Advertisement

ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರ

02:58 PM Sep 06, 2017 | |

ಬಸವನಬಾಗೇವಾಡಿ: ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯಲು ಮತ್ತು ಭಾರತ ದೇಶ ಅಭಿವೃದ್ಧಿ ಪಥದತ್ತ ಸಾಗಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ
ಎಂದು ಕರ್ನಾಟಕ ನಗರ ನೀರು ಸರಬುರಾಜು ಮತ್ತು ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ಮಂಗಳವಾರ ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನೋತ್ಸವ ಸಮಿತಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚಾರಣೆ ಹಾಗೂ ಗುರವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನವನ್ನು ಪ್ರತಿಯೊಬ್ಬರಿಗೂ ಧಾರೆ ಎರೆಯುವಲ್ಲಿ  ಗುರುವಿನ ಪಾತ್ರ ಪ್ರಮುಖವಾಗಿದೆ ಎಂದರು. ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಅದಕ್ಕೆ ಗುರುವಿನ ದೈವ ಇದ್ದಗಾ ಮಾತ್ರ ಸಾಧ್ಯ. ಆತ ತಾನು ಮಾಡಬೇಕೆಂಬ ಸಾಧನೆ ಮತ್ತು ಛಲವನ್ನು ಸಾಧಿಸಲು ಸಾಧ್ಯವಾಗುತ್ತದೆ. ಯಾವುದೇ ಕ್ಷೇತ್ರ ತೆಗೆದುಕೊಂಡರು ಕೂಡಾ ಶಿಕ್ಷಕರ ಮತ್ತು ವೈದ್ಯರ ನಿಸ್ವಾರ್ಥ ಸೇವೆ ಗಣನೀಯವಾಗಿದೆ. ಹೀಗಾಗಿ ಅವರನ್ನು ಪ್ರತಿಯೊಬ್ಬರು ಶಿಕ್ಷಕರನ್ನು ಪೂಜಿಸುತ್ತಾರೆ ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಶಿಕ್ಷಕಿ ಸುಮಂಗಲಾ ಕೊಳೂರ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ ಆ ವ್ಯಕ್ತಿಗೆ ಮುಂದೆ ಗುರಿ ಮತ್ತು ಹಿಂದೆ ಗುರು ಇರಬೇಕು. ಅಂದಾಗ ಮಾತ್ರ ಆ ವ್ಯಕ್ತಿ ಸಮಾಜದಲ್ಲಿ ಏನಾದರು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು. ನಮ್ಮ ನಾಡಿನಲ್ಲಿ ನೆಹರು ಮತ್ತು ಡಾ| ರಾಧಾಕೃಷ್ಣನ್‌ ಸೇರಿದಂತೆ ಅನೇಕ ಮಹಾನ್‌ ನಾಯಕರು ಈ ದೇಶಕ್ಕೆ ತಮ್ಮದೆ ಕೊಡುಗೆ ನೀಡಿದ್ದಾರೆ. ಅಂತವರನ್ನು ನಾವು ನೆನಸಲೇಬೇಕು. ಆದರೆ ಅವರ ಜನ್ಮದಿನವನ್ನು  ಯಾವ ರೀತಿ ಆಚರಣೆ ಮಾಡಬೇಕು ಎಂದು ಆಲೋಚಿಸಿದಾಗ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚಾರಣೆಯಾಗಿ, ಡಾ| ರಾಧಾಕೃಷ್ಣನ್‌ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುವ ಮೂಲಕ ಅವರ ಮಾರ್ಗದಲ್ಲಿ ನಡೆಯಬೇಕು ಎಂದರು. 

ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಿಪಂ ಸದಸ್ಯ ಕಲ್ಲಪ್ಪ ಮಟ್ಟಿ, ತಾನಾಜಿ ನಾಗರಾಳ, ಶಿವಾನಂದ ಅವಟಿ, ಸಂಜೀವ ಕಲ್ಯಾಣಿ, ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಣ್ಣ ಎಸ್‌.ಎಚ್‌, ಆರ್‌.ಎಸ್‌. ತುಂಗಳ, ಪಿ.ಟಿ. ಗೌಡರ, ಎ.ಎಲ್‌. ಗಂಗೂರ, ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ಶಿವಾನಂದ ಮಂಗಾನವರ, ಶರಣಪ್ಪ ಮಾದರ, ಎಂ.ಬಿ. ತೋಟದ, ಆರ್‌.ಜಿ. ಅಳ್ಳಗಿ, ಸಿದ್ದು ಉಕ್ಕಲಿ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಯ್ಯ ಚಿಕ್ಕಮಠ ಸ್ವಾಗತಿಸಿದರು. ಶಿಕ್ಷಕ ಎಚ್‌.ಸಿ. ಬಾರಿಕಾಯಿ ನಿರೂಪಿಸಿದರು. ಶಿಕ್ಷಕಿ ಗಿರಿಜಾ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next