Advertisement

ಕುಗ್ಗದೆ ಗೆದ್ದು ಬರಲು ಕಲಿಸಿದರು

11:23 PM Sep 04, 2019 | Team Udayavani |
ಇಂದು ಶಿಕ್ಷಕರ ದಿನಾಚರಣೆ. ನಮ್ಮ ಜೀವನವೆಂಬ ರಥವನ್ನು ಮುನ್ನಡೆಸಲು ಪಾಠ ಕಲಿಸಿದ ಶಿಕ್ಷಕರಷ್ಟೇ ಮಹತ್ತರವಾದ ಸ್ಥಾನವನ್ನು ಕಾಯಕ ಕಲಿಸಿದ ಗುರು ಕೂಡ ಹೊಂದಿದ್ದಾರೆ. ಅಂತಹ ಗುರುಗಳ ಬಗ್ಗೆ ಆಯ್ದ ಕೆಲವರು ನೆನಪಿಸಿಕೊಂಡದ್ದು ಹೀಗೆ…

ಪಿಕಪ್‌ ಚಾಲಕ ಮಹಾಬಲ ಪೂಜಾರಿ – ಪದ್ದು ಪೂಜಾರಿ ದಂಪತಿಯ ಆರು ಪುತ್ರರಲ್ಲಿ ಐದನೆಯವರು ಅಂತಾರಾಷ್ಟ್ರೀಯ ಪದಕ ವಿಜೇತ ವೇಟ್ ಲಿಫ್ಟರ್‌ ವಂಡ್ಸೆ ಚಿತ್ತೂರಿನ ಗುರುರಾಜ್‌.

Advertisement

‘ನಾನು ಆಸ್ಟ್ರೇಲಿಯದ ಗೋಲ್ಡ್ಕೋಸ್ಟ್‌ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ವೇಟ್ಲಿಫ್ಟಿಂಗ್‌ ಸ್ಪರ್ಧೆ ಯಲ್ಲಿ ಬೆಳ್ಳಿ ಪದಕ ಪಡೆಯಲು, ಕುಸ್ತಿಯಲ್ಲಿ ರಾಜ್ಯ ಪದಕ ಪಡೆ ಯಲು ಕಾರಣರಾದವರು ಇಬ್ಬರು ಗುರುಗಳು. ಅವರೇ ನನ್ನ ಜೀವನದ ಮಹತ್ವದ ಮೈಲಿಗಲ್ಲುಗಳಿಗೆ ಕಾರಣರು. ಅವರೇ ಕೊಲ್ಲೂರಿನಲ್ಲಿ ಪಿಯು ವ್ಯಾಸಂಗದ ಸಂದರ್ಭ ಪಾಠ ಮಾಡಿದ ಸುಕೇಶ್‌ ಶೆಟ್ಟಿ ಹೊಸಮಠ ಮತ್ತು ಉಜಿರೆ ಎಸ್‌ಡಿಎಂ ಕಾಲೇಜಿನ ರಾಜೇಂದ್ರ ಪ್ರಸಾದ್‌’ ಗುರುರಾಜ್‌ ಸ್ಮರಿಸಿಕೊಳ್ಳುತ್ತಾರೆ.

ಕ್ರೀಡಾ ಹಿನ್ನೆಲೆಯೇ ಇಲ್ಲದಿದ್ದ ಗುರುರಾಜ್‌ ಅವರನ್ನು ಗುರುತಿಸಿ ಕುಸ್ತಿ ಮತ್ತು ಕಬಡ್ಡಿ ಪಟುವಾಗಿ ಅಭ್ಯಾಸ ಮಾಡಿಸಿ ಸಾಧನೆಗೆ ಮುನ್ನುಡಿ ಬರೆಸಿದವರು ಸುಕೇಶ್‌ ಶೆಟ್ಟಿ. ಕನಸಿನಲ್ಲೂ ಅಂದುಕೊಂಡಿ ರದ ರಾಜ್ಯ ಮಟ್ಟದ ಪದಕದ ಸಾಧನೆ ಅವರಿಂದಾಗಿ ಸಾಧ್ಯವಾಯಿತು. ಇದು ನನ್ನ ಬದುಕಿನಲ್ಲಿ ಕ್ರೀಡಾ ಪಟುವಾಗಿದ್ದುಕೊಂಡು ಉದ್ಯೋಗಿ ಯಾಗಿ ಜೀವನ ನಿರ್ವಹಣೆ ಮಾಡಬಹುದು ಎಂಬ ಅರಿವು ಮೂಡಿಸಿ ದವರು ಅವರು ಎಂದು ಗುರು ರಾಜ್‌ ಹೇಳುತ್ತಾರೆ.

ಅವರ ಗರಡಿಯಲ್ಲಿ ಪಳಗಿ ಹಲವು ಚಿನ್ನ ಗೆಲ್ಲುವುದಕ್ಕೆ ಸಾಧ್ಯ ವಾಯಿತು ಎಂದು ಗುರುರಾಜ್‌ ವಿನೀತರಾಗಿ ಹೇಳಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next