Advertisement

ಬಾಲಂಗೋಚಿಗಳ ಪೆವಿಲಿಯನ್ ಪರೇಡ್: ದಿನದ ಆರಂಭದಲ್ಲೇ ಟೀಂ ಇಂಡಿಯಾ ಆಲ್ ಔಟ್

10:27 AM Dec 18, 2020 | keerthan |

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನ ಎರಡನೇ ದಿನದ ಆರಂಭದಲ್ಲೇ ಟೀಂ ಇಂಡಿಯಾ ಮುಗ್ಗರಿಸಿದೆ. ಬಾಲಂಗೋಚಿಗಳ ಪೆವಿಲಿಯನ್ ಪರೇಡ್ ನ ಕಾರಣದಿಂದ ಭಾರತ ತಂಡ 244 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.

Advertisement

ಮೊದಲ ದಿನದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದ್ದ ಟೀಂ ಇಂಡಿಯಾ ಇಂದು ತನ್ನ ಮೊತ್ತಕ್ಕೆ ಕೇವಲ 11 ರನ್ ಸೇರಿಸಿ ನಾಲ್ಕು ವಿಕೆಟ್ ಕಳೆದುಕೊಂಡಿತು.

ತಲಾ 9 ರನ್ ಮತ್ತು 15 ರನ್ ಅಜೇಯರಾಗುಳಿದಿದ್ದ ಸಾಹಾ ಮತ್ತು ಅಶ್ವಿನ್  ಇಂದು ಒಂದು ರನ್ ಸೇರಿಸದೆ ವಿಕೆಟ್ ಒಪ್ಪಿಸಿದರು. ಉಮೇಶ್ ಯಾದವ್ ಆರು ರನ್ ಗಳಿಸಿದರೆ ಬುಮ್ರಾ ನಾಲ್ಕು ರನ್ ಗಳಿಸಿದರು. ಸ್ಟಾರ್ಕ್ ಮತ್ತು ಕಮಿನ್ಸ್ ಇಂದು ತಲಾ ಎರಡು ವಿಕೆಟ್ ಪಡೆದರು.

ಒಟ್ಟಾರೆ ಭಾರತದ ಪರ ನಾಯಕ ವಿರಾಟ್ 74 ರನ್ ಬಾರಿಸಿದ್ದೇ ಅತೀ ಹೆಚ್ಚು ರನ್, ಉಳಿದಂತೆ ಪುಜಾರ 43 ರನ್ ಮತ್ತು ರಹಾನೆ 42 ರನ್ ಗಳಿಸಿದ್ದರು. ಆಸೀಸ್ ಪರ ಸ್ಟಾರ್ಕ್ ನಾಲ್ಕು ವಿಕೆಟ್, ಕಮಿನ್ಸ್ ಮೂರು ವಿಕೆಟ್ ಕಬಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next