Advertisement

ಅನುದಾನಿತ ಶಿಕ್ಷಕರಿಗೆ ಪಿಂಚಣಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ: ಉಪವಾಸದ ಎಚ್ಚರಿಕೆ

01:53 PM Dec 05, 2020 | sudhir |

ಬಾಗಲಕೋಟೆ: ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಜ. 4ರೊಳಗೆ ಪಿಂಚಣಿ ಸೌಲಭ್ಯ ನೀಡುವಂತೆ ಒತ್ತಾಯಿಸಿ
ಶುಕ್ರವಾರ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಸಿಬ್ಬಂದಿ ಪ್ರತಿಭಟನೆ
ನಡೆಸಿದರು.

Advertisement

ಜಿಲ್ಲಾಡಳಿತ ಕಚೇರಿ ಎದುರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸದರು. ಈ ವೇಳೆ ಜಿಲ್ಲಾಧ್ಯಕ್ಷ ಪಿ.ವೈ. ರಾಠೊಡ ಮಾತನಾಡಿ, 2006ರ ಮೊದಲ ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ನೌಕರರಿಗೆ ಅನುದಾನಕ್ಕೂ ಪೂರ್ವ ಸೇವೆಯನ್ನೂ ಕೇವಲ ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ನೀಡಬೇಕು. 2006ರ ನಂತರ ನೇಮಕವಾಗಿ ವೇತನ ಪಡೆಯುತ್ತಿರುವ ನೌಕರರಿಗೆ ಇದ್ದಂತೆ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅನುದಾನಿತ ಶಾಲಾ ಕಾಲೇಜುಗಳ ನೌಕರರು ತಿಂಗಳ ಸಂಬಳ ತೆಗೆದುಕೊಂಡು ನಿವೃತ್ತರಾಗುತ್ತಿದ್ದಾರೆ. ಹಾಗೂ ಅಕಾಲಿಕ
ಮರಣ ಹೊಂದುವುದರಿಂದ ಅವರ ಕುಟುಂಬಕ್ಕೆ ಪಿಂಚಣಿ ನೀಡದಿರುವುದರಿಂದ ಅವರ ಕುಟುಂಬಗಳು ಕಷ್ಟದಲ್ಲಿ ಜೀವನ
ನಡೆಸುವಂತಾಗಿದೆ. ಪಿಂಚಣಿಯ ಅನ್ಯಾಯ ಸರಿಪಡಿಸಿ ನೌಕರರಿಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು
ಆಗ್ರಹಿಸಿದರು.

ಇದನ್ನೂ ಓದಿ:ಭ್ರಷ್ಟಾಚಾರ ಸಹಿಸಲ್ಲ: ಸಿಬಿಐನಿಂದ ಬಂಧಿಸಲ್ಪಟ್ಟ ಬಿಜೆಪಿ ಕೌನ್ಸಿಲರ್ ಪಕ್ಷದಿಂದ ಅಮಾನತು

ಪಿಂಚಣಿ ಯೋಜನೆಯಲ್ಲಿ ಅನ್ಯಾಯ ಸರಿಪಡಿಸಬೇಕು ಎಂದು ಕಳೆದ ಹತ್ತು ವರ್ಷದಿಂದ ನಮ್ಮ ಸಂಘಟನೆಯಿಂದ ಹೋರಾಟ ಮಾಡಿದರೂ ಈಡೇರದಿರುವುದರಿಂದ ಚಳಿಗಾಲದ ಅಧಿವೇಶನದಲ್ಲಿ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೇವೆ. ಗ್ರಾಪಂ
ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದೇವೆ. ಜ. 4ರೊಳಗಾಗಿ ಬೇಡಿಕೆ
ಈಡೇರಿಸದಿದ್ದರೆ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ತೀರ್ಮಾನಿಸಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನೌಕರರು ಅಹೋರಾತ್ರಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ಸಂಘದ ಕಾರ್ಯದರ್ಶಿ ಬಿ.ಬಿ. ಮುದನಗೌಡ, ಎಂ.ಎಲ್‌ ಬಾಗೆವಾಡಿ, ಎಂ.ಎಸ್‌. ತಳವಾರ, ಎಸ್‌.ಕೆ. ಗಿಡೆ, ಆರ್‌. ಎಚ್‌. ಕಟಗೇರಿ, ರಮೇಶ ಲಮಾಣಿ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next