Advertisement
ಅವರು ಸೋಮವಾರ ಬಿ.ಸಿ.ರೋಡಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಎಸೆಸೆಲ್ಸಿಯಲ್ಲಿ ಈ ಬಾರಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕಿನ ಪ್ರೌಢಶಾಲಾ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಸಂವಾದದ ವೇಳೆ ಅಳಿಕೆ ಶಾಲಾ ಮುಖ್ಯಶಿಕ್ಷಕ ರಘುನಾಥ್ ಅವರು ಸರಕಾರಿ ಶಾಲೆಗಳ ಸಮಸ್ಯೆಗಳ ಕುರಿತು ಶಾಸಕರ ಗಮನಕ್ಕೆ ತಂದರು. ಸರಕಾರವು ಸಂಖ್ಯೆಗಳ ಆಧಾರದಲ್ಲಿ ಶಿಕ್ಷಕರನ್ನು ನೀಡು ತ್ತಿದ್ದು, ಆದರೆ ಬಹುತೇಕ ಕಡೆ ತರಗತಿಗಿಂತಲೂ ಕಡಿಮೆ ಶಿಕ್ಷಕರು ದುಡಿಯುತ್ತಾರೆ.ಇದರ ಒತ್ತಡದ ನಡುವೆ ಬೇರೆ ಬೇರೆ ತರಬೇತಿಗಳು, ಮುಖ್ಯಶಿಕ್ಷಕರಿಗೆ ಕಚೇರಿ ಕೆಲಸ, ವಿದ್ಯಾರ್ಥಿಗಳನ್ನು ಸ್ಪರ್ಧೆಗಳಿಗೆ ಕರೆದುಕೊಂಡು ಹೋಗುವುದು ಇಂತಹ ಹಲವು ಸವಾಲುಗಳು ಸರಕಾರಿ ಶಿಕ್ಷಕರ ಮೇಲಿದ್ದು, ಇದನ್ನು ನಿಭಾಯಿಸಿ ಪಾಠ ಮಾಡಬೇಕಾಗುತ್ತದೆ. ಸರಕಾರದ ಸುತ್ತೋಲೆಗಳ ಪ್ರಕಾರವೇ ನಾವು ಕೆಲಸ ಮಾಡುತ್ತಿದ್ದು, ಇದರಿಂದ ನಿರಂ ತರತೆಯಲ್ಲೂ ಕೊರತೆ ಬಂದು ವಿದ್ಯಾರ್ಥಿಗಳನ್ನು ನಿಯಂತ್ರಣದ ಲ್ಲಿಟ್ಟುಕೊಳ್ಳುವುದು ಕೂಡ ಕಷ್ಟವಾಗಿದೆ ಎಂದರು. ಶಿಕ್ಷಕರ ಇಂತಹ ಸಮಸ್ಯೆಯನ್ನು ಆಲಿಸಿದ ಶಾಸಕರು, ಇಂತಹ ವಿಚಾರಗಳಲ್ಲಿ ಈಗಿನ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೆಚ್ಚು ಗಂಭೀರರಾಗಿದ್ದು, ಇದನ್ನು ಅವರ ಗಮನಕ್ಕೆ ತಂದು ಪರಿಹರಿ ಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ತರಬೇತಿಗಳನ್ನು ಶಾಲೆ ಪ್ರಾರಂಭದ ದಿನಗಳಲ್ಲೇ ಮುಗಿಸುವ ಕುರಿತು ಸಲಹೆ ನೀಡುವುದಾಗಿ ತಿಳಿಸಿದರು.
Related Articles
ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಕೌನ್ಸೆಲಿಂಗ್ ಮಾಡುವ ಜತೆಗೆ ಪೋಷಕರಿಗೂ ಬುದ್ಧಿವಾದ ಹೇಳುವ ಕುರಿತು ಶಾಸಕರು ಸಲಹೆ ನೀಡಿದರು. ಶಾಲೆಗಳಲ್ಲಿ ಪೋಷಕರ ಸಭೆಗಳನ್ನಿಟ್ಟಾಗ ಬೆರಳೆಣಿಕೆಯ ಪೋಷಕರು ಮಾತ್ರ ಬರುತ್ತಾರೆ ಎಂದು ಶಿಕ್ಷಕರು ಆರೋಪಿಸಿದರು. ಇಂತಹ ತೊಂದರೆಗಳಿದ್ದರೆ ಎಸ್‌ಡಿಎಂಸಿ ಸಮಿತಿಯನ್ನು ಸಭೆ ಕರೆದು ಚರ್ಚಿಸೋಣ ಎಂದರು.
Advertisement
ಗಮನಕ್ಕೆ ತನ್ನಿ“ಶಾಲೆಗಳಲ್ಲಿ ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತನ್ನಿ. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುವ ಯಾವುದೇ ಕೆಲಸವನ್ನು ತಾನು ಸಹಿಸುವುದಿಲ್ಲ. ಆದರೆ ಫಲಿತಾಂಶ ಮಾತ್ರ ಹೆಚ್ಚಳವಾಗಲೇಬೇಕು’ ಎಂದು ಶಿಕ್ಷಕರಿಗೆ ಸೂಚಿಸಿದರು. ಸಿದ್ಧಕಟ್ಟೆ ಶಾಲಾ ಮುಖ್ಯಶಿಕ್ಷಕ ರಮಾನಾಂದ ಅವರು ಫಲಿತಾಂಶ ಹೆಚ್ಚಳದ ಕುರಿತು ಎಲ್ಲ ಶಿಕ್ಷಕರ ಪರವಾಗಿ ಭರವಸೆ ನೀಡಿದರು. ಪಟ್ಟಿ ನೀಡುವಂತೆ ಸೂಚನೆ
ಶಾಲೆಗಳ ಮೂಲಸೌಕರ್ಯಗಳ ಕೊರತೆ, ಪ್ರಾಕೃತಿಕ ವಿಕೋಪಗಳ ಹಾನಿ ಮೊದಲಾದ ವಿಚಾರಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಶಾಸಕರ ಗಮನಕ್ಕೆ ತಂದರು. ಶಾಲೆಗಳ ಕಂಪ್ಯೂಟರ್ ಕೊರತೆಯ ಕುರಿತು ಪಟ್ಟಿ ನೀಡು ವಂತೆ ಶಾಸಕರು ತಿಳಿಸಿದರು. ಅತಿಥಿ ಶಿಕ್ಷಕರಿಗೆ ಗೌರವಧನವಿಲ್ಲ!
ಸರಕಾರಿ ಶಾಲೆಗಳ ಶಿಕ್ಷಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರಕಾರವು ಪ್ರತಿ ಶಾಲೆಗಳಿಗೆ ಗೌರವ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದೆ. ಅವರ ಕಡಿಮೆ ವೇತನದಲ್ಲೂ ಉತ್ತಮ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಗೌರವಧನಕ್ಕೆ ಅನುದಾನವೇ ಬಂದಿಲ್ಲ ಎಂದು ಶಿಕ್ಷಕರೊಬ್ಬರು ಶಾಸಕರಿಗೆ ತಿಳಿಸಿದರು. ಈ ಕುರಿತು ಸಂಬಂಧಪಟ್ಟವರ ಜತೆ ಚರ್ಚೆಸುವುದಾಗಿ ಶಾಸಕರು ಭರವಸೆ ನೀಡಿದರು.