ಉಡುಪಿ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ಕಾರ್ಯಾಗಾರ ಉದ್ಯಾವರ ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಫಾ| ಸ್ಟಾನಿ ಬಿ. ಲೋಬೊ ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದೈ.ಶಿ. ಪರೀಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಮೇ 31ರಂದು ನಿವೃತ್ತಿ ಹೊಂದಿದ ಶೇಖರಗೌಡ ಸಿ. ಪಾಟೀಲ್ ಅವರನ್ನು ಸಂಘದ ಪರವಾಗಿ ಸಮ್ಮಾನಿಸಲಾಯಿತು.
ಉಡುಪಿ ಬಿಇಒ ಮಂಜುಳ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಎಸ್. ಪ್ರಸಕ್ತ ಸಾಲಿನ ಕ್ರೀಡಾ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಉಡುಪಿ ಬಿಆರ್‌ಸಿ ಸಮನ್ವಯಾಧಿಕಾರಿ ಉಮಾ ಪಿ., ಸಂಸ್ಥೆಯ ಮುಖ್ಯ ಶಿಕ್ಷಕಿ ಪುಷ್ಪತಾವ್ರೋ, ಜಿಲ್ಲಾ ದೈ ಶಿ. ಸಂಘದ ಕಾರ್ಯದರ್ಶಿ ಸುದರ್ಶನ ನಾಯಕ್, ಪುಷ್ಪಲತಾ ಎಸ್. ಪಾಟೀಲ್ ಉಪಸ್ಥಿತರಿದ್ದರು.
ದೈ. ಶಿ. ಸಂಘದ ಅಧ್ಯಕ್ಷ ಆಲ್ವಿನ್ ಅಂದ್ರಾದೆ ಸ್ವಾಗತಿಸಿದರು. ಉಡುಪಿ ವಲಯ ದೈ. ಶಿ. ಪರೀಕ್ಷಾಣಾಧಿಕಾರಿ ವಿಶ್ವನಾಥ ಬಾಯರಿ ಪ್ರಾಸ್ತಾ¤ವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ರವೀಂದ್ರ ನಾಯಕ್ ವಂದಿಸಿದರು. ದೈ.ಶಿ. ಶಿಕ್ಷಕ ಗೋಪಾಲ ಶೆಟ್ಟಿ ನಿರೂಪಿಸಿದರು.