Advertisement

ವಿದ್ಯಾಸಂಸ್ಥೆ ವಿರುದ್ಧ ಶಿಕ್ಷಕರ ಅಹೋರಾತ್ರಿ ಧರಣಿ

12:09 PM Jul 30, 2019 | Suhan S |

ಭದ್ರಾವತಿ: ನಗರದ ಹುಡ್ಕೋ ಕಾಲೋನಿಯ ಡಾ.ಬಿ.ಆರ್‌ ಅಂಬೇಡ್ಕರ್‌ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ತಮ್ಮ ಮೇಲೆ ಕಿರುಕುಳ ಹೆಚ್ಚಾಗಿದ್ದು, ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದರು.

Advertisement

ಶಾಲೆಯಲ್ಲಿ ಬಹಳಷ್ಟು ಶಿಕ್ಷಕರ ಮೇಲೆ ಮೇಲೆ ಲೈಂಗಿಕ ಆರೋಪ ಹೊರಿಸಿ ಅವರನ್ನು ಅಮಾನತುಗೊಳಿಸಲಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ತನಿಖೆಯಾಗಿರುವುದಿಲ್ಲ. ಅಮಾನತುಗೊಂಡ ಶಿಕ್ಷಕರಿಗೆ ವಾರ್ಷಿಕ ಬಡ್ತಿ ಮತ್ತು ಕಾಲಮಿತಿ ಬಡ್ತಿಯನ್ನೂ ಸಹ ಮಂಜೂರು ಮಾಡಿರುವುದಿಲ್ಲ. ವೇತನವನ್ನೂ ಸಹ ಸರಿಯಾಗಿ ಪಾವತಿ ಮಾಡುತ್ತಿಲ್ಲ. ಇದೇ ರೀತಿ ಅನೇಕ ಪ್ರಕರಣಗಳು ಶಾಲೆಯಲ್ಲಿ ನಡೆಯುತ್ತಿದ್ದು, ಕರ್ತವ್ಯ ನಿರತ ಶಿಕ್ಷಕರ ಮೇಲಿನ ಕಿರುಕುಳ ಹೆಚ್ಚಾಗುತ್ತಿದ್ದು, ಈ ಕುರಿತಂತೆ ಶಾಲೆಗೆ ಬಿಇಒ ಇತ್ತೀಚೆಗೆ ಭೇಟಿ ನೀಡಿದಾಗ ಸಮಸ್ಯೆ ಪರಿಹಾರಕ್ಕೆ ಅವರ ಬಳಿ ಶಿಕ್ಷಕರು ತಮ್ಮ ಅಳಲು ತೋಡಿಕೊಂಡಿದ್ದರು. ಶಿಕ್ಷಣಾಧಿಕಾರಿಗಳು ಸಮಸ್ಯೆ ಪರಿಹರಿಸುವ ಭರವಸೆ ನೀಡಿ ತೆರಳಿದ ನಂತರ ಶಾಲೆಯ ಆಡಳಿತ ಮಂಡಳಿಯವರು ಶಿಕ್ಷಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಕರು ರಕ್ಷಣೆ ಕೋರಿ ಇಲಾಖೆಗೆ ಮನವಿ ಸಲ್ಲಿಸಿ ಜು.26ರಿಂದ ಕರ್ತವ್ಯದಿಂದ ಹೊರಗುಳಿದು ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಂಸ್ಥೆಯ ಮಾನ್ಯತೆಯನ್ನು ತಕ್ಷಣದಿಂದಲೇ ರದ್ದುಗೊಳಿಸಿ ನೋಂದಣಿ ಹಿಂಪಡೆದು ನಮಗೆ ಬೇರೆ ಶಾಲೆಗಳಿಗೆ ವರ್ಗಾಯಿಸಬೇಕು ಎಂದು ಪ್ರತಿಭಟನಾನಿರತರು ಅಹೋರಾತ್ರಿ ಧರಣಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next