Advertisement

ಮನೆ ಮನೆ ಸಮೀಕ್ಷೆಗೆ ಶಿಕ್ಷಕರ ಸಾಥ್‌

05:30 PM Apr 26, 2020 | Suhan S |

ಗದಗ: ಹಲವು ಮುಂಜಾಗ್ರತಾ ಕ್ರಮಗಳ ಮಧ್ಯೆಯೂ ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ಕೋವಿಡ್ 19 ದೃಢಪಟ್ಟಿವೆ. ಇದರಿಂದ ಮತ್ತಷ್ಟು ಕ್ರಮಗಳನ್ನು ಬಿಗಿಗೊಳಿಸಿರುವ ಜಿಲ್ಲಾಡಳಿತ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಪ್ರತಿ ಮನೆ ಸದಸ್ಯರ ಸಂಪೂರ್ಣ ವಿವರ ಸಂಗ್ರಹಿಸಲು ಸಮೀಕ್ಷೆಗೆ ಮುಂದಾಗಿದೆ.

Advertisement

ಜಿಲ್ಲೆಯಲ್ಲಿ ಕೋವಿಡ್ 19  ಸಂಪೂರ್ಣ ನಿವಾರಣೆಗಾಗಿ ಯುದ್ಧೋಪಾದಿಯಲ್ಲಿ ಕ್ರಮಕೈಗೊಂಡ ಜಿಲ್ಲಾಡಳಿತ ನಗರ ಹಾಗೂ ಪಟ್ಟಣ ಪ್ರದೇಶದ ನಿವಾಸಿಗಳ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ. ಸಭೆಯಲ್ಲೂ ಚರ್ಚೆಯಾಗಿತ್ತು: ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಬೆಳಗಾವಿ ವಲಯದ ಐಜಿಪಿ ರಾಘವೇಂದ್ರ ಸುಹಾಸ್‌ ಅವರು ಅಧಿಕಾರಿಗಳೊಂದಿಗೆ ನಡೆಸಿ, ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ ನಗರ ಪ್ರದೇಶದಲ್ಲಿ ಆಶಾ, ಆರೋಗ್ಯ ಸಹಾಯಕಿಯರ ಕೊರತೆಯಿಂದ ಸಮೀಕ್ಷೆ ಅಷ್ಟಾಗಿ ನಡೆಯುತ್ತಿಲ್ಲ. ರಂಗನವಾಡ ಹೊರತುಪಡೆಸಿ, ಅಕ್ಕಪಕ್ಕದ ವಾರ್ಡ್‌ಗಳಲ್ಲೂ ಸಮೀಕ್ಷೆ ನಡೆದಿಲ್ಲ ಎಂಬ ಚರ್ಚೆ ಗಂಭೀರತೆ ಪಡೆದಿತ್ತು. ಇದರ ಬೆನ್ನಲ್ಲೇ ರಾಜ್ಯ ಸರಕಾರ ಸಮೀಕ್ಷೆಗೆ ಆದೇಶಿಸಿದ್ದರಿಂದ ಜಿಲ್ಲಾಡಳಿತ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ಬಳಸಿಕೊಂಡು ಸಮೀಕ್ಷೆಗೆ ಚಾಲನೆ ನೀಡಿದೆ.

ಯಾವ್ಯಾವ ಮಾಹಿತಿ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ ಗಳಲ್ಲಿ ಸುಮಾರು 200 ಜನ ಶಿಕ್ಷಕರು, ಆಶಾ ಕಾರ್ಯಕರ್ತೆ ಅಥವಾ ಆರೋಗ್ಯ ಸಹಾಕಿಯರ ಜೊತೆಗೂಡಿ ಶನಿವಾರ ಸಮೀಕ್ಷೆ ಆರಂಭಿಸಿದ್ದಾರೆ. ಪ್ರತಿಯೊಂದು ಮನೆಗೂ ಭೇಟಿ ನೀಡಿ, ಮನೆಯಲ್ಲಿರುವ ಸದಸ್ಯರ ವಿವರ, ಸಂಪರ್ಕ ಸಂಖ್ಯೆ, ಕಳೆದ ಮೂರು ತಿಂಗಳಲ್ಲಿ ಪ್ರಯಾಣಿಸಿದ ವಿವರ ಹಾಗೂ ಅವರಲ್ಲಿನ ಕಾಯಿಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಮೂಲಕ ಕೋವಿಡ್‌-19 ಅಪಾಯಕ್ಕೆ ಒಳಗಾಗುವವರನ್ನು ಗುರುತಿಸಿ, ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಇದರ ಮೂಲ ಉದ್ದೇಶ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next