Advertisement

ಇಂಗ್ಲೆಂಡ್ ಸ್ಪಿನ್ ಜಾಲಕ್ಕೆ ಸಿಲುಕಿದ ಟೀಂ ಇಂಡಿಯಾ: 145ಕ್ಕೆ ಆಲೌಟ್, ಅಲ್ಪ ಮುನ್ನಡೆ

04:09 PM Feb 25, 2021 | Team Udayavani |

ಅಹಮದಾಬಾದ್: ಇಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಗಳ ದಾಳಿ ಎದುರಿಸಲಾಗದ ಟೀಂ ಇಂಡಿಯಾ ಮುಗ್ಗರಿಸಿದೆ. ಆದರೂ 33 ರನ್ ಗಳ ಮುನ್ನಡೆ ಸಾಧಿಸಿದೆ.

Advertisement

ಮೂರು ವಿಕೆಟ್ ಗೆ 99 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಇಂದು ಕೇವಲ 145 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳುದುಕೊಂಡಿತು. ಅಜಿಂಕ್ಯ ರಹಾನೆ, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ಅಗ್ಗಕ್ಕೆ ಔಟಾಗಿ ತಂಡದ ಸಂಕಷ್ಟಕ್ಕೆ ಕಾರಣರಾದರು.

ಅಜೇಯರಾಗಿದ್ದ ರೋಹಿತ್ ಶರ್ಮಾ 66 ರನ್ ಗಳಿಸಿ ಔಟಾದರು. ಉಳಿದಂತೆ ನಾಯಕ ವಿರಾಟ್ ಕೊಹ್ಲಿ 27 ರನ್, ರವಿ ಅಶ್ವಿನ್ 17 ರನ್ ಮತ್ತು ಇಶಾಂತ್ ಶರ್ಮಾ (10)  ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು.

ಇಂಗ್ಲೆಂಡ್ ಪರ ಸ್ಪಿನ್ನರ್ ಗಳಾದ ಜ್ಯಾಕ್ ಲೀಚ್ ಮತ್ತು ನಾಯಕ ರೂಟ್ ಬಿಗು ದಾಳಿ ನಡೆಸಿದರು.

ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 112 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. ಇದು ಸರಣಿಯ ಮೂರನೇ ಪಂದ್ಯವಾಗಿದ್ದು, ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next