Advertisement
ಟಿ 20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿ 17 ವರ್ಷ ಬಳಿಕ 2ನೇ ಬಾರಿ ಚಾಂಪಿಯನ್ ಆಗಿ ವೆಸ್ಟ್‌ಇಂಡೀಸ್‌ನ ಬಾರ್ಬೊಡಸ್‌ನಿಂದ ಟ್ರೋಫಿ ಜೊತೆಗೆ ಆಗಮಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳು ಭರ್ಜರಿ ಸ್ವಾಗತವನ್ನೇ ನೀಡಿದ್ದಾರೆ.
Related Articles
Advertisement
ವಾಂಖೆಡೆಯಲ್ಲಿ ಅಭಿನಂದನಾ ಸಮಾರಂಭ: ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆಯಿಂದಲೇ ಜಮಾಯಿಸಿ ಕಾತರದಿಂದ ಕಾಯುತ್ತಿದ್ದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಪರ ಜಯಘೋಷ ಕೂಗಿದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ವಾಂಖೆಡೆ ಕ್ರೀಡಾಂಗಣದ ಕಾರ್ಯಕ್ರಮದಲ್ಲಿ ನಾಯಕ ರೋಹಿತ್ ಶರ್ಮಾ ಮಾತನಾಡಿ ಪಾಂಡ್ಯ ಹಾಕಿದ ಕೊನೆಯ ಓವರ್ ಫೈನಲ್ ಪಂದ್ಯದ ದಿಕ್ಕು ಬದಲಾಯಿಸಲು ನೆರವಾಯಿತು. ಸೂರ್ಯ ಕುಮಾರ್ ಹಿಡಿದ ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಅದ್ಬುತವಾಗಿತ್ತು ಎಂದರು. ರೋಹಿತ್ ಕರೆಯಿಂದ ಕೋಚ್ ಆಗಿ ಮುಂದುವರಿದೆ ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ಮಾತನಾಡಿ ಟಿ-20 ವಿಶ್ವಕಪ್ ಮುಗಿಯವವರೆಗೆ ಭಾರತ ತಂಡಕ್ಕೆ ಕೋಚ್ ಆಗಿ ಮುಂದುವರಿಯಲು ನಾಯಕ ರೋಹಿತ್ ಶರ್ಮಾ ದೂರವಾಣಿ ಕರೆ ಮಾಡಿ ಮನವಿ ಮಾಡಿ ನನ್ನ ಮನವೊಲಿಸಿದ್ದರು ಎಂದು ರಾಹುಲ್ ದ್ರಾವಿಡ್ ಮೆಲುಕು ಹಾಕಿದರು. ಕೊಹ್ಲಿ ವೇದಿಕೆಗೆ ಬರಲಿ ಎಂದು ಕೂಗು
ಸಮಾರಂಭ ವೇಳೆ ವಿರಾಟ್ ಕೊಹ್ಲಿ ವೇದಿಕೆ ಬರಲಿ ಎಂದು ಅಭಿಮಾನಿಗಳು ಕೂಗಿದರು ಈ ವೇಳೆ ಆಗಮಿಸಿದ ಕೊಹ್ಲಿ ಬಂದು ಮಾತನಾಡಿ ಬೂಮ್ರಾ ಅಂತಹ ಬೌಲರ್ ಪೀಳಿಗೆಗೆ (ಜನರೇಷನ್) ಒಬ್ಬರು ಸಿಗುವುದು ಎಂದರು. ದಕ್ಷಿಣ ಆಫ್ರಿಕ್ರಾ ವಿರುದ್ಧ ನಡೆದ ಫೈನಲ್ ಪಂದ್ಯದ ಕೊನೆಯ ಓವರ್ ನಿಜವಾಗಲೂ ಅದ್ಭುತ, ಈತ ಜಗತ್ತಿನ ೮ನೇ ಅದ್ಭುತ ಎಂದು ಹೊಗಳಿದರು. ಬಿಸಿಸಿಐಯಿಂದ ಬಹುಮಾನ ಹಸ್ತಾಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಚಾಂಪಿಯನ್ ಭಾರತ ತಂಡಕ್ಕೆ ಘೋಷಿಸಿದ್ದ 125 ಕೋಟಿ ರೂಪಾಯಿ ಮೊತ್ತದ ಚೆಕ್‌ನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ಜಯ್ ಶಾ ಹಸ್ತಾಂತರಿಸಿದರು.