಡ ಹಾಗೂ ನಾಯಕತ್ವದ ಕುರಿತು ಮಾತುಕತೆ ನಡೆಯಿತು. ಆಯ್ಕೆ ವಿಷಯದಲ್ಲಿ ತಾನು ಕೈಯಾಡಿಸುವುದಿಲ್ಲ, ಆದರೆ ತನ್ನ ಬಯಕೆಯ ತಂಡ ಹೇಗಿರಬೇಕು ಎಂಬ ಕುರಿತು ಗಂಭೀರ್‌ ಹೇಳಿಕೊಂಡರು ಎಂದು ವರದಿಯಾಗಿದೆ. ಮೂರೂ ಮಾದರಿಗಳಲ್ಲಿ ಆಡಬಲ್ಲ ಕ್ರಿಕೆಟಿಗರನ್ನು ತಾನು ಬಯಸುವುದಾಗಿ ಕೋಚ್‌ ಆದ ಬಳಿಕ ಗಂಭೀರ್‌ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.

ನಾಯಕರಾರು ಲಂಕಾ ಸರಣಿಗೆ?
ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ನಾಯಕತ್ವದ ಕುರಿತು ಏನೇನು ಮಾತುಕತೆ ನಡೆಯಿತು ಎಂದು ತಿಳಿದು ಬಂದಿಲ್ಲ. ಟಿ20 ಹಾಗೂ ಏಕದಿನ ತಂಡಗಳು ಶೀಘ್ರದಲ್ಲೇ ಪ್ರಕಟಗೊಳ್ಳಲಿವೆ. ಟಿ20 ಸರಣಿಗೆ ಹಾರ್ದಿಕ್‌ ಪಾಂಡ್ಯ ಅಥವಾ ಸೂರ್ಯಕುಮಾರ್‌ ಯಾದವ್‌, ಏಕದಿನ ಸರಣಿಗೆ ರೋಹಿತ್‌ ಶರ್ಮ ನಾಯಕರಾಗುವ ಸಾಧ್ಯತೆ ಇದೆ.

ಏಕದಿನ ಆಡಲಿರುವ ರೋಹಿತ್‌
ರೋಹಿತ್‌ ಶರ್ಮ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಲ್ಲಿ ಆಡು ವು ದಾಗಿ ಹೇಳಿರುವ ಬಗ್ಗೆ ಈ ಸಭೆ  ಯಲ್ಲಿ ಸುಳಿವು ಲಭಿಸಿದೆ. ಐಸಿಸಿ ಚಾಂಪಿ ಯನ್ಸ್‌ ಟ್ರೋಫಿ ಪಂದ್ಯಾ ವಳಿಗೂ ಮುನ್ನ ಹೆಚ್ಚಿನ ಏಕದಿನ ಪಂದ್ಯ ಗಳಿಲ್ಲದ ಕಾರಣ ರೋಹಿತ್‌ ಈ ಸರಣಿ ಯಲ್ಲಿ ಆಡುವುದು ಬಹುತೇಕ ಖಚಿತ.

ಅಯ್ಯರ್‌ ಪುನರಾಗಮನ?
ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರಿಗೆ ವಿಶ್ರಾಂತಿ ಲಭಿಸುವ ಕಾರಣ ಶ್ರೇಯಸ್‌ ಅಯ್ಯರ್‌ ಏಕದಿನ ತಂಡವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಹಾಗೆಯೇ ಕೆ.ಎಲ್‌. ರಾಹುಲ್‌ ಕೂಡ.

Advertisement

ಅಭ್ಯಾಸ ಆರಂಭಿಸಿದ ಶಮಿ
ಹೊಸದಿಲ್ಲಿ: ಮೊಹಮ್ಮದ್‌ ಶಮಿ ಬೌಲಿಂಗ್‌ ಅಭ್ಯಾಸ ಆರಂಭಿಸಿದ್ದಾರೆ. ತಮ್ಮ ಬೌಲಿಂಗ್‌ ವೀಡಿಯೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಏಕದಿನ ವಿಶ್ವಕಪ್‌ ವೇಳೆ ಹಿಮ್ಮಡಿ ಗಾಯಕ್ಕೀಡಾಗಿದ್ದ ಶಮಿ, 9 ತಿಂಗಳಿನಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಟಿ20 ವಿಶ್ವಕಪ್‌ನಲ್ಲೂ ಅವರಿಗೆ ಆಡಲಾಗಿರಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಕೊಂಡ ಬಳಿಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next