Advertisement
ಕಳೆದ 6 ತಿಂಗಳಿಂದ ಶಿಕ್ಷಕರು ವಾಯವ್ಯ ಮತಕ್ಷೇತ್ರದ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ತೆಲಸಂಗ ಮತಗಟ್ಟೆ ವ್ಯಾಪ್ತಿಯಲ್ಲಿ 3 ಪದವಿ ಕಾಲೇಜು, 6 ಪಿಯು ಕಾಲೇಜು, 19 ಪ್ರೌಢಶಾಲೆಗಳಿವೆ. ಇವುಗಳಲ್ಲಿ 186 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಕೇವಲ 44 ಹೆಸರುಗಳಿವೆ.
Related Articles
Advertisement
ಸ್ವತಃ ನಾನೇ ತಹಶೀಲ್ದಾರ್ ಕಚೇರಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಕೊಟ್ಟು ರಸೀದಿ ಪಡೆದಿದ್ದೇನೆ. ಪಟ್ಟಿಯಲ್ಲಿ ಹೆಸರು ಸೇರಿಸಲು ಜನವರಿಯಿಂದ ಪ್ರಯತ್ನಿಸುತ್ತಿದ್ದೇನೆ. ದಾಖಲೆಗಳನ್ನು ಗಂಟು ಕಟ್ಟಿ ಒಂದು ಮೂಲೆಯಲ್ಲಿ ಎಸೆಯಲಾಗಿದೆ. ಮಾಹಿತಿ ಕೇಳಿದರೂ ಇವತ್ತಿನವರೆಗೂ ಒಬ್ಬರ ಮೇಲೊಬ್ಬರು ಹಾಕುತ್ತಿದ್ದಾರೆ. ನೂರಕ್ಕೂ ಹೆಚ್ಚು ಶಿಕ್ಷಕರಿರುವ ಮತಗಟ್ಟೆಗೆ ಕೇವಲ 44 ಜನರ ಹೆಸರು ಬಂದಿವೆ. –ವಿಶ್ವನಾಥ ಪಾಟೀಲ, ಉಪನ್ಯಾಸಕ, ತೆಲಸಂಗ
ಹೆಸರು ಸೇರ್ಪಡೆಗೆ ದಾಖಲೆ ಒದಗಿಸಿರುವ ಬಗ್ಗೆ ಶಿಕ್ಷಕರ ಬಳಿ ಪುರಾವೆಗಳಿವೆ. ಮತದಾನದಿಂದ ಯಾರೊಬ್ಬರೂ ವಂಚಿತರಾಗಬಾರದು. ತಹಶೀಲ್ದಾರ್ ಕಚೇರಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಯಾವ ಉದ್ದೇಶಕ್ಕೆ ಮತದಾರರ ಹೆಸರು ಕೈ ಬಿಟ್ಟಿದ್ದಾರೆ ಎನ್ನುವ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥ ಅಧಿಕಾರಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡುತ್ತೇನೆ. –ಅರುಣ ಶಹಪೂರ, ಬಿಜೆಪಿ ಅಭ್ಯರ್ಥಿ, ವಾಯವ್ಯ ಶಿಕ್ಷಕರ ಮತಕ್ಷೇತ್ರ
ಈಗ ಬಿಡುಗಡೆ ಮಾಡಿರುವುದೇ ಅಂತಿಮ ಮತಪಟ್ಟಿಯಾಗಿದ್ದು. ಶಿಕ್ಷಕರು ಹೆಸರು ಸೇರಿಸಲು ದಾಖಲಾತಿ ಒದಗಿಸಿದ್ದರೂ ಮತಪಟ್ಟಿಯಲ್ಲಿ ಹೆಸರು ಬಿಟ್ಟಿದ್ದು ತಪ್ಪು. ಸದ್ಯ ಈ ವಿಭಾಗವನ್ನು ನೋಡಿಕೊಳ್ಳುತ್ತಿರುವ ಅಧಿಕಾರಿ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು, ಸಮಸ್ಯೆ ಏನಾಗಿದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. -ದುಂಡಪ್ಪ ಕೋಮಾರ, ತಹಶೀಲ್ದಾರ್, ಅಥಣಿ.
ತಹಶೀಲ್ದಾರ್ ಕಚೇರಿ ಅವ್ಯವಸ್ಥೆಯಿಂದ ಇಂದು ನೂರಾರು ಶಿಕ್ಷಕ ಮತದಾರರು ಮತದಾನದಿಂದ ವಂಚಿತರಾಗುತ್ತಿರುವ ವಿಷಯ ನನ್ನ ಗಮನಕ್ಕೂ ಬಂದಿದೆ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. –ನಿಂಗಪ್ಪ ಬನ್ನೂರ, ಅಭ್ಯರ್ಥಿ, ವಾಯವ್ಯ ಶಿಕ್ಷಕರ ಮತಕ್ಷೇತ್ರ
-ಜೆ.ಎಮ್.ಖೊಬ್ರಿ ತೆಲಸಂಗ