Advertisement
ಶಾಲಾ-ಕಾಲೇಜುಗಳು ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಗುರು ವಂದನೆ ಸಲ್ಲಿಸಲು ಈ ಸೇವಾ ವಿಧಾನ ಹೆಚ್ಚು ಪರಿಣಾಮಕಾರಿಯಾಗಿದೆ. ಇದಕ್ಕೆ ಕರ್ನಾಟಕ ಅಂಚೆ ವೃತ್ತವು ಶಿಕ್ಷಕರ ದಿನಕ್ಕೆ “ಗುರುವಂದನ’ ಎಂಬ ವಿಶೇಷ ಪರಿಕಲ್ಪನೆಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಅವರು ಬೆಂಗಳೂರಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ.
Karnatakapost.gov.in ಮುಖಾಂತರ ನಮ್ಮ ದೇಶ ಮಾತ್ರವಲ್ಲದೆ ಹೊರದೇಶದಲ್ಲಿರುವವರೂ ಭಾರತದ ಯಾವುದೇ ಪ್ರದೇಶದಲ್ಲಿರುವ ತಮ್ಮ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಬಹುದಾಗಿದೆ. ಬಹು ಸುಲಭವಾಗಿ, ಬಲು ತ್ವರಿತವಾಗಿ ಕೇವಲ 100 ರೂ. ವೆಚ್ಚದಲ್ಲಿ ಆಗುವ ಈ ಸೇವಾ ಯೋಜನೆಗಾಗಿ https://karnatakapost.gov.in/ guru_vandana ಇದಕ್ಕೆ ಲಾಗಿನ್ ಆಗಿ ಶುಲ್ಕವನ್ನು ಅಂತರ್ಜಾಲ ಬ್ಯಾಂಕಿಂಗ್ ನಮ್ಮ ಇಲಾಖೆಯ ಐಪಿಪಿಬಿ, ಗೂಗಲ್ ಪೇ ಭೀಮ್ ಆ್ಯಪ್, ಫೋನ್ ಪೇ, ಮುಂತಾದ ವಿಧಾನಗಳಿಂದ ಪಾವತಿಸಬಹುದಾಗಿದೆ. ಅದರ ಯುಟಿಆರ್ ಕ್ರಮಸಂಖ್ಯೆಯನ್ನು ಹಾಕಿ ಮುಂದುವರಿದು ಕಳುಹಿಸುವವರ ಪೂರ್ಣ ವಿವರ ನೀಡಬೇಕು. ಚಿತ್ರ ತೆಗೆದು ಕಳುಹಿಸುವ ಅವಕಾಶ
ಹಾಗೇ ಮುಂದುವರಿದಾಗ ಶಿಕ್ಷಕರಿಗೆ ಕಳುಹಿಸಲು ಸುಮಾರು ಮೂರು ವಿಧದ ಆಕರ್ಷಕ ಕೊಡುಗೆಗಳಾದ ಖಾದಿ ಫೇಸ್ ಮಾಸ್ಕ್, ಸೀಡ್ ಪೆನ್ಸಿಲ್ ಹಾಗೂ ಬುಕ್ ಮಾರ್ಕ್‌ಗಳು ವೀಕ್ಷಣೆಗೆ ಲಭ್ಯವಿದ್ದು ಪ್ರತಿಯೊಂದು ಕೊಡುಗೆಯ ಮುಂದೆ ವಿನ್ಯಾಸ ಅಂಕಿ ನಮೂದಿಸಲಾಗಿದೆ. ಇದಕ್ಕೆ ಬೇಕಾದ ಕೊಡುಗೆಗಳನ್ನು ಆರಿಸಿ ಮುಂದುವರಿದಾಗ ಸಂದೇಶ ಕಳುಹಿಸುವ ಆಯ್ಕೆ ಕಾಣಸಿಗುತ್ತದೆ. ಸುಮಾರು ಮೂರು ರೀತಿಯ ಮುದ್ರಿತ ಸಂದೇಶಗಳನ್ನು ಆಯ್ಕೆ ಮಾಡುವ, ಇಲ್ಲವೇ ನಮಗೆ ಬೇಕಾದ ಸಂದೇಶ ಬರೆದು ಅದರ ಫೋಟೋ ತೆಗೆದು ಕಳುಹಿಸುವ ಅವಕಾಶವೂ ಲಭ್ಯವಿದೆ.
Related Articles
ಶಿಕ್ಷಕರ ದಿನದ ಸಾಮಾನ್ಯ ಸಂದೇಶಗಳು ಅಥವಾ ಡಾ| ಎಸ್.ರಾಧಾಕೃಷ್ಣನ್ ಅವರ ಚಿತ್ರ ಹೊತ್ತ ಸಂದೇಶಗಳು ಇಲ್ಲವೇ ಎಪಿಜೆ ಅಬ್ದುಲ್ ಕಲಾಂ ರವರ ಚಿತ್ರ ಹೊತ್ತ ಸಂದೇಶಗಳನ್ನು ಆಯ್ಕೆ ಮಾಡಬಹುದಾಗಿದೆ. ಕೊನೆಯಲ್ಲಿ ಸ್ವೀಕರಿಸುವವರ ಪೂರ್ಣ ವಿವರಗಳನ್ನು ಬರೆಯುವ ವಿಭಾಗವಿದೆ. ಕೇವಲ 100 ರೂ.ಗಳಲ್ಲಿ ಆಕರ್ಷಕ ಕೊಡುಗೆಗಳು, ಗುರುವಂದನೆಯ ಅರ್ಥಪೂರ್ಣ ಸಂದೇಶಗಳನ್ನು ಹೊತ್ತು ವಿಶಿಷ್ಟ ವಿನ್ಯಾಸದ ಗುರುವಂದನ ಲಕೋಟೆಗಳಲ್ಲಿ ತಮ್ಮ ನೆಚ್ಚಿನ ಗುರುಗಳನ್ನು ಸೇರುತ್ತವೆ. ಗುರುಗಳಿಗೆ ಸಲ್ಲಿಸಲು ಕೊಡುಗೆಗಳ ಸೀಮಿತ ದಾಸ್ತಾನು ಲಭ್ಯವಿದ್ದು ಈ ಸೇವಾ ವಿಧಾನದ ಮೂಲಕ ಗುರುವಂದನೆ ಸಲ್ಲಿಸಲು ಸೆ.1ರವರೆಗೆ ಇಲ್ಲವೇ ಕೊಡುಗೆಗಳ ದಾಸ್ತಾನು ಮುಗಿಯುವವರೆಗೆ ಮಾತ್ರ ಚಾಲ್ತಿ ಯಲ್ಲಿರುತ್ತದೆ.
Advertisement
ಮನೆಯಿಂದಲೆ ಗುರುವಂದನೆಗುರುವಂದನಾ ಲಕೋಟೆಯು “ವೇರ್ ಮಾಸ್ಕ್ ಡಿಯರ್ ಟೀಚರ್ ಸ್ಟೇ ಸೇಫ್’ ಎಂಬ ಆಕರ್ಷಕ ಸ್ಲೋಗನ್ ಹಾಗೂ ಚೆಂದದ ಚಿತ್ರ ವಿನ್ಯಾಸ ಹೊಂದಿದ್ದು ತ್ವರಿತ ಅಂಚೆಯ ಮೂಲಕ ಗುರುಗಳನ್ನು ತಲುಪುವಂತೆ ವಿನ್ಯಾಸ ರೂಪಿಸಲಾಗಿದೆ. ನಮ್ಮ ದೇಶದ ಯಾವುದೇ ಮೂಲೆಗೂ ಈ ಗುರು ವಂದನಾ ಕೊಡುಗೆ ಕಳುಹಿಸಿ ಬಹುದಾಗಿದೆ. ಹೊರದೇಶದಲ್ಲಿರುವ ಭಾರತೀಯರು ತಮ್ಮ ಇಲ್ಲಿನ ಬ್ಯಾಂಕ್ ಖಾತೆಯ ಮೂಲಕ ಭಾರತದೊಳ ಗಿರುವ ಗುರುಗಳಿಗೂ ಕೊಡುಗೆ ಕಳುಹಿಸಬಹುದಾಗಿದೆ. ಈ ಮೂಲಕ ಮನೆಯೊಳಗೇ ಕುಳಿತು ತಮ್ಮ ನೆಚ್ಚಿನ
ಶಿಕ್ಷಕರಿಗೆ ಗುರುವಂದನೆ ಸಲ್ಲಿಸಬಹು ದಾದ ಕರ್ನಾಟಕ ಅಂಚೆ ವೃತ್ತದ ಈ ಸೇವಾ ಯೋಜನೆ ಜನಸಾಮಾನ್ಯರಲ್ಲಿ ಸಂಚಲನ ಮೂಡಿಸಿದೆ. ಮತ್ತೂಂದು ಸುತ್ತಿನ ಯತ್ನ
ಮಾಜಿ ರಾಷ್ಟ್ರಪತಿ ದಿ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಭಾರತಾದ್ಯಂತ ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ. ಕೋವಿಡ್-19 ಕಾರಣದಿಂದಾಗಿ ಮನೆಯೊಳಗೆ ಕುಳಿತು ರಾಖೀ ಪೋಸ್ಟ್ ಮುಖಾಂತರ ದೇಶಾದ್ಯಂತದ ಸಹೋದರರಿಗೆ, ಸೈನಿಕರಿಗೆ
ಕಳುಹಿಸುವ ವಿನೂತನ ವಿಧಾನದ ಯಶಸ್ಸಿನ ಬಳಿಕ ಈಗ ಅಂಚೆ ಇಲಾಖೆ ಮತ್ತೂಂದು ಸುತ್ತಿಗೆ ಅಣಿಯಾಗಿದೆ.
-ನವೀನ್ ಚಂದರ್, ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ