Advertisement
ಪದವಿ ಪೂರೈಸಿರುವ ಹಾಗೂ ಅನುಭವಿ ಶಿಕ್ಷಕರು 2005ರಿಂದ 6-8ನೇ ತರಗತಿಗೆ ಬೋಧಿಸುತ್ತಿದ್ದಾರೆ. ಆದರೆ ಈ ಹಿಂದೆ ಎರಡು ಬಾರಿ 6-8 ನೇ ತರಗತಿಗೆ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಅನುಭವಿ ಹಾಗೂ ಪದವಿ ಶಿಕ್ಷಕರನ್ನು ಈ ವೃಂದಕ್ಕೆ ಸೇರಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮೂರನೇ ಬಾರಿಗೆ ನೇಮಕಾತಿಗೆ ಸರಕಾರ ಮುಂದಾಗಿದ್ದು, ನಮ್ಮನ್ನು ಈ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರೆಂದು ಪರಿಗಣಿಸಲು ಹಿಂದೇಟು ಹಾಕುತ್ತಿದೆ. ಪದವೀಧರ ಶಿಕ್ಷಕರಿಗೆ ವಿಶೇಷ ವೇತನ ಹೆಚ್ಚಳ, ಮುಂಬಡ್ತಿ, ನೇರ ನೇಮಕಾತಿಯಲ್ಲಿ 25:75 ಬದಲಾಗಿ ಸಂಪೂರ್ಣವಾಗಿ ಸೇವಾನಿರತ ಶಿಕ್ಷಕರನ್ನು ಪರಗಣಿಸಬೇಕು. ಮುಂಬಡ್ತಿಗೆ ಇರುವ ಸ್ಪರ್ಧಾತ್ಮಕ ಪರೀಕ್ಷೆ ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. Advertisement
ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರತಿಭಟನೆ
03:40 PM Jun 02, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.