Advertisement

Teachers Recruitment: ದ.ಕ., ಉಡುಪಿಯಲ್ಲಿ 675 ಶಿಕ್ಷಕರಿಗೆ ಆದೇಶ ಪತ್ರ

12:27 AM Oct 22, 2023 | Team Udayavani |

ಮಂಗಳೂರು/ಉಡುಪಿ: ಸರಕಾರಿ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ-2022ರ ಸಂಬಂಧಿಸಿದಂತೆ 2023ರ ಮಾ. 8 ರಂದು ಪ್ರಕಟಿಸಲಾದ 1:1 ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಅರ್ಹ ಅಭ್ಯರ್ಥಿಗಳ ಕೌನ್ಸೆಲಿಂಗ್‌ ಶನಿವಾರ ನಡೆಯಿತು.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೌನ್ಸೆ ಲಿಂಗ್‌ಗೆ 489 ಮಂದಿಯಲ್ಲಿ 21 ಮಂದಿ ಗೈರಾಗಿದ್ದು, 468 ಮಂದಿಗೆ ನೇಮಕಾತಿ ಆದೇಶ ನೀಡಲಾಯಿತು.

ಗಣಿತ ಮತ್ತು ವಿಜ್ಞಾನಕ್ಕೆ 189ರಲ್ಲಿ 181 ಸಮಾಜ ವಿಜ್ಞಾನ 201ರಲ್ಲಿ 189, ಇಂಗ್ಲಿಷ್‌ 77 ರಲ್ಲಿ 76 ಗೃರಾಗಿದ್ದರು. ಜೀವಶಾಸ್ತ್ರಕ್ಕೆ ಎಲ್ಲ 20 ಮಂದಿಯ ನೇಮಕಾತಿ ನಡೆದಿದೆ.

ಸರ್ವರ್‌ ಸೇರಿದಂತೆ ತಾಂತ್ರಿಕ ಸಮಸ್ಯೆ, ಯಾವುದೇ ಅಡ್ಡಿಯಿಲ್ಲದೆ ನಿರಾತಂಕವಾಗಿ ನಡೆದಿದೆ. ಒಂದೇ ದಿನ ಎಲ್ಲರ ಮಂದಿಯ ಕನ್ಸೆಲಿಂಗ್‌ ನಡೆದಿರುವುದು ಕೂಡಾ ಸಾಧನೆ ಯಾಗಿದೆ. ಮಧ್ಯಾಹ್ನ ವರೆಗೆ ಸುಮಾರು 100ರಷ್ಟು ಮಂದಿಯದ್ದು ಮಾತ್ರ ಕೌನ್ಸೆಲಿಂಗ್‌ ನಡೆದಿತ್ತು. ಅನಂತರ ವೇಗ ಪಡೆಯಿತು. ರಾತ್ರಿ 8.30ರ ವರೆಗೆ ಕೌನ್ಸೆಲಿಂಗ್‌ ನಡೆಯಿತು ಎನ್ನುತ್ತಾರೆ ಅಧಿಕಾರಿಗಳು.

ಗಣಿತ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಸ್ವಲ್ಪ ಹುದ್ದೆ ಕಡಿಮೆ ಇತ್ತು. ಹುದ್ದೆ ಸಿಗದೆ ಬಾಕಿ ಉಳಿದವರನ್ನು ಉಪನಿರ್ದೇಶಕರ ಕಚೇರಿಯಲ್ಲಿ ವರದಿ ಮಾಡುವಂತೆ ಸೂಚಿಸಲಾಗಿದೆ. ತರಬೇತಿ ನೀಡಿ, ಮುಂದಿನ ದಿನಗಳಲ್ಲಿ ಹುದ್ದೆಗೆ ನಿಯೋಜಿಸಲಾಗುತ್ತದೆ.

Advertisement

“ಸಿ’ ವಲಯದಲ್ಲಿ (ಗ್ರಾಮೀಣ) ಖಾಲಿ ಇರುವ ಹುದ್ದೆಗಳಿಗೆ ನಿಯೋಜಿಸಲಾಗಿದೆ. ಸುಳ್ಯ ಪುತ್ತೂರು ವಿಭಾಗಕ್ಕೆ ಹುದ್ದೆಗಳು ಸ್ವಲ್ಪ ಬಾಕಿಯಾಗಿದ್ದು, ಮಂಗಳೂರು, ಮೂಡುಬಿದಿರೆ, ಬೆಳ್ತಂಗಡಿ, ಬಂಟ್ವಾಳ ತಾಲೂಕಿಗೆ ಸಂಬಂಧಿಸಿದಂತೆ ಖಾಲಿ ಹುದ್ದೆಗಳು ಭರ್ತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ: 207 ಮಂದಿಗೆ ಆದೇಶಪತ್ರ
ಉಡುಪಿ ಜಿಲ್ಲೆಯ ಆಯ್ಕೆ ಪಟ್ಟಿಯಲ್ಲಿದ್ದ 214 ಅಭ್ಯರ್ಥಿಗಳಲ್ಲಿ 207 ಮಂದಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು. ತಾಂತ್ರಿಕ ಕಾರಣದಿಂದ ಇಬ್ಬರು ಅಭ್ಯರ್ಥಿಗಳ ಫ‌ಲಿತಾಂಶ ವಿಳಂಬವಾಗಿದೆ ಮತ್ತು ಐವರು ಗೈರು ಹಾಜರಾಗಿದ್ದರು.

ಗಣಿತ ವಿಜ್ಞಾನ, ಕನ್ನಡ ವಿಷಯದ 87 ಅಭ್ಯರ್ಥಿಗಳಲ್ಲಿ 84 ಮಂದಿಗೆ, ಸಮಾಜ ವಿಜ್ಞಾನ, ಕನ್ನಡ ವಿಷಯದ 96 ಅಭ್ಯರ್ಥಿಗಳಲ್ಲಿ 94 ಮಂದಿಗೆ, ಜೀವಶಾಸ್ತ್ರ, ಕನ್ನಡ ವಿಷಯದ 11 ಅಭ್ಯರ್ಥಿಗಳಲ್ಲಿ 11 ಮಂದಿಗೆ ಹಾಗೂ ಇಂಗ್ಲಿಷ್‌ ವಿಷಯದ 20 ಅಭ್ಯರ್ಥಿಗಳಲ್ಲಿ 18 ಮಂದಿಗೆ ಕೌನ್ಸೆಲಿಂಗ್‌ ಪೂರ್ಣಗೊಂಡ ಅನಂತರದಲ್ಲಿ ನೇಮಕಾತಿ ಆದೇಶ ನೀಡಲಾಯಿತು.ಈ ವೇಳೆ ಡಿಡಿಪಿಐ ಗಣಪತಿ, ಡಯಟ್‌ ಹಿರಿಯ ಅಧಿಕಾರಿಗಳಾದ ಗೋವಿಂದ ಮಡಿವಾಳ, ಡಾ| ಅಶೋಕ್‌ ಕಾಮತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next