Advertisement
ಜನಪದ ಶೈಲಿಯ ಹಾಡಿಗೆ ಶಿಕ್ಷಕರು ಕೋಲಾಟದೊಂದಿಗೆ ಹೆಜ್ಜೆ ಹಾಕಿದರೆ, ದೃಷ್ಟಿ ವಿಕಲಚೇತನೆ ಕೃತ್ತಿಕಾ ಜಂಗಲಿಮಠ ಅವರು ಧಾರವಾಡ ಗ್ರಾಮೀಣ ಬಿಇಒ ವಿದ್ಯಾ ನಾಡಿಗೇರ ರಚಿಸಿದ ಚುನಾವಣಾ ಜಾಗೃತಿ ಗೀತೆ ಹಾಡಿದರಲ್ಲದೇ ಬಾನ್ಸುರಿ ವಾದನ ಮೂಲಕ ಸಂತ ಶಿಶುನಾಳ ಶರೀಫರ ತತ್ವಪದಗಳನ್ನು ನುಡಿಸಿದರು.
ಸಂಯೋಜಿಸಿದ್ದ ಗೀತೆಗೆ ಶಿಕ್ಷಕಿಯರು ಹೆಜ್ಜೆ ಹಾಕಿದರು. ಮಾದರಿ ಇವಿಎಂ, ವಿವಿಪ್ಯಾಟ್ ಯಂತ್ರಗಳಲ್ಲಿ ಅಣಕು ಮತ ಚಲಾಯಿಸಿದರು. ಮಹದೇವ ಸತ್ತಿಗೇರಿ ನಗೆಹನಿಗಳೊಂದಿಗೆಮತದಾರರನ್ನು ಜಾಗೃತಿ ಗೊಳಿಸಿದರು. ಎಫ್ .ಬಿ. ಕಣವಿ, ಕೀರ್ತಿವತಿ ಮತ್ತು ತಂಡದವರು ಕೋಲಾಟ, ಕಿರು ನಾಟಕ ಪ್ರದರ್ಶಿಸಿದರು. ಶಿಕ್ಷಕ ಸಂಜೀವ್ ಕಾಳೆ ರಚಿಸಿರುವ ಮತದಾರ ಜಾಗೃತಿ ವ್ಯಂಗ್ಯಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಡಿಡಿಪಿಐ ಗಜಾನನ ಮನ್ನಿಕೇರಿ, ತಾಪಂ ಇಒ ಎಸ್.ಎಸ್. ಕಾದೊಳ್ಳಿ, ತಹಶೀಲ್ದಾರ್ ಪ್ರಕಾಶ ಕುದರಿ, ಎ.ಎ.ಖಾಜಿ, ವಿದ್ಯಾ ನಾಡಿಗೇರ ಇನ್ನಿತರರಿದ್ದರು.