Advertisement

ಅಕ್ಷರ ಕ್ರಾಂತಿಗೆ ಶಿಕ್ಷಕರು ಶ‹ಮಿಸಬೇಕು: ಡಿಸಿಎಂ

03:44 PM Sep 06, 2018 | |

ಕೊರಟಗೆರೆ: ದೇಶ ಆರ್ಥಿಕ ಅಭಿವೃದ್ಧಿಯ ಕ್ರಾಂತಿಯಾಗಬೇಕಾದರೆ ಶೈಕ್ಷಣಿಕ ಕ್ರಾಂತಿಯಿಂದ ಮಾತ್ರಸಾಧ್ಯ ಶಿಕ್ಷಕರು ಹೆಚ್ಚಿನ ಜವಾಬ್ದಾರಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಉಪಮುಖ್ಯಮಂತ್ರಿ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Advertisement

ಪಟ್ಟಣದ ಮಾರುತಿ ಕಲ್ಯಾಣಮಂದಿರದಲ್ಲಿ ಸಾರ್ವಜನಿಕರ ಶಿಕ್ಷಣ ಇಲಾಖೆ, ಮಧುಗಿರಿ ಶೈಕ್ಷಣಿಕ ಜಿಲ್ಲೆ ಹಾಗೂ ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಆಯೋಜಿಸಿದ್ದ ಡಾ.ಎಸ್‌. ರಾಧಾಕೃಷ್ಣನ್‌ ಅವರ 131ನೇ ಜಯಂತಿ ಮತ್ತು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಬಿಇಒ ಕಚೇರಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.  ಸ್ವಾತಂತ್ರ್ಯಪೂರ್ವದಲ್ಲಿ ಶೇ.12 ರಷ್ಟಿದ್ದ ಸಾಕ್ಷರತೆ ಸ್ವಾತಂತ್ರ್ಯ ಬಂದು 72 ವರ್ಷಗಳ ನಂತರ ಶೇ.80 ರಷ್ಟಾಗಿದೆ ಎಂದರು.

 ವರ್ಗಾವಣೆ ನೀತಿ ಮಾರ್ಪಾಡಾಗಲಿ: ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಮಾತನಾಡಿ, ಸರ್ಕಾರ ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಶಿಕ್ಷಕರಿಗೆ ಅನಾನುಕೂಲವಾಗದ ಅನುಕೂಲವಾಗುವ ರೀತಿಯಲ್ಲಿ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ವಿಧಾನ ಪರಿಷತ್‌ ಸದಸ್ಯ ವೈ.ಎಚ್‌. ನಾರಾಯಣಸ್ವಾಮಿ ಮಾತನಾಡಿದರು. ಜಿಪಂ ಸದಸ್ಯರಾದ ಪ್ರೇಮಾ, ಶಿವರಾಮಯ್ಯ, ಜೆ.ಜೆ. ರಾಜಣ್ಣ, ಕೆಂಚಮಾರಯ್ಯ, ಮಾಜಿ ಸದಸ್ಯ ಪಿ.ಎನ್‌. ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಕೆಂರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಸದಸ್ಯ ಟಿ.ಸಿ.ರಾಮಯ್ಯ, ಪ ಪಂ ಸದಸ್ಯ ಎ.ಡಿ. ಬಲರಾಮಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ದಿವ್ಯಗೋಪಿನಾಥ್‌, ಉಪವಿಭಾಗಾಧಿಕಾರಿ ಡಾ.ವೆಂಟೇಶಯ್ಯ, ತಹಶೀಲ್ದಾರ್‌ ಎಂ.ನಾಗರಾಜು, ಡಿಡಿಪಿಐ ಕೆ.ವಿ.ರವಿಶಂಕರ್‌, ಇಓ. ಶಿವಪ್ರಸಾದ್‌, ಬಿಇಒ ಎಚ್‌.ಎಸ್‌.ಚಂದ್ರಶೇಖರ್‌, ಬಿಆರ್‌ಸಿ ಸುರೇಂದ್ರನಾಥ್‌ ಉಪಸ್ಥಿತರಿದ್ದರು

ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ದೇಶದ ಪ್ರಪ್ರಥಮ ಶಿಕ್ಷಕರು ವಿದ್ಯಾಧಾತರು ಆದ ಸಾವಿತ್ರಿ ಬಾಯಿ ಪುಲೆ ಮಹಿಳಾ
ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಶ್ರಮಿಸುವ ಮೂಲಕ ಮಹಿಳಾ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿನಿಧ್ಯ ನೀಡಿದ ಅವರು
ಮಹಿಳಾ ಶಿಕ್ಷಕಿಯರಿಗೆ ಆದರ್ಶವಾಗಿದ್ದು ಸಾವಿತ್ರಿಬಾಪುಲೆ ಹೆಸರಿನಲ್ಲಿ ವೈಯಕ್ತಿಕವಾಗಿ ಪ್ರತಿ ವರ್ಷ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮಹಿಳಾ ಶಿಕ್ಷಕಿಯನ್ನು ಆಯ್ಕೆ ಮಾಡಿ ಪ್ರಶಸ್ತಿಯೊಂದಿಗೆ 25 ಸಾವಿರ ನಗದು ನೀಡಿ ಗೌರವಿಸುವಂತೆ ಹೇಳಿದರು.

ಪ್ರಸ್ತುತ ಸಾಲಿನಿಂದ ಪ್ರಶಸ್ತಿ ನೀಡುವಂತೆ ಮಧುಗಿರಿ ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ 25
ಸಾವಿರ ರೂ. ಚೆಕ್‌ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next