Advertisement

ಕುಷ್ಟಗಿ: ಸಮಗ್ರ ಶೈಕ್ಷಣಿಕ‌ ಅಭಿವೃದ್ದಿಗೆ ಶಿಕ್ಷಣ ಇಲಾಖೆಗೆ 82 ಕೋಟಿ ರೂ. ವಿನಿಯೋಗ

03:12 PM Sep 05, 2022 | Team Udayavani |

ಕುಷ್ಟಗಿ: ತಾಲೂಕಿನ ಸಮಗ್ರ ಶೈಕ್ಷಣಿಕ‌ ಅಭಿವೃದ್ದಿಗೆ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯಿಂದ ಶಿಕ್ಷಣ ಇಲಾಖೆಗೆ 82 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

Advertisement

ಇಲ್ಲಿನ ಕ್ರೈಸ್ತ ದಿ ಕಿಂಗ್ ಶಾಲೆಯ ಸಭಾಂಗಣದಲ್ಲಿ ತಾ.ಪಂ. ಕುಷ್ಟಗಿ, ಜಿ.ಪಂ. ಕೊಪ್ಪಳ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಇಲಾಖೆ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 134ನೇ ಜನ್ಮ‌ದಿನಾಚರಣೆ ಪಯುಕ್ತ ಕುಷ್ಟಗಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ-2022 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ ಇಲಾಖೆಗೆ ಶಾಲಾ ಕಟ್ಟಡ, ಶಾಲೆಗೆ ಹೋಗುವ ರಸ್ತೆ, ಭೋಧನಾ, ಆಟೋಪಕರಣ, ಪ್ರಾಯೋಗಾಲಯಕ್ಕೆ ವಿನಿಯೋಗಿಸಲಾಗಿದೆ. ಕುಷ್ಟಗಿ ತಾಲೂಕು ಶೈಕ್ಷಣಿಕ ಅಭಿವೃದ್ಧಿ, ಸ್ಮಾರ್ಟ ಕ್ಲಾಸ್ ಸೌಲಭ್ಯ ಹಾಗೂ ಉತ್ತಮ ಫಲಿತಾಂಶ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಶಿಕ್ಷಕರೇ ಪ್ರೇರಣೆಯಾಗಿದ್ದಾರೆ. ಶಿಕ್ಷಕರ ಪ್ರೇರಣೆಯಿಂದ 50 ಶಾಲೆಗಳು ಗ್ರಾಮಸ್ಥರ ವಂತಿಗೆಯಲ್ಲಿ ಸ್ಟಾರ್ಟ್ ಕ್ಲಾಸ್ ಕೊಠಡಿ ಹೊಂದಿವೆ. ಇದನೇ ಪ್ರೇರಣೆಯಾಗಿ 150 ಶಾಲೆಗಳಲ್ಲಿ ಸ್ಮಾರ್ಟ ಕ್ಲಾಸ್ ಅಳವಡಿಸಲಾಗಿದೆ ಎಂದರು.

ಬಸವನ ಬಾಗೇವಾಡಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಅಶೋಕ ಹಂಚಲಿ ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ತಹಶಿಲ್ದಾರ ಗುರುರಾಜ್ ಚಲವಾದಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ, ಬಿ.ಆರ್.ಸಿ. ಸಮನ್ವಯಾಧಿಕಾರಿ ಜಗದೀಶ ಎಂ., ದೈಹಿಕ ಶಿಕ್ಷಣ ಪರಿವೀಕ್ಷಕ ಧರ್ಮಕುಮಾರ ಕಂಬಳಿ, ಅಕ್ಷರ ದಾಸೋಹ ಯೋಜನಾಧಿಕಾರಿ ಕೆ.ಶೆರಣಪ್ಪ,  ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಪ್ಪ ಅಂಗಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಪೂಜಾರ, ರಾಜ್ಯ ಶಿಕ್ಷಣಾಧಿಕಾರಿಗಳ‌ ಸಂಘದ ಎಮ್.ಎಮ್.ಗೊಣ್ಣಾಗರ, ಕ್ರೈಸ್ತ ಕಿಂಗ್ ಶಾಲೆಯ ಮುಖ್ಯ ಶಿಕ್ಷಕಿ‌ ಕನ್ಯೀಕಾ ಮೇರಿ, ನೀಲನಗೌಡ ಹೊಸಗೌಡ್ರು, ಕಳಕಮಲ್ಲೇಶ ಭೋಗಿ, ಶಾಕೀರಬಾಬಾ, ಯಮನಪ್ಪ ಚೂರಿ ಮತ್ತಿತ್ತರರಿದ್ದರು.

Advertisement

ನಾಡಗೀತೆ, ರೈತಗೀತೆಯನ್ನು ಶಿಕ್ಷಕರು ಪ್ರಸ್ತುತ ಪಡಿಸಿದರು.ಶರಣಪ್ಪ ತೆಮ್ಮಿನಾಳ ಸ್ವಾಗತಿಸಿದರು.  ಜೀವನಸಾಬ್ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next