ವಿಟ್ಲ: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವ ತ್ರಿವೇಣಿ ಅವರು 2008ರಲ್ಲಿ ಏಮಾಜೆ ಸ.ಕಿ.ಪ್ರಾ. ಶಾಲೆಗೆ ಸಹಶಿಕ್ಷಕಿಯಾಗಿ ನೇಮಕ ಗೊಂಡಿದ್ದರು.
Advertisement
ಇವರು ಹಳೆವಿದ್ಯಾರ್ಥಿಗಳ ಸಹಕಾರದೊಂದಿಗೆ ಉಚಿತ ವಾಹನದ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳ ಸಂಖ್ಯಾವೃದ್ಧಿಗೆ ಕಾರಣಕರ್ತರಾಗಿದ್ದಾರೆ. ದಾನಿಗಳ ಮೂಲಕ ಕಂಪ್ಯೂಟರ್ ಖರೀದಿಸಿ, 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ, ವಿವಿಧ ಸಂಘಸಂಸ್ಥೆಗಳು, ದಾನಿಗಳಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್ ಪುಸ್ತಕ, ಕ್ರೀಡಾ ಸಾಮಗ್ರಿ ಇತ್ಯಾದಿ ಒದಗಿಸಿದ್ದಲ್ಲದೇ ಪೀಠೊಪಕರಣಗಳು, 1.50 ಲಕ್ಷ ರೂ. ವೆಚ್ಚದ ಸಾಮಗ್ರಿಗಳ ಕೊಡುಗೆ ಶಾಲಾ ಪ್ರಾರಂಭೋತ್ಸವದಲ್ಲಿ ಹಸ್ತಾಂತರ, ನರೇಗಾ ಯೋಜನೆಯ 6 ಲಕ್ಷ ರೂ. ವೆಚ್ಚದ ಸುಸಜ್ಜಿತ ಆವರಣಗೋಡೆ, ಕೃಷಿ ಸಮಿತಿ ರಚಿಸಿ 1.71 ಲಕ್ಷ ರೂ. ದಾನಿಗಳಿಂದ ಸಂಗ್ರಹಿಸಿ ಶಾಲಾ ಆವರಣದಲ್ಲಿ 100ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ನೆಟ್ಟು, ಅಕ್ಷರ ಕೈತೋಟ ನಿರ್ಮಿಸಿದ್ದಾರೆ. ಪ್ರತಿಭಾ ಪುರಸ್ಕಾರ, ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ದಾಖಲಿಸಲು ಶ್ರಮ ವಹಿಸಿದ್ದಾರೆ. ಜಿ.ಪಂ. ವತಿಯಿಂದ ಕೃಷಿ ನೀರಾವರಿ ವ್ಯವಸ್ಥೆ, ತಾ.ಪಂ. ವತಿಯಿಂದ ರಂಗಮಂದಿರ ಇತ್ಯಾದಿ ಅಭಿವೃದ್ಧಿ ಕಾರ್ಯ ಮೂಲಕ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಬಂಟ್ವಾಳ: ಅನಂತಾಡಿ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ದೊಡ್ಡ ಕೆಂಪಯ್ಯ ಪ್ರಸ್ತುತ ವರ್ಷದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿ ದ್ದಾರೆ. ಇವರು ಕಳೆದ 18 ವರ್ಷಗಳಿಂದ ಶಿಕ್ಷಕ ವೃತ್ತಿ ಸೇವೆ ನಡೆಸುತ್ತಿದ್ದು, ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾ| ವಡ್ಡರಹಳ್ಳಿ ಗ್ರಾಮದವರು. ಪುತ್ತೂರು ಬೆಳ್ಳಿಪ್ಪಾಡಿ ಸ.ಹಿ.ಪ್ರಾ. ಶಾಲೆಗೆ ಶಿಕ್ಷಕರಾಗಿ ಪ್ರಥಮ ಸೇರ್ಪಡೆ, ಕರ್ವೆಲು ಹಿ.ಪ್ರಾ. ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿಆರ್‌ಪಿಯಾಗಿ, ಪ್ರಸ್ತುತ ಅನಂತಾಡಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಶಾಲೆಯನ್ನು ನಾಡ ದೇಗುಲವಾಗಿ ರೂಪಿಸಿದ್ದಾರೆ.
Related Articles
Advertisement
ಸರಕಾರಿ ಶಾಲೆ ಉಳಿಯಬೇಕು. ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು ಎಂಬ ಆಶಯ ಇವರದು.