Advertisement

ನಿವೃತ್ತಿಯಾದ್ರೂ ನಿಂತಿಲ್ಲ ಗಣಿತ ಬೋಧನೆ

11:54 AM Dec 22, 2021 | Team Udayavani |

ಕಲಬುರಗಿ: ಡಿಸೆಂಬರ್‌ 22ರಂದು ರಾಷ್ಟ್ರೀಯ ಗಣಿತ ದಿನ. ಬಹಳಷ್ಟು ಶಾಲೆಗಳಲ್ಲಿ ಗಣಿತ ಶಿಕ್ಷಕರಿಲ್ಲ. ಗಣಿತ ಶಿಕ್ಷಕರು ಇಲ್ಲದ್ದರಿಂದ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದ ಹಿನ್ನೆಲೆಯಲ್ಲಿ ನಿವೃತ್ತಿಯಾಗಿ 18 ವರ್ಷಗಳಾದ ನಂತರ ಅದೇ ಉತ್ಸಾಹದಿಂದ ಇಲ್ಲೊಬ್ಬರು ಗಣಿತ ವಿಷಯ ಬೋಧಿಸುತ್ತಿದ್ದಾರೆ.

Advertisement

ಅಫಜಲಪುರ ತಾಲೂಕಿನ ಭೈರಾಮಡಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿಯೇ ಸೇವೆ ಸಲ್ಲಿಸಿ, ನಿವೃತ್ತಿಯಾಗಿ 18 ವರ್ಷಗಳಾಗಿದ್ದು, ಸದ್ಯ 78 ವರ್ಷವಾಗಿರುವ ಯಶ್ವಂತರಾವ್‌ ಬಿರಾದಾರ ಅವರೇ ಗಣಿತ ಹೇಳಿಕೊಡುತ್ತಿರುವ ಗುರುಗಳು. ಪ್ರಸಕ್ತ ವರ್ಷ ನಡೆದ ಶಿಕ್ಷಕರ ಸಾರ್ವಜನಿಕ ವರ್ಗಾವಣೆಯಲ್ಲಿ ಭೈರಾಮಡಗಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಿಂದ ಆರು ಶಿಕ್ಷಕರು ಇದ್ದಾರೆ. ಹೀಗಾಗಿ ಗಣಿತ ಯಾರೂ ಬೋಧಿಸುತ್ತಿಲ್ಲ.

ಕೊರೊನಾದಿಂದ ಮೊದಲೇ ಎರಡುವರ್ಷದಿಂದ ಶಾಲೆಯಿಂದಹೊರಗುಳಿದ ವಿದ್ಯಾರ್ಥಿಗಳು ಎಲ್ಲವನ್ನು ಮರೆತಿದ್ದಾರೆ. ಕಬ್ಬಿಣದ ಕಡಲೆಯಾಗಿರುವ ಗಣಿತ ವಿಷಯವನ್ನು ಮರೆತಿದ್ದಾರೆ. ಇದನ್ನರಿತ ನಿವೃತ್ತ ಶಿಕ್ಷಕ ಯಶ್ವಂತರಾವ್‌ ಬಿರಾದಾರ ಶಾಲೆಗೆ ಬಂದು ಗಣಿತ ಬೋಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next