Advertisement

ಭೋದನೆ ಬಹಿಷ್ಕರಿಸಿ ಪ್ರತಿಭಟನೆಗಿಳಿದ ಶಿಕ್ಷಕರು

10:20 AM Jul 03, 2019 | Team Udayavani |

ಬ್ಯಾಡಗಿ: ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸದಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ತಾಲೂಕಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಕೈಗೆ ಕಪ್ಪುಪಟ್ಟಿ ಧರಿಸಿ, 6-7 ನೇ ತರಗತಿ ಪಾಠ ಬೋಧನೆ ಬಹಿಷ್ಕರಿಸಿ ಹಠಾತ್‌ ಪ್ರತಿಭಟನೆ ನಡೆಸಿರು.

Advertisement

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆಯ ಮೇರೆಗೆ ಶಿಕ್ಷಕರು ದಿಢೀರ್‌ ನಿರ್ಧಾರ ಕೈಗೊಂಡಿದ್ದು, ಅನುಭವ ಮತ್ತು ಅರ್ಹತೆ ಪರಿಗಣಿಸಿ ವೇತನ ಪರಿಷ್ಕರಣೆ ಮತ್ತು ಪದೋನ್ನತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಶಿಕ್ಷಕರು ದೂರಿದರು.

ಶಿಕ್ಷಕರ ಪ್ರತಿಭಟನೆಯಿಂದಾಗಿ ತಾಲೂಕಿನ ಯಾವುದೇ ಪ್ರಾಥಮಿಕ ಶಾಲೆಗಳಲ್ಲಿ (ಇಂಗ್ಲಿಷ್‌, ಸಮಾಜ, ವಿಜ್ಞಾನ, ಗಣಿತ) ಇನ್ನಿತರ ಪಾಠಗಳು ನಡೆಯದೆ ಮಕ್ಕಳು ಶಾಲೆಯಿಂದ ಹೊರಗುಳಿದರು.

ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಮಹೇಶ್‌ ನಾಯಕ್‌, ಪ್ರಾಥಮಿಕ ಶಾಲೆಯಲ್ಲಿ ನೇಮಕವಾಗಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ರಾಜ್ಯದ ಇಂತಹ ಸುಮಾರು 80 ಸಾವಿರಕ್ಕೂ ಅಧಿಕ ಶಿಕ್ಷಕರು ಪದವೀಧರರಾಗಿದ್ದೇವೆ. ಈ ವರೆಗೂ ನಮ್ಮ ಅನುಭವ ಪಡೆದುಕೊಂಡಿರುವ ಸರ್ಕಾರ 6 ಮತ್ತು 7 ತರಗತಿಗಳಿಗೂ ಪಾಠಗಳನ್ನು ಹೇಳುವಂತೆ ಸೂಚನೆ ನೀಡಿತ್ತು. ಇಲಾಖೆ ಸೂಚನೆ ಮೇರೆಗೆ ಪಾಠಗಳನ್ನು ಹೇಳುತ್ತಿದ್ದಾರೆ. ಪರ್ಯಾಯವಾಗಿ ಪ್ರೌಢಶಾಲೆ ಶಿಕ್ಷಕರಿಂದ ಹಿಡಿದು ಜಿಲ್ಲಾ ಉಪನಿರ್ದೇಶಕವರೆಗೂ ಪದೋನ್ನತಿ ನಿವೃತ್ತಿ ಹೊಂದಿದ ಉದಾಹರಣೆಗಳಿವೆ ಎಂದರು.

ಸರ್ಕಾರಿ ನೌಕರರ ಸಂಘದ ಸದಸ್ಯ ಮಹದೇವ ಕರಿಯಣ್ಣನವರ ಮಾತನಾಡಿ, ಈ ವರೆಗೂ ಪದವೀಧರ ಶಿಕ್ಷಕರನ್ನು ಮನ ಬಂದಂತೆ ದುಡಿಸಿಕೊಂಡು ಇದೀಗ ದಿಢೀರ್‌ ಹಿಂಬಡ್ತಿ ಮಾದರಿಯಲ್ಲಿ ನಮ್ಮ ಸೇವೆಯನ್ನು ಕೇವಲ 1 ರಿಂದ 5 ತರಗತಿಗೆ ಸೀಮಿತಗೊಳಿಸಲಾಗಿದೆ. ರಾಜ್ಯದ ಸುಮಾರು 80 ಸಾವಿರ ಶಿಕ್ಷಕರಿಗೆ ಅನ್ಯಾಯವಾಗಿದ್ದು, ಹೈಸ್ಕೂಲ್ ಕಾಲೇಜ್‌ ಇನ್ನಿತರ ಕಡೆಗಳಿಗೆ ಮುಂಬಡ್ತಿ ನಿರೀಕ್ಷೆಯಲ್ಲಿದ್ದ ನಮ್ಮೆಲ್ಲರ ಆಸೆಗೆ ಇಲಾಖೆ ತಣ್ಣೀರೆರಚಿದೆ ಎಂದು ಆರೋಪಿಸಿದರು.

Advertisement

ಪದವೀಧರ ಶಿಕ್ಷಕ ಶಂಕರ್‌ ಕಿಚಡಿ ಮಾತನಾಡಿ, ನಮ್ಮಲ್ಲಿರುವ ಅನುಭವ ಮತ್ತು ಅರ್ಹತೆ ಎರಡೂ ಇದ್ದರೂ ವೇತನ ಪರಿಷ್ಕರಣೆ ಮತ್ತು ಪದೋನ್ನತಿ ನೀಡಲು ಹಿಂದೇಟು ಹಾಕುತ್ತಿರುವುದು ದುರ್ದೈವದ ಸಂಗತಿ. ಕೂಡಲೇ ನಮ್ಮನ್ನೂ ಪದವೀಧರ ಶಿಕ್ಷಕರೆಂದು ಪರಿಗಣಿಸುವ ಮೂಲಕ ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಮಾತಿನಂತೆ ನಮ್ಮ ವೇತನವನ್ನೂ ಪರಿಷ್ಕರಿಸಿ, ಈಗಾಗಲೇ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ನಿರ್ಧಾರವನ್ನು ಮತ್ತೂಮ್ಮೆ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next