Advertisement
ಬಿ.ಎಡ್. ನಾಲ್ಕು ವರ್ಷಶಿಕ್ಷಕ ವೃತ್ತಿಗೆ ಸೇರಬಯಸುವವರು ಇನ್ನು ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಬಿ.ಎಡ್. ಮಾಡುವುದು ಕಡ್ಡಾಯವಾಗಲಿದೆ. ಈ ನಿಯಮ 2030ರ ಹೊತ್ತಿಗೆ ಜಾರಿಗೆ ಬರಲಿದೆ. ಆದರೆ, ಇಲ್ಲೊಂದು ವಿನಾಯಿತಿ ಇದೆ. ಪದವಿ ಶಿಕ್ಷಣ ಮುಗಿಸಿ ಬಿ.ಎಡ್. ಮಾಡುವವರಿಗೆ ಎರಡು ವರ್ಷಗಳ ಬಿ.ಎಡ್ ವ್ಯಾಸಂಗ ಸಾಕು. ಬಿ.ಎಡ್. ಅನಂತರ ಯಾವುದಾದರೂ ವಿಷಯದಲ್ಲಿ ಪರಿಣತಿ ಪಡೆಯಲು ನಿರ್ಧ ರಿಸಿದರೆ ಅದಕ್ಕೆ ಪ್ರತ್ಯೇಕವಾಗಿ ಒಂದು ವರ್ಷದ ಕೋರ್ಸ್ ಅನ್ನು ಜಾರಿಗೊಳಿಸ ಲಾಗುತ್ತದೆ ಎಂದು ಹೊಸ ನೀತಿಯಲ್ಲಿ ಉಲ್ಲೇಖೀಸಲಾಗಿದೆ. ವಿಶೇಷ ಪ್ರತಿಭೆ ಗಳುಳ್ಳ ವಿದ್ಯಾರ್ಥಿಗಳನ್ನು ಪರಿಪೂರ್ಣತೆ ಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಶಿಕ್ಷಕ ರನ್ನು ತರಬೇತಿಗೊಳಿಸಲು ಸೂಕ್ತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತದೆ.
2030ರಿಂದ ಎರಡು ವರ್ಷಗಳ ಬಿ.ಎಡ್. ಕೋರ್ಸ್‌ಗಳು ಸಂಪೂರ್ಣ ನಿಲುಗಡೆಯಾಗಲಿವೆ. ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್ ಗಳು ಹೊಂದಿರುವ ಕಾಲೇಜುಗಳಲ್ಲಿ ಮಾತ್ರ ಸ್ನಾತಕ ಪದವಿ ಪೂರೈಸಿದವರಿಗೆ ಮಾತ್ರ ಎರಡು ವರ್ಷದ ಬಿ.ಎಡ್.
ಕೋರ್ಸ್ ಮಾಡಲು ಅವಕಾಶವಿರುತ್ತದೆ. ಇನ್ನು, 4 ವರ್ಷಗಳ ಸ್ನಾತಕ ಪದವಿ ಹಾಗೂ ಒಂದು ವರ್ಷದ ಸ್ನಾತಕೋತ್ತರ ಪದವಿ ಪಡೆದವರಿಗೆ ಬಿ.ಎಡ್. 1 ವರ್ಷ ಮಾತ್ರ ಇರಲಿದೆ. ಇದಲ್ಲದೆ 2030ರ ಹೊತ್ತಿಗೆ ಬಿ.ಎಡ್. ಶಿಕ್ಷಣವು ಇನ್ನು, ಬಹು ವಿಷಯ ಬೋಧನಾ ಶಿಕ್ಷಣ ಸಂಸ್ಥೆಗಳಲ್ಲೂ ಲಭ್ಯವಾಗಲಿದೆ. ಶಿಕ್ಷಕರ ಕೌಶಲಾಭಿವೃದ್ಧಿಗಾಗಿ ಬಿಐಟಿಇಗಳಲ್ಲಿ, ಡಯೆಟ್‌ಗಳಲ್ಲಿ ಅಥವಾ ಶಾಲಾ ಸಂಕೀರ್ಣಗಳಲ್ಲಿ ಅಲ್ಪಾವಧಿಯ ಕೋರ್ಸ್‌ಗಳನ್ನು ಆರಂಭಿಸುವು ದಾಗಿ ಶಿಕ್ಷಣ ನೀತಿಯಲ್ಲಿ ಉಲ್ಲೇಖೀಸಲಾಗಿದೆ. ಶಿಕ್ಷಕರ, ಪ್ರಾಧ್ಯಾಪಕರ ವರ್ಗಾವಣೆಗೆ ಲಗಾಮು
ಶಾಲಾ ಶಿಕ್ಷಣವಾಗಲೀ ಉನ್ನತ ಶಿಕ್ಷಣವಾಗಲೀ ಅಲ್ಲಿ ಬೋಧಕ ಮತ್ತು ವಿದ್ಯಾರ್ಥಿಗಳ ನಡುವೆ ವಿಷಯಾಧಾರಿತ ನಂಟು ಬೆಳೆದಿರುತ್ತದೆ. ಶಿಕ್ಷಕರನ್ನಾಗಲೀ ಪ್ರಾಧ್ಯಾಪಕರನ್ನಾಗಲೀ ವರ್ಗಾವಣೆ ಮಾಡಿದಾಗ, ಅದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ, ಯಾವುದೇ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಶಿಕ್ಷಕರನ್ನಾಗಲೀ, ಪ್ರಾಧ್ಯಾಪಕರನ್ನಾಗಲಿ ವರ್ಗಾವಣೆ ಮಾಡುವ ಪದ್ಧತಿಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಹಾಗಾಗಿಯೇ, 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದಕ್ಕೆ ಕಾಯಕಲ್ಪ ನೀಡಲಾಗಿದೆ. ಶಿಕ್ಷಕರ ವರ್ಗಾವಣೆಯನ್ನು ಶೈಕ್ಷಣಿಕ ವರ್ಷಗಳು ಮುಗಿದ ಅನಂತರ ವಷ್ಟೇ ನಡೆಸಲು ಅಥವಾ ಅಂಥ ವರ್ಗಾವಣೆಗಳನ್ನು ಶೈಕ್ಷಣಿಕ ವರ್ಷ ಮುಗಿಯು ವವರೆಗೂ ತಡೆ ಹಿಡಿಯಲು ಅವಕಾಶ ಕಲ್ಪಿಸಲಾಗಿದೆ.
Related Articles
– ಶಿಕ್ಷಕರ ಅರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ 2021ರ ಹೊತ್ತಿಗೆ ರಾಷ್ಟ್ರೀಯ ಕರಡು ಸಿದ್ಧ
– ಬಿ.ಎಡ್. ದಾಖಲಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶ ಪರೀಕ್ಷೆ
– ಗುಣಮಟ್ಟವಿರದ ಸ್ಟಾಂಡ್ ಅಲೋನ್ ಬಿ.ಎಡ್ ಕಾಲೇಜುಗಳ ವಿರುದ್ಧ ಕ್ರಮ
– ಶಿಕ್ಷಕರ ವಿದ್ಯಾಭ್ಯಾಸ ಹಾಗೂ ಉನ್ನತ ವ್ಯಾಸಂಗದ ಉಸ್ತುವಾರಿ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಕೌನ್ಸಿಲ್
(ಎನ್‌ಎಚ್‌ಆರ್‌ಸಿ) ಹೆಗಲಿಗೆ.
– ನಾಲ್ಕು ವರ್ಷಗಳ ಬಿ.ಎಡ್. ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವವರಿಗೆ ಮೆರಿಟ್ ಆಧಾರಿತ ಸ್ಕಾಲರ್‌ಶಿಪ್
– ಉತ್ಕೃಷ್ಟ ಪ್ರತಿಭೆ, ಅನುಭವವುಳ್ಳ ಹಿರಿಯ ಹಾಗೂ ನಿವೃತ್ತ ಶಿಕ್ಷಕರ ಹಿತ ರಕ್ಷಣೆಗಾಗಿ ರಾಷ್ಟ್ರೀಯ ಮಿಷನ್ ಜಾರಿಗೊಳಿಸಲು ತೀರ್ಮಾನ
Advertisement
ವಿಶೇಷ ಚೇತನ ಮಕ್ಕಳಿಗೆ ವಿದ್ಯೆ– ದಿವ್ಯಾಂಗ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕ್ರಮ, ವಿಧಾನಗಳುಳ್ಳ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ. ಆಸಕ್ತ ಶಿಕ್ಷಕರು ಇದರ ಉಪಯೋಗ ಪಡೆದುಕೊಳ್ಳಬಹುದು. ಈ ಸರ್ಟಿಫಿಕೇಟ್ ಕೋರ್ಸ್ ಮುಗಿಸಿದ ಶಿಕ್ಷಕರನ್ನು ವಿಶೇಷ ಶಿಕ್ಷಕರೆಂದು ಕರೆಯಲಾಗುತ್ತದೆ.
– ದಿವ್ಯಾಂಗ ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ಆರಂಭಿಸಲಾಗುತ್ತದೆ.
– ಶ್ರವಣದೋಷವಿರುವ ಮಕ್ಕಳಿಗಾಗಿ ಎನ್‌ಐಒಎಸ್ ವತಿಯಿಂದ ಸಂಜ್ಞಾ ಭಾಷೆಯ ಮೂಲಕ ಶಿಕ್ಷಣ ನೀಡುವ ಕುರಿತಾದ ತರಬೇತಿಯ ರೂಪುರೇಷೆಗಳನ್ನು ರಚಿಸಲಾಗುತ್ತದೆ. ನೇಮಕಾತಿ-ನಿರ್ವಹಣೆಯಲ್ಲಿ ಪಾರದರ್ಶಕತೆ
– ಶಿಕ್ಷಕರ ನೇಮಕಾತಿ, ವರ್ಗಾವಣೆ ಎಲ್ಲವೂ ಕಂಪ್ಯೂಟರೀಕೃತಗೊಳ್ಳಲಿದ್ದು, ಎಲ್ಲ ಪ್ರಕ್ರಿ ಯೆಗಳೂ ಪಾರದರ್ಶಕವಾಗಲಿವೆ.
– ಟಿಇಟಿಯ ಎಲ್ಲ ಹಂತಗಳನ್ನು ಪುನಶ್ಚೇತನಗೊಳಿಸಿ ದಕ್ಷ ಶಿಕ್ಷಕರ ನೇಮಕಾತಿಗೆ ಒತ್ತು
– ತಂತ್ರಜ್ಞಾನ ಆಧಾರದಲ್ಲಿ ಶಿಕ್ಷಕರ ನೇಮಕಾತಿ.
– ವಿಷಯಾಧಾರಿತ ಶಿಕ್ಷಕರ ನೇಮಕಾತಿಯಲ್ಲಿ ಟಿಇಟಿ ಅಥವಾ ಎನ್‌ಟಿಎ ಹಾಗೂ ತರಗತಿಗಳಲ್ಲಿ ಶಿಕ್ಷಕರ ಪರಿಣಾಮಕಾರಿ ಬೋಧನೆ ಆಧಾರದಲ್ಲಿ ನೇಮಕಾತಿಗೆ ಅವಕಾಶ.
– ಜನರಲ್ ಎಜ್ಯುಕೇಶನ್ ಕೌನ್ಸಿಲ್ (ಜಿಇಸಿ) ಅಡಿಯಲ್ಲಿ ಎನ್‌ಸಿಟಿಇಯ ಸ್ವರೂಪವನ್ನು ಬದಲಾಯಿಸಿ, ಶಾಲಾ ಶಿಕ್ಷಣದ ಗುಣ ಮಟ್ಟದ ಮೇಲೆ ಗಮನವಿಡುವಂತೆ ಮಾಡಲಾಗುತ್ತದೆ.
– ಕಾಲಾನುಗತಿಗೆ ತಕ್ಕಂತೆ, ಶಿಕ್ಷಕರು ತಮ್ಮ ವಿಷಯಾಧಾರಿತ ಜ್ಞಾನ, ಬೋಧನಾ ಕೌಶಲ ಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡುವ ಉದ್ದೇಶದಿಂದ, ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಲಾಗುತ್ತದೆ.