ನರೇಗಲ್ಲ: ದೇಶದ ನಿರ್ಮಾಣ ಹಾಗೂ ವಿನಾಶ ಮಾಡುವ ಎರಡೂ ಶಕ್ತಿ ಶಿಕ್ಷಕರಿಗಿದೆ ಎಂದು ಉಪನ್ಯಾಸಕ ಶಿವಮೂರ್ತಿ ಕುರೇರ ಹೇಳಿದರು.
ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ನಿಮಿತ್ತ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಡಾ| ಜಗದೀಶ ಹುಲ್ಲೂರ, ಉಪನ್ಯಾಸಕಿ ಸಜೀಲಾ, ಜ್ಯೋತಿ ಬಿ., ಶೋಭಾ ಎನ್., ಕೆ.ಆರ್. ಪಾಟೀಲ, ಬಸವರಾಜ ಬಳಗಾನೂರಮಠ, ಘನಶ್ಯಾಮ ಜೋಶಿ, ಅನಿಲಕುಮಾರ, ವೀಣಾ ಎಸ್.ಎನ್. ನಸರೀನ್‌ಬಾನು, ಎಚ್. ಅಂಜನಮೂರ್ತಿ ಸೇರಿದಂತೆ ಸಿಬ್ಬಂದಿ ಇದ್ದರು.
ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜು: ಪಟ್ಟಣದ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪ್ರಾಚಾರ್ಯ ವೈ.ಸಿ. ಪಾಟೀಲಪೂಜೆ ಸಲ್ಲಿಸಿದರು. ಉಪನ್ಯಾಸಕ ಎಫ್.ಎನ್. ಹುಡೇದ, ವಿದ್ಯಾಸಾಗರ, ಜಿ.ಎಸ್. ಮಠಪತಿ, ಪಿ.ಎನ್. ಬಳೂಟಗಿ, ಪಿ.ವೈ. ಕರಮುಡಿ, ನಂದೀಶ ಅಚ್ಚಿ, ಎಂ.ಬಿ. ಹಿರೇಮಠ, ಅಮೃತಾ ಮೇಟಿ, ಸುಮಾ ಪಾಟೀಲ, ಸಾವಿತ್ರಿ ಬಂಡಾರಿಮಠ, ಶಿಲ್ಪಾ ಜುಟ್ಲದ, ಆರ್.ವೈ. ಹುಬ್ಬಳ್ಳಿ, ಎಸ್.ಆರ್. ಬಾಗಲತ್ತಿ ಸೇರಿದಂತೆ ಇತರರಿದ್ದರು.
ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ: ಪಟ್ಟಣದ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಐ.ಬಿ. ಒಂಟೇಲಿ, ಎಂ.ವಿ. ಕಡೇತೋಟದ, ಕೆ.ಐ. ಕೋಳಿವಾಡ, ವೀಜಯಲಕ್ಷಿ ¾à ಜಾಧವ, ವಿದ್ಯಾವತಿ ಗ್ರಾಮಪುರೋಹಿತ, ಸುವರ್ಣ ಹಿರೇಮಠ, ಪೂರ್ಣಿಮಾ ಅಂಗಡಿ, ಮಲ್ಲಮ್ಮ ಶಿಳ್ಳಿನ, ಸಾವಿತ್ರಿ ಮಾನ್ವಿ, ಸೀತಾ ಕುಲಕರ್ಣಿ, ಎಸ್.ಎ. ಶಿಂಧೆ ಸೇರಿದಂತೆ ಇತರರಿದ್ದರು.
ಬೂದಿಹಾಳ ಸರ್ಕಾರಿ ಶಾಲೆ: ಸಮೀಪದ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಮುಖ್ಯಶಿಕ್ಷಕ ಡಾ| ಎಸ್.ವಿ. ತಮ್ಮನಗೌಡ್ರ ಪೂಜೆ ಸಲ್ಲಿಸಿದರು. ಸಿ.ಕೆ. ಕೇಸರಿ, ಬಿ.ವಿ. ದೇಸಾಯಿಪಟ್ಟಿ, ಚೇತನಾ ಬೆಳ್ಳಟ್ಟಿ, ಶಿಲ್ಪಾ ಗುಡದೂರಕಲ್ಲ ಇದ್ದರು.